ಮೊದಲಿನಂತಿಲ್ಲ ಇಶಾಂತ್​ ಬೌಲಿಂಗ್​​ನಲ್ಲಿದ್ದ ಧಮ್​ -ರೇಸ್​​​​​ನಲ್ಲಿ ಆವೇಶ್, ಉಮೇಶ್, ಪ್ರಸಿದ್ಧ್​​ ಕೃಷ್ಣ..


ನ್ಯೂಜಿಲೆಂಡ್​​ ವಿರುದ್ಧದ ಟೆಸ್ಟ್​ ಸಮರ ಮುಗೀತು. ಇನ್ನೇನಿದ್ದರೂ ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿ ಕಡೆ ಗಮನ. ಈ ಟೆಸ್ಟ್​ ಸರಣಿಗೆ ಯಾವೆಲ್ಲಾ ಆಟಗಾರರು ಆಯ್ಕೆ ಆಗ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಆದರೆ ಈ ಆಟಗಾರನಿಗೆ, ತಂಡದಲ್ಲಿ ಸ್ಥಾನವೇ ಇಲ್ಲ ಎಂದು ಹೇಳಲಾಗ್ತಿದೆ. ಯಾರು ಆ ಆಟಗಾರ..? ಬನ್ನಿ ನೋಡೋಣ..

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯನ್ನ ಭಾರತ ಗೆದ್ದು ಬೀಗಿದೆ. ಇದೀಗ ಕೊಹ್ಲಿ ಬಾಯ್ಸ್​ ಚಿತ್ತ, ಸೌತ್​​ ಆಫ್ರಿಕಾ ಪ್ರವಾಸದ ಮೇಲೆ.! ಇದೇ ವಾರದಲ್ಲಿ ಆಫ್ರಿಕಾ ಸರಣಿಗೆ, ತಂಡ ಕೂಡ ಪ್ರಕಟಗೊಳ್ಳಲಿದೆ. ಈ ಹಿಂದಿನ ಮತ್ತು ಪ್ರಸ್ತುತ ನೀಡಿದ ಪ್ರದರ್ಶನದ ಮಾನದಂಡದ ಆಧಾರದ ಮೇಲೆ, ಆಟಗಾರರಿಗೆ ಮಣೆ ಹಾಕೋದಕ್ಕೆ ಆಯ್ಕೆ ಸಮಿತಿ ಸಿದ್ಧತೆ ನಡೆಸಿದೆ. ಆದರೆ ಅನುಭವಿ​ ವೇಗಿ ಇಶಾಂತ್​​ ಶರ್ಮಾ, ಸ್ಥಾನ ಪಡೆಯೋದೇ ಅನುಮಾನ, ಎನ್ನಲಾಗ್ತಿದೆ.

ಕಿವೀಸ್​ ಸರಣಿಯಲ್ಲೂ ಇಶಾಂತ್​ ಫ್ಲಾಪ್​ ಶೋ..!
ಕಿವೀಸ್ ವಿರುದ್ಧದ ಟೆಸ್ಟ್​​ ಸರಣಿಯಲ್ಲೂ, ವೇಗಿ ಇಶಾಂತ್​ ಶರ್ಮಾ ಕಳಪೆ ಪ್ರದರ್ಶನ ಮುಂದುವರೆದಿದೆ. ಟೀಮ್​ ಇಂಡಿಯಾ ಸ್ಪಿನ್ನರ್​​​ಗಳು ಮ್ಯಾಜಿಕ್​ ಸ್ಪೆಲ್​ ಮಾಡ್ತಿದ್ರೆ, ವೇಗಿ ಇಶಾಂತ್​ ಮಾತ್ರ ಪ್ರವಾಸಿ ತಂಡ​​ದ ಬ್ಯಾಟರ್​​​ಗಳ ಸದ್ದಡಗಿಸಲು, ಆಗಲೇ ಇಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ಇಶಾಂತ್, ಒಂದೇ ಒಂದು ವಿಕೆಟ್​ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕಳಪೆ​​​ ಪ್ರದರ್ಶನದಿಂದ ಇಶಾಂತ್, ಎರಡನೇ ಟೆಸ್ಟ್​ ಪಂದ್ಯದಿಂದ ದೂರ ಉಳಿಯಬೇಕಾಯ್ತು.

WTC ಫೈನಲ್, ಇಂಗ್ಲೆಂಡ್​ ವಿರುದ್ಧವೂ ಇಶಾಂತ್​​ ಕಳಪೆ ಬೌಲಿಂಗ್..!
ಕೇವಲ ನ್ಯೂಜಿಲೆಂಡ್​ ಸರಣಿಯಲ್ಲಿ ನೀಡಿದ ಕೆಟ್ಟ ಪ್ರದರ್ಶನದಿಂದ ಮುಂದಿನ ಸರಣಿಗೆ ದೂರ ಆಗ್ತಾರೆ ಎಂದು ಹೇಳಲಾಗ್ತಿಲ್ಲ. ಈ ಹಿಂದೆ ನಡೆದ ವಿಶ್ವ ಟೆಸ್ಟ್​​​ ಚಾಂಪಿಯನ್​​ ಶಿಪ್​ ಫೈನಲ್ ಮತ್ತು ಇಂಗ್ಲೆಂಡ್​​ ವಿರುದ್ಧದ ಸರಣಿಗಳಲ್ಲೂ ಇಶಾಂತ್​, ಕೆಟ್ಟ ಪ್ರದರ್ಶನ ನೀಡಿದ್ದಾರೆ.

WTC ಫೈನಲ್​​​​ನಲ್ಲಿ ಇಶಾಂತ್​ ಪ್ರದರ್ಶನ
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಇಶಾಂತ್​​, ಮೊದಲ ಇನ್ನಿಂಗ್ಸ್​​​ನಲ್ಲಿ 25 ಓವರ್​​ ಬೌಲ್ ಮಾಡಿದ್ರು. ಅದ್ರಲ್ಲಿ ​9 ಓವರ್​​​​​​​​ ಮೇಡಿನ್​​​​​ ಎಸೆದಿದ್ದು​​​​​, 48ರನ್​​​ ನೀಡಿ 3 ವಿಕೆಟ್​ ಪಡೆದಿದ್ರು. ಇನ್ನು 2ನೇ ಇನ್ನಿಂಗ್ಸ್​​​​ನಲ್ಲಿ 6.2 ಓವರ್​​​ ಬೌಲಿಂಗ್​​ ಮಾಡಿ, 2 ಓವರ್​​ ಮೇಡಿನ್​​ ಮಾಡಿದ್ದಾರೆ. 21 ರನ್​ ನೀಡಿ ವಿಕೆಟ್​​​ ಲೆಸ್​​ ಆಗಿದ್ದಾರೆ.

ಅಷ್ಟೆ ಅಲ್ಲ, ಸೆಪ್ಟೆಂಬರ್​​​ನಲ್ಲಿ ನಡೆದ ಇಂಗ್ಲೆಂಡ್​​ ಸರಣಿಯಲ್ಲೂ ಇಶಾಂತ್​ ಶರ್ಮಾದ್ದು, ಇದೇ ಫಜೀತಿ. ಜೊತೆಗೆ ಫೆಬ್ರವರಿಯಲ್ಲಿ ನಡೆದ ಭಾರತ-ಇಂಗ್ಲೆಂಡ್​​​ ಸರಣಿಯಲ್ಲೂ ಫ್ಲಾಪ್​ ಆಗಿದ್ರು. ಹಾಗಂತ ಆ ಸರಣಿಯಲ್ಲಿ ಇಶಾಂತ್​​ರ ಅಂಕಿ-ಅಂಶಗಳೇ ಬಹಿರಂಗಪಡಿಸಿವೆ.

ಇಂಗ್ಲೆಂಡ್​​​​ ವಿರುದ್ಧ ಸರಣಿಗಳಲ್ಲಿ ಇಶಾಂತ್​
ಇಂಗ್ಲೆಂಡ್​ ವಿರುದ್ಧ ನಡೆದ ಎರಡು ಟೆಸ್ಟ್​​ ಸರಣಿಗಳಲ್ಲಿ ಇಶಾಂತ್​ 06 ಪಂದ್ಯಗಳನ್ನಾಡಿದ್ದು, ಬರೋಬ್ಬರಿ 115 ಓವರ್​​​​​ ಎಸೆದು 690 ರನ್​ ನೀಡಿದ್ದಾರೆ. ಆದರೆ ಇಷ್ಟು ಪಂದ್ಯಗಳಲ್ಲಿ ಇಶಾಂತ್​​ ಪಡೆದಿರೋ ವಿಕೆಟ್​​ಗಳು 11 ಮಾತ್ರ.

ಫಿಟ್​​ನೆಸ್​​​​ ಸಮಸ್ಯೆಗೂ ಸಿಲುಕಿದ್ದಾರೆ ಡೆಲ್ಲಿ ಸ್ಟಾರ್..!
ಇಶಾಂತ್​ ಶರ್ಮಾ ಅಂಕಿ-ಅಂಶಗಳು ಮಾತ್ರವಲ್ಲ, ಫಿಟ್​​​​ನೆಸ್​​ ಸಮಸ್ಯೆ ಕೂಡ ಆತನಿಗೆ ಹಿನ್ನಡೆಯಾಗುವಂತೆ ಮಾಡ್ತಿದೆ. ಇದರಿಂದಲೇ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​​​​ಗೆ ಬೆಂಚ್​ ಕಾಯುವಂತೆ ಆಗಿತ್ತು. ಹೀಗಾಗಿ ಸೌತ್​​ ಆಫ್ರಿಕಾ ಟೆಸ್ಟ್​ ಸರಣಿಗೆ ಆಯ್ಕೆ ಮಾಡಬೇಕೆ.? ಬೇಡವೇ ಎಂಬ ಪ್ರಶ್ನೆ ಆಯ್ಕೆ ಸಮಿತಿಯದ್ದಾಗಿದೆ.

ಇಶಾಂತ್​​ ಕಾಂಪಿಟೇಟರ್​​ ಆಗಿದ್ದಾರೆ ಆವೇಶ್, ಉಮೇಶ್, ಪ್ರಸಿದ್ಧ್​​..!
ಹೌದು..! ಈ ಹಿರಿಯ ವೇಗಿಗೆ ಕಾಂಪಿಟೇಟರ್ ಆಗಿ,​​​​ ಯುವ ವೇಗಿಗಳಾದ ಆವೇಶ್​ ಖಾನ್, ಪ್ರಸಿದ್ಧ್​ ಕೃಷ್ಣ ಇದ್ದಾರೆ. ಜೊತೆಗೆ ಉಮೇಶ್​​ ಯಾದವ್​ ಕೂಡ ಪೈಪೋಟಿ ನೀಡ್ತಿದ್ದಾರೆ. ಇನ್ನು ಸಿಕ್ಕ ಅವಕಾಶದಲ್ಲೂ ಉಮೇಶ್​​ ವಿಕೆಟ್​ ಬೇಟೆಯಾಡಿ, ಮೇಲುಗೈ ಸಾಧಿಸ್ತಿದ್ದಾರೆ. ಹಾಗೆಯೇ ಆವೇಶ್​​​, ಪ್ರಸಿದ್ಧ್​​ ಕೃಷ್ಣ ಕೂಡ, ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಇಂತಹ ಸಮಯದಲ್ಲಿ ಇಶಾಂತ್​ ವೈಫಲ್ಯ, ಈ ಮೂವರಿಗೂ ವರದಾನವಾಗೋ ಸಾಧ್ಯತೆ ಇದೆ.

ಮೊದಲಿನಂತಿಲ್ಲ ಇಶಾಂತ್​ ಬೌಲಿಂಗ್​​ನಲ್ಲಿದ್ದ ಧಮ್​.!
ಇದು ನೂರಕ್ಕೆ ನೂರು ಸತ್ಯ. ಈ ಅಜಾನುಬಾಹು ಬೌಲರ್​​​ ಅಂದರೆ, ಕ್ರಿಕೆಟ್​ಗೆ ಕಾಲಿಟ್ಟ ಸಂದರ್ಭದಲ್ಲಿ ದಿಗ್ಗಜ ಬ್ಯಾಟ್ಸ್​​​ಮನ್​​ ಕೂಡ ಹೆದರುತ್ತಿದ್ದರು. ಪರ್ಫೆಕ್ಟ್​ ಲೈನ್​ ಅಂಡ್​​ ಲೆಂಥ್​ ಬೌಲಿಂಗ್​​​​ ಮಾಡಿ, ವಿಕೆಟ್​ ಬೇಟೆಯಾಡ್ತಿದ್ರು. ವಿಕೆಟ್​​ ಪಡೆಯದ ಪಂದ್ಯವೇ ಇರುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇಶಾಂತ್​​ ಪ್ರದರ್ಶನ ತೀವ್ರವಾಗಿ ಕಳೆಗುಂದಿದೆ. ಇದು ಒಂದಲ್ಲ ಒಂದು ದಿನ ತಂಡದಿಂದಲೇ ದೂರು ಮಾಡುವಂತೆ ಮಾಡುತ್ತೆ.

ಒಟ್ಟಿನಲ್ಲಿ ಡೆಲ್ಲಿ ಎಕ್ಸ್​ಪ್ರೆಸ್ ಇಶಾಂತ್ ಶರ್ಮಾ, ಫಿಟ್​​ನೆಸ್​ ಮತ್ತು ಕೆಟ್ಟ​​​ ಪ್ರದರ್ಶನದ ಕಾರಣ, ಮುಂದಿನ ಸೌತ್​​ ಆಫ್ರಿಕಾ ಸರಣಿಗೆ ಆಯ್ಕೆ ಆಗೋದು ಅನುಮಾನ ಎಂದೇ ಹೇಳಲಾಗ್ತಿದೆ. ಹಾಗಾಗಿ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.

News First Live Kannada


Leave a Reply

Your email address will not be published. Required fields are marked *