ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್​ ಕಿಶನ್​, ಮೊದಲ ಎಸೆತದಲ್ಲೇ ಸಿಕ್ಸರ್​ ಸಿಡಿಸಿ ಗಮನ ಸೆಳೆದಿದ್ದಾರೆ. ಭಾರತ ಇನ್ನಿಂಗ್ಸ್​ಗೂ ಮುನ್ನ ಡ್ರೆಸಿಂಗ್ ರೂಮ್​ನಲ್ಲಿ ಕಿಶನ್, ತಾನು ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವುದಾಗಿ ಸಹ ಆಟಗಾರರಿಗೆ ಹೇಳಿದ್ದರಂತೆ.!!

ನುಡಿದಂತೆ ನಡೆದುಕೊಂಡ ಕಿಶನ್​, ಪದಾರ್ಪಣೆ ಪಂದ್ಯವನ್ನ ಅವಿಸ್ಮರಣೀಯವಾಗಿಸಿಕೊಂಡ್ರು. ನಾನು ಡ್ರೆಸ್ಸಿಂಗ್​​ನಲ್ಲಿದ್ದಾಗ, ಬ್ಯಾಟಿಂಗ್​​​​​ಗಿಳಿಯುವ ಮೊದಲ ಎಸೆತದಲ್ಲೇ ಸಿಕ್ಸರ್​ ಸಿಡಿಸುವೆ ಎಂದು ಹೇಳಿದ್ದೆ. ಏಕೆಂದರೆ ನನ್ನ ಮೊದಲ ಏಕದಿನ ಪಂದ್ಯದ ಜೊತೆಗೆ ನನ್ನ ಹುಟ್ಟುಹಬ್ಬ​ ಕೂಡ ಇತ್ತು. ಬೌಲರ್​ ಚೆಂಡನ್ನ ಎಲ್ಲಿಯೇ ಹಾಕಲಿ. ಸಿಕ್ಸರ್​ ಬಾರಿಸಿಯೇ ತೋರಿಸುವೆ ಎಂದು ತಿಳಿಸಿದ್ದೆ. ಸಹ ಆಟಗಾರರು ಕೂಡ, ನನಗೆ ಪ್ರೋತ್ಸಾಹ ನೀಡಿದ್ರು ಎಂದು ಕಿಶನ್​ ಹೇಳಿದ್ದಾರೆ. ಅಬ್ಬರ ಬ್ಯಾಟಿಂಗ್​ ನಡೆಸಿದ ಕಿಶಾನ್, 42 ಎಸೆತಗಳಲ್ಲಿ 59 ರನ್​ ಕಲೆ ಹಾಕಿ, ಟೀಮ್ ಇಂಡಿಯಾದ ಗೇಮ್​ ಚೇಂಜರ್​ ಎನಿಸಿಕೊಂಡ್ರು.

The post ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸ್ತೀನಿ ಅಂತ ಹೇಳಿದ್ದ ಇಶಾನ್ ಕಿಶನ್.. ನುಡಿದಂತೆ ನಡೆದ್ರಾ? appeared first on News First Kannada.

Source: newsfirstlive.com

Source link