ಬಿಗ್‍ಬಾಸ್ ಮನೆಗೆ ಸ್ಪರ್ಧಿಗಳು ಗ್ರ್ಯಾಂಡ್ ಎಂಟ್ರಿ ಕೊಟ್ಟು ಬಿಗ್‍ಬಾಸ್ ಮೇಲೆ ಇರುವ ನಿರೀಕ್ಷೆಯನ್ನು ಹೆಚ್ಚಿಸಿದ್ದರು. ಅದಕ್ಕೆ ಪೂರಕವಾಗಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಮೊದಲ ದಿನವೇ ಕಿತ್ತಾಡಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ ಮುಖ್ಯದ್ವಾರದ ಮೂಲಕ ಸ್ಪರ್ಧಿಗಳು ಒಳಗೆ ಹೋಗುವುದು ಹಾಗೂ ಎಲಿಮಿನೇಟ್ ಆದಾಗ ಹೊರಗೆ ಬರುತ್ತಿದ್ದರು. ಆದರೆ ಈ ಸಲ ಸ್ಪರ್ಧಿಗಳನ್ನು ಬೇರೆ ಬೇರೆ ದ್ವಾರಗಳ ಮೂಲಕ ಮನೆ ಒಳಗೆ ಕಳುಹಿಸಲಾಗಿದೆ. ಬಿಗ್‍ಬಾಸ್ ಮನೆಯಲ್ಲಿ ಮೊಟಕುಗೊಂಡಿದ್ದ ಜರ್ನಿಯನ್ನೂ ಪೂರ್ತಿ ಮಾಡಲು ಸ್ಪರ್ಧಿಗಳು ಹೊಸ ಗೇಮ್ ಪ್ಲ್ಯಾನ್‍ನೊಂದಿಗೆ ತಾನೇ ಗೆಲ್ಲಬೇಕು ಎಂಬ ಹಂಬಲದೊಂದಿಗೆ ಎಂಟ್ರಿಕೊಟ್ಟಿದ್ದಾರೆ.ಇದನ್ನೂ ಓದಿ:  ಸ್ಪರ್ಧಿಗಳ ಗೇಮ್ ಪ್ಲ್ಯಾನ್ ಕೇಳಿ ಅಚ್ಚರಿಗೊಳಗಾದ್ರು ಸುದೀಪ್..!

ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಕೈ ಕೈ ಮಿಲಾಯಿಸಿ, ಜುಟ್ಟು, ಬಟ್ಟೆ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಇದು ತುಂಬಾ ದಿನಗಳ ನಂತರ ನೋಡಿದ್ದಕ್ಕಾಗಿ ಮಿಸ್ ಮಾಡಿಕೊಂಡಿರುವುದಕ್ಕೆ ಪ್ರೀತಿಯ ಜಗಳನಾ? ಮೊದಲ ದಿನವೇ ಇವರಿಗೆ ಬಿಗ್‍ಬಾಸ್ ಟಾಸ್ಕ್ ಏನಾದರೂ ಕೊಟ್ಟಿದ್ದಾರಾ? ಇವರು ಹೀಗೆ ಹೊಡೆದಾಡಿಕೊಂಡು ನೆಲದ ಮೇಲೆ ಬಿದ್ದು ಕಿತ್ತಾಡಿಕೊಂಡಿದ್ದು ಏಕೆ ಅನ್ನೋದು ಪ್ರೇಕ್ಷರಲ್ಲಿ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

ಈಗಾಗಲೇ ಮನೆಯಿಂದ ಹೊರ ಹೋಗಿ, ಈ ಹಿಂದೆ ನಡೆದಿರುವ ಎಪಿಸೋಡ್‍ಗಳನ್ನು ನೋಡಿರುವ ಸ್ಪರ್ಧಿಗಳು ಯಾರು ನಿಜವಾದ ಸ್ನೇಹಿತರು ಹಾಗೂ ಏನೆಲ್ಲ ಹಿಂದೆ ಮಾತನಾಡಿದ್ದಾರೆ ಅಂತ ತಿಳಿದುಕೊಂಡು ಮನೆಗೆ ಬಂದಿದ್ದಾರೆ. ಹೀಗಿರುವಾಗ ಯಾರು ಯಾರ ಸ್ನೇಹಿತರು, ಯಾರು ಕೇವಲ ಪರಿಚಯಸ್ಥರು ಅನ್ನೋದು ಇನ್ನು ಮುಂದಿನದಿನಗಳಲ್ಲಿ ತಿಳಿಯಲಿದೆ. ಬಿಗ್‍ಬಾಸ್ ಮೊದಲ ದಿನವೇ ತಮ್ಮ ಆಟವನ್ನು ಆರಂಭಿಸಿದ್ದಂತೂ ಪಕ್ಕವಾಗಿದೆ.

The post ಮೊದಲ ದಿನವೇ DU,DS ಕಿತ್ತಾಟ ಶುರು appeared first on Public TV.

Source: publictv.in

Source link