ನವದೆಹಲಿ: ಮೊದಲು ಲಸಿಕೆ ನೀಡಿ,ನಂತರ ಮನ್ ಕೀ ಬಾತ್‍ನಲ್ಲಿ ಮಾತಾಡಿ ಎಂದು ಕಾಂಗ್ರೆಸ್ ಸಂಸದ ರಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ.

ಮೊದಲು ಈ ದೇಶದ ಪ್ರತಿಯೊಬ್ಬರಿಗೂ ಕೊರೊನಾ 19 ಲಸಿಕೆ ತಲುಪುವಂತೆ ಮಾಡಿ. ಬಳಿಕ ನಿಮ್ಮ ಮನ್ ಕೀ ಬಾತ್ ನಡೆಸಿ ಎಂದು ಹೇಳಿದ್ದಾರೆ. ಹಾಗೇ ಕೊರೊನಾ ಲಸಿಕೆ ಬಗೆಗಿನ ಸತ್ಯಗಳು ಎಂಬ, ಗ್ರಾಫ್ ಚಾರ್ಟ್‍ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಕೊರೊನಾ ಲಸಿಕೆ ನೀಡಿದ ಡಾಟಾ ಉಲ್ಲೇಖವಾಗಿರುವುದನ್ನು ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಹುಟ್ಟಿದಾಗಿಂದಲೂ ಅಲ್ಲಿ ಸಿಎಂ ರೇಸ್ ಇದೆ: ಸಚಿವ ಸುಧಾಕರ್

ಮನ್ ಕೀ ಬಾತ್ ಪ್ರಧಾನಿ ಮೋದಿಯವರ ತಿಂಗಳ ರೇಡಿಯೋ ಕಾರ್ಯಕ್ರಮವಾಗಿದೆ. ಪ್ರತಿ ತಿಂಗಳ ಕೊನೇ ಭಾನುವಾರದಂದು ಈ ಕಾರ್ಯಕ್ರಮದ ಮೂಲಕ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ.

ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದೇ ಮೊದಲಿನಿಂದಲೂ ರಾಹುಲ್ ಗಾಂಧಿ ಹೇಳುತ್ತಾ ಬಂದಿದ್ದಾರೆ. ಎರಡನೇ ಅಲೆಯಲ್ಲಿ ಸೋಂಕು ನಿಯಂತ್ರಣದ ಬಗ್ಗೆ ಸರಿಯಾಗಿ ಕ್ರಮ ಕೈಗೊಳ್ಳದೆ ಇದ್ದರೆ, ಮೂರನೇ ಅಲೆ ಇನ್ನಷ್ಟು ಭೀಕರವಾಗಿರಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ.

The post ಮೊದಲು ಲಸಿಕೆ, ನಂತರ ಮನ್ ಕೀ ಬಾತ್: ರಾಹುಲ್ ಕಿಡಿ appeared first on Public TV.

Source: publictv.in

Source link