ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಅಗ್ನಿಪರೀಕ್ಷೆ -ಮರುಕಳಿಸುತ್ತಾ ಗಾಬಾ ಮೈದಾನದ ಇತಿಹಾಸ?


ಹಾಲಿ ಟೆಸ್ಟ್​ ಚಾಂಪಿಯನ್ಸ್​ ಎದುರು ಇಂದು ಅಖಾಡಕ್ಕಿಳಿಯಲು ರಹಾನೆ ನೇತೃತ್ವದ ಯಂಗ್​ ಇಂಡಿಯಾ ಸಜ್ಜಾಗಿದೆ. ಸ್ಟಾರ್​​ಗಳ ಅಲಭ್ಯತೆಯಲ್ಲಿ ಕಣಕ್ಕಿಳಿತಾ ಇರೋ ಇಡೀ ತಂಡಕ್ಕೆ, ಗಾಬಾ ಟೆಸ್ಟ್​​ ಇನ್ಸ್ಪಿರೇಷನ್​..! ಅದು ಹೇಗೆ..? ಪಂದ್ಯದ ಮೇಲೆ ಈ ಪಾಸಿಟಿವ್​ ಅಂಶ ಎಷ್ಟು ಪರಿಣಾಮ ಬೀರುತ್ತೆ.? ಇಲ್ಲಿದೆ ಡಿಟೇಲ್ಸ್​

YES..! ತುಂಬಾ ಹಿಂದಲ್ಲ.. ಸುಮಾರು 10 ತಿಂಗಳ ಹಿಂದಿನ ಈ ದೃಶ್ಯ, ನಿಮಗೆ ಕಣ್ಣಿಗೆ ಕಟ್ಟಿದಂತಿರಬೇಕು. ಟೀಮ್​ ಇಂಡಿಯಾ ಕಾಂಗರೂ ನಾಡಲ್ಲಿ ಇತಿಹಾಸ ಬರೆದ ಕ್ಷಣ ಇದು. 1988ರ ಬಳಿಕ ಗಾಬಾ ಅಂಗಳದಲ್ಲಿ ಸೋಲೆ ಕಂಡಿಲ್ಲ ಎಂಬ ಅಹಂನಲ್ಲಿದ್ದ ಆಸಿಸ್​​ಗೆ ಅಂದು ಅಂಜಿಕ್ಯಾ ರಹಾನೆ ನೇತೃತ್ವದ ಯಂಗ್​ ಇಂಡಿಯಾ ಸೋಲಿನ ರುಚಿ ತೋರಿಸಿತ್ತು.!

ಅಂದು ಆಸ್ಟ್ರೇಲಿಯಾ, ಇಂದು ನ್ಯೂಜಿಲೆಂಡ್​​, ಸನ್ನಿವೇಶ ಒಂದೇ..!
ಹೌದು..! ಅಂದು ಗಾಬಾ ಅಂಗಳದಲ್ಲಿ ಮೈದಾನಕ್ಕಿಳಿಯೋಕೆ ಮುನ್ನವೇ ಟೀಮ್​ ಇಂಡಿಯಾ, ಹಿನ್ನಡೆ ಅನುಭವಿಸಿತ್ತು. ಇಂಜುರಿ ಕಾರಣದಿಂದ ಸ್ಟಾರ್​​ಗಳ ಸೇವೆ ಕಳೆದುಕೊಂಡಿದ್ದ ಭಾರತ, ಅನಾನುಭವಿ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಇದೀಗ ಇಂದೂ ಅಂತದ್ದೇ ಸನ್ನಿವೇಶ ಎದುರಾಗಿದೆ. ಸ್ಟಾರ್​​ಗಳ ಅಲಭ್ಯತೆಯಲ್ಲಿ ಹಾಲಿ ಟೆಸ್ಟ್​​ ಚಾಂಪಿಯನ್​ ಬಲಿಷ್ಠ ನ್ಯೂಜಿಲೆಂಡ್​ ಪಡೆಯನ್ನ ಭಾರತ ಎದುರಿಸಬೇಕಿದೆ.

ರೋಹಿತ್​, ರಾಹುಲ್​, ವಿರಾಟ್​, ಪಂತ್​, ಬೂಮ್ರಾ, ಶಮಿ… ಟೀಮ್​ ಇಂಡಿಯಾದ ಈ ಟ್ರಂಪ್​ ಕಾರ್ಡ್​​ ಆಟಗಾರರೇ ಕಿವೀಸ್​​ ವಿರುದ್ಧ ಕದನಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಯುವ ಆಟಗಾರರೊಂದಿಗೆ ರಹಾನೆ ಟೀಮ್​ ಕಣಕ್ಕಿಳಿಯಬೇಕಿದೆ. ಈಗಾಗಲೇ ದೇಶಿ ಕ್ರಿಕೆಟ್​ ಹಾಗೂ ವೈಟ್​​ ಬಾಲ್​ ಫಾರ್ಮೆಟ್​ನಲ್ಲಿ ಯುವ ಆಟಗಾರರು, ಸಾಮರ್ಥ್ಯ ಮೆರೆದಿದ್ರೂ ಕೂಡ… ಟೆಸ್ಟ್​​ ಮಾದರಿಯಲ್ಲಿ, ಅದೂ ನ್ಯೂಜಿಲೆಂಡ್​​ ವಿರುದ್ಧ ಆಡೋದು ನಿಜಕ್ಕೂ ಸವಾಲೇ ಎಂದು ಕ್ರಿಕೆಟ್​ ಲೋಕ ಅಭಿಪ್ರಾಯಪಡ್ತಿದೆ. ಆದ್ರೆ, ತಂಡ ಮಾತ್ರ ಆತ್ಮವಿಶ್ವಾಸದ ಅಲೆಯಲ್ಲಿದೆ.

ಅಂದು ಗಬಾ ಮೈದಾನದಲ್ಲಿ ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಿದ್ದೇ, ಇಂದು ರಹಾನೆ ಬಳಗದ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ.. ಆ ಐತಿಹಾಸಿಕ ಗೆಲುವನ್ನೇ ಸ್ಪೂರ್ತಿಯಾಗಿಸಿಕೊಂಡು, ಇಂದು ಕಿವೀಸ್​​ ಪಡೆಯನ್ನ ಎದುರಿಸಲು ಸಜ್ಜಾಗಿದೆ. ಅಂದು ಕಾಂಗರೂ ನಾಡಲ್ಲಿ ವರ್ಕೌಟ್​ ಆದ ಗೇಮ್​ಪ್ಲಾನ್,​ ಇದೀಗ ಕಾನ್ಪುರದ ಅಂಗಳದಲ್ಲಿ ವರ್ಕೌಟ್​ ಆಗುತ್ತಾ.? ಅನ್ನೋದೇ, ಈಗ ಹುಟ್ಟಿರುವ ಕುತೂಹಲಭರಿತ ಪ್ರಶ್ನೆಯಾಗಿದೆ.

The post ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಅಗ್ನಿಪರೀಕ್ಷೆ -ಮರುಕಳಿಸುತ್ತಾ ಗಾಬಾ ಮೈದಾನದ ಇತಿಹಾಸ? appeared first on News First Kannada.

News First Live Kannada


Leave a Reply

Your email address will not be published. Required fields are marked *