ಚಂಡೀಗಡ : ಕಳ್ಳರನ್ನು ಹಿಡಿಯುವ ಪೊಲೀಸ್ ಕಳ್ಳತನ ಮಾಡಿ ಆರಕ್ಷಕರ ಕುರಿತು ಇರುವ ಈ ನಂಬಿಕೆಯನ್ನೇ ಸುಳ್ಳಾಗಿಸುವ ಪ್ರಸಂಗವೊಂದು ಪಂಜಾಬ್ ಪೊಲೀಸ್ ಕಾನ್ಸ್‌ಸ್ಟೇಬಲ್ ಮಾಡಿದ್ದಾರೆ.

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸೈಕಲಿನಲ್ಲಿದ್ದ ಕೋಳಿಯ ಮೊಟ್ಟೆಗಳನ್ನು ಹೆಡ್ ಪಿಸಿ ಕಳ್ಳತನ ಮಾಡಿದ್ದಾರೆ. ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಹೀಗೇ ಕಳ್ಳತನ ಮಾಡಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೀಗೆ ಮೊಟ್ಟೆ ಕಳ್ಳತನ ಮಾಡಿರುವ ಪೊಲೀಸಪ್ಪನ ಹೆಸರು ಪ್ರೀತ್ಪಾಲ್ ಸಿಂಗ್. ಈತ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಸೈಕಲ್ ವೊಂದರಲ್ಲಿಡಲಾಗಿದ್ದ ಮೊಟ್ಟೆಗಳನ್ನು ಎಗರಿಸಿ, ತನ್ನ ಪ್ಯಾಂಟ್ ಜೇಬಿನಲ್ಲಿ ಇಳಿಸಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಮವಸ್ತ್ರದಲ್ಲಿದ್ದುಕೊಂಡೆ ಕಳ್ಳತನ ಮಾಡಿದ ಪೊಲೀಸನ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಪ್ರೀತ್ಪಾಲ್ ಸಿಂಗ್ ಮೊಟ್ಟೆ ಕಳ್ಳತನದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಇದು ಪಂಜಾಬ್ ಪೊಲೀಸ್ ಇಲಾಖೆಯ ಗಮನಕ್ಕೂ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಿಸಿ ಪ್ರೀತ್ಪಾಲ್ ಸಿಂಗ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

The post ಮೊಟ್ಟೆ ಕದ್ದ ಪೊಲೀಸ್- ವೀಡಿಯೋ ವೈರಲ್ appeared first on Public TV.

Source: publictv.in

Source link