ಬೆಂಗಳೂರು: ನನಗೆ ಯಾವುದೇ ರೋಗ ಲಕ್ಷಣ ವಿಲ್ಲದಿದ್ದರೂ ಕೊರೊನಾ ಸೋಂಕು ಇರುವುದು ದೃಢವಾಗಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

ನಾನು ಶ್ರೀ.ಶಂತವೇರಿ ಗೋಪಾಲ್ ಗೌಡ ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಲು ಹೋಗಿದ್ದೆ. ಆಂಟಿಜೆನ್ ಟೆಸ್ಟ್ ಇತ್ತು ಅಲ್ಲಿ ನೆಗೆಟಿವ್ ಎಂದು ಬಂದಿತ್ತು. ಆದರೂ ನಾನು ಆರ್‌ಟಿಪಿಸಿಆರ್‌ಗಾಗಿ ಹೋಗಿದ್ದೆನು. ನನಗೆ ಯಾವುದೇ ರೋಗಲಕ್ಷಣಗಳನ್ನು ನಾನು ಹೊಂದಿಲ್ಲದಿದ್ದರೂ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಯಾರು ನನ್ನೊಂದಿಗೆ ಸಂಪರ್ಕಕ್ಕೆ ಬಂದರು ಟೆಸ್ಟ್ ಮಾಡಿಸಿಕೊಳ್ಳಿ, ಪ್ರತ್ಯೇಕವಾಗಿ ಜಾಗೃತರಾಗಿರಿ ಎಂದು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, 480 ಮಂದಿ ಮೃತಪಟ್ಟಿದ್ದಾರೆ. ಏಪ್ರಿಲ್ ನಲ್ಲಿ ಮೃತಪಟ್ಟವರ ವಿವರಗಳನ್ನು ಬಿಬಿಎಂಪಿ ಆರೋಗ್ಯ ಇಲಾಖೆಗೆ ತಡವಾಗಿ ನೀಡುತ್ತಿರುವುದರಿಂದ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,852ಕ್ಕೆ ಏರಿಕೆಯಾಗಿದೆ.

ಇಂದು ಆಸ್ಪತ್ರೆಯಿಂದ 22,584 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.33.66 ಮತ್ತು ಮರಣ ಪ್ರಮಾಣ ಶೇ.1.21ರಷ್ಟಿದೆ. ಟೆಸ್ಟಿಂಗ್ ಇಳಿಕೆಯಾಗಿದ್ದು, ಇಂದು 1,16,238 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

The post ಮೈಸೂರು ಸಂಸದ ಪ್ರತಾಪ್ ಸಿಂಹಗೆ ಕೊರೊನಾ ಪಾಸಿಟಿವ್ appeared first on Public TV.

Source: publictv.in

Source link