ವೆಸ್ಟ್ ಇಂಡೀಸ್ ವಿರುದ್ದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ದಾಖಲೆ ಬರೆದಿದ್ದಾರೆ. ತಾವು ಪಾದಾರ್ಪಣೆ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಅತ್ಯುತ್ತಮ ಲೆಗ್ ಬ್ರೇಕ್ ಮತ್ತು ಗೂಗ್ಲಿಗಳ ಮೂಲಕ ಗಮನ ಸೆಳೆದ ಬಿಷ್ಣೋಯ್, ವಿಂಡೀಸ್ ತಂಡಕ್ಕೆ ಕಾಡಿದ್ರು.
11ನೇ ಓವರ್ನಲ್ಲಿ ರೋಸ್ಟನ್ ಚೇಸ್ ಅವರನ್ನು ಎಲ್ಬಿ ಬಲೆಗೆ ಬೀಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ವಿಕೆಟ್ ಖಾತೆ ತೆರೆದರು. ಇದರ ಬೆನ್ನಲ್ಲೇ ಸ್ಪೋಟಕ ಬ್ಯಾಟ್ಸ್ಮನ್ ರಾವ್ಮನ್ ಪೊವೆಲ್ ವಿಕೆಟ್ ಪಡೆದ್ರು. ಇನ್ನು, 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಈ ಸಾಧನೆ ಮೂಲಕ ತನ್ನ ಮೊದಲ ಪಂದ್ಯದಲ್ಲೇ ಅತೀ ಕಡಿಮೆ ರನ್ ನೀಡಿದ ಸ್ಪಿನ್ನರ್ಗಳ ಪಟ್ಟಿಯಲ್ಲಿ ರವಿ ಬಿಷ್ಣೋಯ್ ಕೂಡ ಸ್ಥಾನ ಪಡೆದ್ರು.