ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಕೊರೊನಾ ಸೋಂಕಿನಿಂದ ಮೃತಪಟ್ಟ ಬಡವರ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಹಣವನ್ನು ನೀಡೋದಾಗಿ ಸಿಎಂ ಘೋಷಣೆ ಮಾಡಿದ್ದು, ದುಡಿಯುವ ಕೈಗಳನ್ನ ಕಳೆದುಕೊಂಡ ಬಡ ಕುಟುಂಬಗಳಿಗೆ ನೆರವಾಗುವ ಕಾರ್ಯಕ್ರಮಗಳನ್ನು ಸ್ವಾಗತ ಮಾಡುತ್ತೇನೆ ಎಂದು ಡಿಸಿಎಂ ಅರವಿಂದ ಕಾರಜೋಳ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರಜೋಳ ಅವರು, ಕೊರೊನಾದಿಂದ ಬಿಪಿಎಲ್ ಕುಟುಂಬದ ದುಡಿಯುವಂತ ವ್ಯಕ್ತಿಗಳು ಮೃತಪಟ್ಟಿದ್ದರೆ ಅಂಥ ಕುಟುಂಬಗಳಿಗೆ ಸಿಎಂ ಬಿ.ಎಸ್​​. ಯಡಿಯೂರಪ್ಪ ಅವರು ಪರಿಹಾರ ಘೋಷಿಸಿದ್ದಾರೆ. ಅತ್ಯಂತ ಸಾಮಾಜಿಕ ಕಳಕಳಿಯಿಂದ ಸಿಎಂ ಘೋಷಣೆ ಮಾಡಿದ್ದಾರೆ.. ಕುಟುಂಬದಲ್ಲಿ ಮಕ್ಕಳಿದ್ರೆ ಅವರ ಹೆಸರಿನಲ್ಲಿ ಡೆಪಾಸಿಟ್ ಮಾಡಲಾಗುತ್ತದೆ. ಕೊರೊನಾ ಮೊದಲು ಮತ್ತು ಎರಡನೇ ಅಲೆಯಲ್ಲಿ ಮೃತಪಟ್ಟವರೆಲ್ಲರಿಗೂ ಯೋಜನೆ ಅನ್ವಯ ಆಗಲಿದೆ. ಈ ಪರಿಹಾರಕ್ಕೆ 250 ರಿಂದ 300 ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಿಸಿದ ಸಿಎಂ

The post ಮೊದಲ, ಎರಡನೇ ಅಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೂ 1 ಲಕ್ಷ ಪರಿಹಾರ appeared first on News First Kannada.

Source: newsfirstlive.com

Source link