ಮೊದಲ ಕೊವಿಡ್ ರೋಗಿ ವುಹಾನ್ ಮಾರುಕಟ್ಟೆಯಲ್ಲಿ ವ್ಯಾಪಾರಿಯಾಗಿದ್ದರು: ವೈರಾಲಜಿಸ್ಟ್ | The first case of Covid 19 was identified at a Wuhan market in China claims top virologist


ಮೊದಲ ಕೊವಿಡ್ ರೋಗಿ ವುಹಾನ್ ಮಾರುಕಟ್ಟೆಯಲ್ಲಿ ವ್ಯಾಪಾರಿಯಾಗಿದ್ದರು: ವೈರಾಲಜಿಸ್ಟ್

ಪ್ರಾತಿನಿಧಿಕ ಚಿತ್ರ

ಬೀಜಿಂಗ್ : ಕೊರೊನಾವೈರಸ್ (Coronavirus) ಸಾಂಕ್ರಾಮಿಕವು ಪ್ರಪಂಚದಾದ್ಯಂತ ವಿನಾಶವನ್ನುಂಟುಮಾಡುವುದನ್ನು ಮುಂದುವರೆಸುತ್ತಿರುವಾಗ, ಚೀನಾದ ವುಹಾನ್ ಮಾರುಕಟ್ಟೆಯಲ್ಲಿ ( Wuhan market) ಕೊವಿಡ್ -19 ರ ಮೊದಲ ಪ್ರಕರಣವನ್ನು ಗುರುತಿಸಲಾಗಿದೆ ಎಂದು ಉನ್ನತ ವೈರಾಲಜಿಸ್ಟ್ ಬಹಿರಂಗಪಡಿಸಿದ್ದಾರೆ. ವೈರಾಲಜಿಸ್ಟ್ (virologist) ಮೈಕೆಲ್ ವೊರೊಬೆಯ(Michael Worobey) ಪ್ರಕಾರ, ವುಹಾನ್‌ನ ಅಕೌಂಟೆಂಟ್ ಕೊವಿಡ್ ತಗುಲಿದ ಮೊದಲ ವ್ಯಕ್ತಿ ಎಂದು ವ್ಯಾಪಕವಾಗಿ ಭಾವಿಸಲಾಗಿದೆ, ಆರಂಭದಲ್ಲಿ ವರದಿ ಮಾಡಿದ್ದಕ್ಕಿಂತ ಎಂಟು ದಿನಗಳ ನಂತರ ರೋಗಲಕ್ಷಣಗಳನ್ನು ಅವರಲ್ಲಿ ಕಂಡುಬಂದಿತ್ತು. ಆದರೆ ಈ ಮೊದಲು ಕುಖ್ಯಾತ ಹುವಾನಾನ್ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಲ್ಲಿ ಪ್ರಕರಣ ಕಂಡುಬಂದಿತ್ತು ಎಂದು ಹೇಳಲಾಗಿತ್ತು. “ಮೂಲ ರೋಗಿಯು ಕಾಡು ಮತ್ತು ಸಾಕುಪ್ರಾಣಿಗಳನ್ನು ಮಾರಾಟ ಮಾಡುವ ವುಹಾನ್ ಮಾರುಕಟ್ಟೆಗೆ ಎಂದಿಗೂ ಹೋಗದ ವ್ಯಕ್ತಿಯಾಗುವುದಕ್ಕಿಂತ ಹೆಚ್ಚಾಗಿ, ಕೊವಿಡ್ -19 ರ ಮೊದಲ ಪ್ರಕರಣವು ಮಾರುಕಟ್ಟೆಯಲ್ಲಿ ಕೆಲಸ ಮಾಡಿದ ಮಹಿಳೆ ಎಂದು ತಿಳಿದುಬಂದಿದೆ” ಎಂದು ವೊರೊಬೆ ವಿಜ್ಞಾನ ಪತ್ರಿಕೆಯಲ್ಲಿ ಗುರುವಾರ ಬರೆದಿದ್ದಾರೆ.

ವೊರೊಬೆಯ ಸಂಶೋಧನೆಯು ಹುವಾನಾನ್ ಮಾರುಕಟ್ಟೆಯು ಆರಂಭಿಕ ಏಕಾಏಕಿ ಮೂಲವಾಗಿದೆ ಮತ್ತು SARS-CoV-2 ವೈರಸ್ ಸೂಪರ್-ಸ್ಪ್ರೆಡಿಂಗ್ ಕಾರಣವಾಗಿದೆ ಎಂದು ಸೂಚಿಸುತ್ತದೆ.

ಹುವಾನಾನ್ ಮಾರುಕಟ್ಟೆ ಅಥವಾ ವುಹಾನ್‌ನಲ್ಲಿನ ಯಾವುದೇ ಜೀವಂತ-ಪ್ರಾಣಿ ಮಾರುಕಟ್ಟೆಯಲ್ಲಿ ಸಂಗ್ರಹಿಸಲಾದ ಯಾವುದೇ ಜೀವಂತ ಸಸ್ತನಿಗಳನ್ನು SARS-CoV-2-ಸಂಬಂಧಿತ ವೈರಸ್‌ಗಳಿಗಾಗಿ ಪರೀಕ್ಷಿಸಲಾಗಿಲ್ಲ.  ಜನವರಿ 1 ರಂದು ಹುವಾನಾನ್ ಮಾರುಕಟ್ಟೆಯನ್ನು ಮುಚ್ಚಲಾಯಿತು ಮತ್ತು ಸೋಂಕುರಹಿತಗೊಳಿಸಲಾಯಿತು ಎಂದು ವೊರೊಬೆ ತನ್ನ ಅಧ್ಯಯನದಲ್ಲಿ ಸೂಚಿಸಿದ್ದಾರೆ.

“ಅದೇನೇ ಇದ್ದರೂ, ಹೆಚ್ಚಿನ ಆರಂಭಿಕ ರೋಗಲಕ್ಷಣದ ಪ್ರಕರಣಗಳು ಹುವಾನಾನ್ ಮಾರುಕಟ್ಟೆಗೆ ಸಂಬಂಧಿಸಿವೆ . ನಿರ್ದಿಷ್ಟವಾಗಿ ರಕೂನ್ ನಾಯಿಗಳನ್ನು ಪಂಜರದಲ್ಲಿ ಇರಿಸಲಾಗಿರುವ ಪಶ್ಚಿಮ ವಿಭಾಗ ಸಾಂಕ್ರಾಮಿಕದ ಜೀವಂತ-ಪ್ರಾಣಿ ಮಾರುಕಟ್ಟೆ ಮೂಲದ ಬಲವಾದ ಪುರಾವೆಗಳನ್ನು ಒದಗಿಸುತ್ತದೆ” ಎಂದು ಅವರು ಹೇಳಿದರು.

ಜಾಗತಿಕ ಕೊವಿಡ್ ಪ್ರಕರಣಗಳು ಹೆಚ್ಚುತ್ತಲೇ ಇವೆ
ಜಾಗತಿಕ ಕೊವಿಡ್ 19 ಪ್ರಕರಣಗಳು 255,994,694 ಪ್ರಕರಣಗಳಿಗೆ ಏರಿದೆ ಮತ್ತು 5,131,102 ಜನರು ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ಆನ್‌ಲೈನ್ ಡ್ಯಾಶ್‌ಬೋರ್ಡ್ ತಿಳಿಸಿದೆ.

ಶುಕ್ರವಾರ ಬೆಳಿಗ್ಗೆ ಅದರ ಇತ್ತೀಚಿನ ಅಪ್‌ಡೇಟ್‌ನಲ್ಲಿ,ಯುನಿವರ್ಸಿಟಿಯ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಇಂಜಿನಿಯರಿಂಗ್ (CSSE) ಪ್ರಸ್ತುತ ಜಾಗತಿಕ ಪ್ರಕರಣ 255,994,694, ಸಾವಿನ ಸಂಖ್ಯೆ 5,131,102 ಮತ್ತು ನೀಡಿರುವ ಒಟ್ಟು ಲಸಿಕೆ ಪ್ರಮಾಣಗಳು 7,596,483,034ರಷ್ಟಿದೆ ಎಂದು ಬಹಿರಂಗಪಡಿಸಿದೆ.

ಇದನ್ನೂ ಓದಿ:  Farm Laws Timeline ಕೃಷಿ ಕಾನೂನು ಅಂಗೀಕಾರದಿಂದ ರದ್ದತಿ ನಿರ್ಧಾರವರೆಗೆ ಏನೆಲ್ಲಾ ನಡೆಯಿತು?

TV9 Kannada


Leave a Reply

Your email address will not be published. Required fields are marked *