ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ. ಈ ವೇಳೆ ಅದನ್ನು ಓಡಿಸಲು ಪ್ರಯತ್ನಪಟ್ಟವರನ್ನು ಅದು ಅಟ್ಟಾಡಿಸಿದೆ. ಈ ದೃಶ್ಯ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
[embed]https://www.youtube.com/watch?v=WxWa2XaDXg4[/embed]
ಮೈಸೂರು: ಜಿಲ್ಲೆಯ ಹುಣಸೂರು (Hunsur) ತಾಲೂಕಿನ ವೀರನಹೊಸಹಳ್ಳಿ ಟಿಬೆಟ್ ಕ್ಯಾಂಪ್ನಲ್ಲಿ (Tibet Camp) ಕಾಡಾನೆ ಪ್ರತ್ಯಕ್ಷವಾಗಿದೆ. ಕಾಡಿನಿಂದ ನಾಡಿಗೆ ಬಂದ ಕಾಡಾನೆಯನ್ನು ಓಡಿಸಲು ಬೆಂಕಿಯ ಪಂಜು ಹಿಡಿದು ಯುವಕನೊಬ್ಬ ತೆರಳಿದ್ದಾನೆ. ಈ ವೇಳೆ ಆನೆ ತಿರುಗಿ ಬಿದ್ದಿದ್ದು, ಅಟ್ಟಿಸಿಕೊಂಡು ಬಂದಿದೆ. ಬೆಂಕಿಯ ಪಂಜನ್ನು ಬಿಸಾಡಿ ಯುವಕ ಓಡಿ ಬಚಾವಾಗಿದ್ದಾನೆ. ಆನೆ ಕೋಪದಿಂದ ಜಮೀನಿಗೆ ಹಾಕಿದ್ದ ಬೇಲಿ ಕಂಬ ಕಿತ್ತು ಒಗೆದಿದೆ. ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದವರನ್ನು ಅಟ್ಟಾಡಿಸಿದೆ. ಆನೆಯನ್ನು ಮರಳಿ ಕಾಡಿಗೆ ಕಳುಹಿಸಲು ಹರಸಾಹಸ ಪಡಲಾಗಿದೆ.