ಮೈಸೂರು: ಸಾವಿನಲ್ಲೂ ಬಂದಾದ ದಂಪತಿ: ಇಬ್ಬರನ್ನೂ ಅಕ್ಕಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಿದ ಗ್ರಾಮಸ್ಥರು – villagers perform last rights of couples who died together in mysuru


Couple Death: ಪತಿ ಮನೆಗೆ ಬಾರದ ಹಿನ್ನೆಲೆ ಜಮೀನಿಗೆ ಹೋದ ಗೌರಮ್ಮ ಪತಿಯ ಸಾವು ಕಂಡು ಆಘಾತದಿಂದ ಕುಸಿದು ಬಿದ್ದಿದ್ದಾರೆ.

ಮೈಸೂರು: ಸಾವಿನಲ್ಲೂ ಬಂದಾದ ದಂಪತಿ: ಇಬ್ಬರನ್ನೂ ಅಕ್ಕಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಿದ ಗ್ರಾಮಸ್ಥರು

ರಾಮೇಗೌಡ, ಗೌರಮ್ಮ

ಮೈಸೂರು: ಜಿಲ್ಲೆ ಕೆ.ಆರ್​.ನಗರ ತಾಲೂಕಿನ ಚಂದಗಾಲ ಗ್ರಾಮದಲ್ಲಿ ವೃದ್ಧ ದಂಪತಿ(Couples) ಸಾವಿನಲ್ಲೂ ಒಂದಾಗಿದ್ದಾರೆ. ರಾಮೇಗೌಡ(75), ಗೌರಮ್ಮ(70) ಮೃತ ದಂಪತಿ. ಜಮೀನಿನಲ್ಲಿ ಕೆಲಸ ಮಾಡುವಾಗ ಅಸ್ವಸ್ಥಗೊಂಡು ರಾಮೇಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ(Death). ಪತಿ ಮನೆಗೆ ಬಾರದ ಹಿನ್ನೆಲೆ ಜಮೀನಿಗೆ ಹೋದ ಗೌರಮ್ಮ ಪತಿಯ ಸಾವು ಕಂಡು ಆಘಾತದಿಂದ ಕುಸಿದು ಬಿದ್ದಿದ್ದಾರೆ. ಈ ವೇಳೆ ಕೆಲವರ ಸಹಾಯದಿಂದ ಗೌರಮ್ಮಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಪತಿ ರಾಮೇಗೌಡ ಅಂತ್ಯಸಂಸ್ಕಾರದ ವೇಳೆ ಪತ್ನಿ ಗೌರಮ್ಮ ಮೃತಪಟ್ಟಿದ್ದಾರೆ. ಗ್ರಾಮಸ್ಥರು ಅಕ್ಕಪಕ್ಕದಲ್ಲೇ ವೃದ್ಧ ದಂಪತಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಸಾಲ ಕೊಡಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ಮೈಸೂರು ಜಿಲ್ಲೆ ಹೆಚ್​​.ಡಿ.ಕೋಟೆ ತಾಲೂಕಿನ ಹೊಸಹೊಳಲು ಗ್ರಾಮದ ರೈತ ಲಿಂಗೇಗೌಡ(72) ಎಂಬುವವರು ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದಾರೆ. 4 ಎಕರೆ 13 ಗುಂಟೆ ಜಮೀನು‌ ಹೊಂದಿದ್ದ ರೈತ ಲಿಂಗೇಗೌಡ, ₹2 ಲಕ್ಷ ಸಾಲಕ್ಕೆ ಕಾವೇರಿ ಗ್ರಾಮೀಣ ಬ್ಯಾಂಕ್​ಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಪಡೆದ ಸಾಲ ತೀರಿಸಿಲ್ಲ ಎಂದು ಬ್ಯಾಂಕ್ ಸಾಲ ನಿರಾಕರಿಸಿತ್ತು. ಇದರಿಂದ ಮನನೊಂದು ಬ್ಯಾಂಕ್​​ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡ ರೈತ ಲಿಂಗೇಗೌಡನನ್ನು ಕೆ.ಆರ್​.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದಾರೆ. ಅಂತರಸಂತೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV9 Kannada


Leave a Reply

Your email address will not be published. Required fields are marked *