ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಸೋಮವಾರ ನಡೆದ ಅಪಘಾತದ ಸಿಸಿಟಿವಿ ಫುಟೇಜ್ ಇಂದು ಸಿಕ್ಕಿದೆ | CCTV footage of accident took place on Mysuru Road Monday made available today ARBಆಟೋರಿಕ್ಷಾದಲ್ಲಿ ಸಿಕ್ಕ ಅದರ ಚಾಲಕನನ್ನು ಹೊರತೆಗೆಯಲು ಅರ್ಧಗಂಟೆಗಿಂತ ಹೆಚ್ಚಿನ ಸಮಯ ಹಿಡಿದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಚಾಲಕನನ್ನು ಕೂಡಲೇ ಅಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

TV9kannada Web Team


| Edited By: Arun Belly

Jun 14, 2022 | 4:05 PM
Bengaluru:  ಸೋಮವಾರ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದ (Satellite Bus Stop) ಬಳಿ ನಡೆದ ಅಫಘಾತದ (accident) ದೃಶ್ಯವನ್ನು (ವಿಡಿಯೋ ಬಲಭಾಗದಲ್ಲಿ) ನಾವು ನಿಮಗೆ ತೋರಿಸಿದ್ದೆವು. ಆದರೆ ಅಪಘಾತ ಹೇಗೆ ನಡೆಯಿತು ಅನ್ನೋದು ಅಲ್ಲಿದ್ದ ಸಿಸಿಟಿವಿಯೊಂದರಲ್ಲಿ (CCTV footage) ದಾಖಲಾಗಿದ್ದು ಅದು ನಮಗೆ ಮಂಗಳವಾರ ಲಭ್ಯವಾಗಿದೆ. ಒಂದು ಬಿ ಎಮ್ ಟಿ ಸಿ ಬಸ್ ಮತ್ತು ಮಿನಿ ಗೂಡ್ಸ್ ಕ್ಯಾರಿಯರ್ ನಡುವೆ ಸಿಕ್ಕುವ ಒಂದು ಆಟೋ ಹೇಗೆ ನುಜ್ಜುಗುಜ್ಜಾಗುತ್ತದೆ ಅನ್ನೋದನ್ನು ನೀವಿಲ್ಲಿ ನೋಡಬಹುದು. ಆಟೋರಿಕ್ಷಾದಲ್ಲಿ ಸಿಕ್ಕ ಅದರ ಚಾಲಕನನ್ನು ಹೊರತೆಗೆಯಲು ಅರ್ಧಗಂಟೆಗಿಂತ ಹೆಚ್ಚಿನ ಸಮಯ ಹಿಡಿದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಚಾಲಕನನ್ನು ಕೂಡಲೇ ಅಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

 


TV9 Kannada


Leave a Reply

Your email address will not be published.