ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ, ಮೊದಲೆರೆಡು ಸೋಲುಗಳಿಂದ ಸೆಮಿಫೈನಲ್ ಭವಿಷ್ಯ ಅಂತತ್ರಕ್ಕೆ ಸಿಲುಕಿದೆ. ಆದ್ರೆ, ಈ ನಡುವೆ ಟೀಮ್ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಬಯೋ ಬಬಲ್ ಮಾನಸಿಕ ಒತ್ತಡ ಕಾರಣ ಎಂದು ಬೂಮ್ರಾ ಹೇಳಿಕೆ ಬೆನ್ನಲ್ಲೇ ಸಾಕಷ್ಟು ಚರ್ಚೆ ಗ್ರಾಸವಾಗಿದೆ.
ಈ ಕುರಿತಾಗಿ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ಟೀಮ್ ಇಂಡಿಯಾ ಸತತ ಪ್ರವಾಸದಲ್ಲಿದೆ ಎಂಬುದನ್ನು ಅರಿತುಕೊಳ್ಳಬೇಕು. ಮೊದಲಿಗೆ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್, ನಂತರ ಇಂಗ್ಲೆಂಡ್ ಪ್ರವಾಸ, ಬಳಿಕ ಐಪಿಎಲ್ ಎಲ್ಲಾ ಮುಗಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಸುಲಭವಲ್ಲ ಎಂದಿದ್ದಾರೆ.
ಇನ್ನು, ಬಹುತೇಕ ತಂಡಗಳ ಪರಿಸ್ಥಿತಿ ಇದೇ ರೀತಿ ಆಗಿದೆ. ಹೀಗಾಗಿ ಮಾನಸಿಕ ಒತ್ತಡ ಎಂಬುದನ್ನೆಲ್ಲಾ ಬದಿಗಿಟ್ಟು, ಧನಾತ್ಮಕವಾಗಿ ಆಲೋಚಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ ಇರ್ಫಾನ್ ಪಠಾಣ್.
ಇದನ್ನೂ ಓದಿ: ‘ಅಶ್ವಿನ್ ಒಬ್ಬ ಚಾಣಾಕ್ಷ ಬೌಲರ್’- ಹಾಡಿ ಹೊಗಳಿದ ಕೊಹ್ಲಿ ಮತ್ತೇನಂದ್ರು?