ನ್ಯೂಜಿಲೆಂಡ್​​​ನ ಆರಂಭಿಕ ಆಟಗಾರ‌ ಡೆವೊನ್‌ ಕಾನ್ವೇ, ಟೆಸ್ಟ್‌ ಕ್ರಿಕೆಟ್‌ನ ಮೊದಲ ಪಂದ್ಯದಲ್ಲೇ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಇದು ಮಾತ್ರವಲ್ಲದೆ, ಇಂಗ್ಲೆಂಡ್‌ ನೆಲದಲ್ಲಿ ಪದಾರ್ಪಣೆ ಪಂದ್ಯದಲ್ಲಿ ಗರಿಷ್ಠ ರನ್‌ ಕಲೆಹಾಕಿದ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಆತಿಥೇಯ ಇಂಗ್ಲೆಂಡ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಕ್ರಿಕೆಟ್‌ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್​ನಲ್ಲಿ 378 ರನ್‌ ಗಳಿಸಿ ಆಲೌಟ್‌ ಆಗಿದೆ.

ಅನುಭವಿ ಲಾಥಮ್‌ ಜೊತೆಗೆ ಆರಂಭಿಕರಾಗಿ ಕ್ರೀಸ್‌ಗೆ ಇಳಿದ ಡೆವೊನ್‌ ಕಾನ್ವೇ, ಮೊದಲ ದಿನ ಶತಕ ಸಿಡಿಸಿ ಸಂಭ್ರಮಿಸಿದರೆ, 2ನೇ ದಿನಾದಾಟ ದ್ವಿಶತಕವನ್ನಾಗಿ ಪರಿವರ್ತಿಸಿ ಮಿಂಚಿದರು. ಆ ಮೂಲಕ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ 6ನೇ ಆಟಗಾರ ಎನಿಸಿಕೊಂಡ ಕಾನ್ವೇ, ಲಾರ್ಡ್ಸ್‌ನಲ್ಲಿ ಪದಾರ್ಪಣೆಗೈದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇಷ್ಟೇ ಅಲ್ಲದೇ ಇನ್ನೂ ಹಲವು ದಾಖಲೆಗಳು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಡೆವೊಬ್ ಕಾನ್ವೇಯ ಪ್ರದರ್ಶನದ ಬಗ್ಗೆ ದಿಗ್ಗಜ ಆಟಗಾರರು ಸೇರಿದಂತೆ ಅಭಿಮಾನಿಗಳ ಕೊಂಡಾಡಿದ್ದಾರೆ.

The post ಮೊದಲ ಟೆಸ್ಟ್ ಪಂದ್ಯದಲ್ಲೇ ದಿಗ್ಗಜರ ದಾಖಲೆಗಳು ಉಡೀಸ್ ಮಾಡಿದ ಕಾನ್ವೆ appeared first on News First Kannada.

Source: newsfirstlive.com

Source link