ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಚೆನ್ನೈ ಸೂಪರ್​ ಕಿಂಗ್ಸ್​ನ ಮೂವರ ವರದಿ ನೆಗೆಟಿವ್​ ಬಂದಿದ್ದು, ತಂಡದ ಆಟಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತೀಚಿಗೆ ತಪಾಸಣೆ ಮಾಡಿಸಿದ ಕೊರೊನಾ ಟೆಸ್ಟ್​ ವರದಿ, ಭಾನುವಾರ ಬಂದಿತ್ತು. ಆಗ ಪಾಸಿಟಿವ್​ ಎಂದು ವರದಿಯಾಗಿತ್ತು. ಇಂದು ಸಂಜೆ 4 ಗಂಟೆಗೆ ಬಿಡುಗಡೆಯಾದ ಮತ್ತೊಂದು ಕೊರೊನಾ ರಿಪೋರ್ಟ್​​ನಲ್ಲಿ ನೆಗೆಟಿವ್ ವರದಿ​ ಬಂದಿದೆ. CSK CEO ಕಾಶಿ ವಿಶ್ವನಾಥನ್​, ಬೌಲಿಂಗ್​ ಕೋಚ್​ ಲಕ್ಷ್ಮಿಪತಿ ಬಾಲಾಜಿ ಮತ್ತು ಆಟಗಾರರನ್ನು ಸಾಗಿಸುವ ಬಸ್​​ನ ಕ್ಲೀನರ್​ಗೆ ಸೋಂಕು ತಗುಲಿತ್ತು ಎಂದು ವರದಿಯಾಗಿತ್ತು. ಇದೀಗ ಎಲ್ಲರ ರಿಪೋರ್ಟ್​​ ನೆಗೆಟಿವ್​ ಬಂದಿದ್ದು, ತಂಡದ ಆಟಗಾರರು ಮತ್ತೆ ಅಭ್ಯಾಸಕ್ಕೆ ಮರಳಿದ್ದಾರೆ.

The post ಮೊದಲು ಕೊವಿಡ್ ಪಾಸಿಟಿವ್​ ವರದಿ- ಇದೀಗ ನೆಗೆಟಿವ್​..? ಸಿಎಸ್​ಕೆ ಕ್ಯಾಂಪ್ ಈಗ ರಿಲ್ಯಾಕ್ಸ್​..! appeared first on News First Kannada.

Source: newsfirstlive.com

Source link