ಮೊದಲ ಪಂದ್ಯದಲ್ಲೇ ​ಮಿಂಚಿದ ಶ್ರೇಯಸ್ ‘ಈ’ ಎಕ್ಸ್​ಪೀರಿಯನ್ಸ್​ ಪ್ಲೇಯರ್​ಗಳ ಸ್ಥಾನಕ್ಕೆ ಕುತ್ತು ತರ್ತಾರಾ?

ಮೊದಲ ಇನ್ನಿಂಗ್ಸ್​ನಲ್ಲಿ ಅನುಭವಿಗಳು ಕೈಕೊಟ್ಟಾಗ ಟೀಮ್ ಇಂಡಿಯಾದ ಕೈ ಹಿಡಿದಿದ್ದು, ಶ್ರೇಯಸ್​ ಅಯ್ಯರ್. ಪಾದರ್ಪಣೆಯ ಪಂದ್ಯದಲ್ಲಿ ಕ್ಲಾಸ್ ಇನ್ನಿಂಗ್ಸ್​ ಆಡಿದ ಅಯ್ಯರ್, ಈಗ ಇಬ್ಬರು ಎಕ್ಸ್​ಪೀರಿಯನ್ಸ್​ ಪ್ಲೇಯರ್​ಗಳನ್ನ ಆತಂಕಕ್ಕೆ ದೂಡಿದ್ದಾನೆ.

ಶ್ರೇಯಸ್​ ಅಯ್ಯರ್​, ಟೀಮ್ ಇಂಡಿಯಾದ ಡೆಬ್ಯು ಸ್ಟಾರ್​​. ಮೊದಲ ಪಂದ್ಯದಲ್ಲೇ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿರುವ ಮುಂಬೈಕರ್​, ಟೆಸ್ಟ್​ ಕ್ರಿಕೆಟ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಆಪದ್ಭಾಂದವ ಎನಿಸಿಕೊಂಡ ಶ್ರೇಯಸ್​, ಈಗ ಇಬ್ಬರು ಅಪದ್ಭಾಂದವರನ್ನ ಒತ್ತಡಕ್ಕೆ ಸಿಲುಕಿದ್ದಾರೆ.

ಜಡ್ಡು ಜೊತೆ ಶ್ರೇಯಸ್​​ ಶತಕದ ಜೊತೆಯಾಟ
106 ರನ್​​​ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಈ ವೇಳೆ ಕಣಕ್ಕಿಳಿದ ಮುಂಬೈಕರ್ ಶ್ರೇಯಸ್ ಅಯ್ಯರ್​, ರಹಾನೆ ಜೊತೆ ಬಿಗ್​ ಇನ್ನಿಂಗ್ಸ್​ ಕಟ್ಟುವ ಲೆಕ್ಕಚಾರದಲ್ಲಿದ್ದರು. ಆದ್ರೆ ಈ ಬೆನ್ನಲ್ಲೇ 35 ರನ್​ಗಳಿಗೆ ರಹಾನೆ ವಿಕೆಟ್ ಒಪ್ಪಿಸಿ ಹೊರನಡೆದರು. ಆಗ ಟೀಮ್ ಇಂಡಿಯಾಕ್ಕೆ ಆಸರೆಯಾಗಿದ್ದೆ ಡೆಬ್ಯೂ ಸ್ಟಾರ್​ ಶ್ರೇಯಸ್​ ಅಯ್ಯರ್.

ಆಲ್​ರೌಂಡರ್ ಜಡೇಜಾ ಜೊತೆಗೂಡಿದ ಅಯ್ಯರ್, ಒತ್ತಡದ ಪರಿಸ್ಥಿತಿಯಲ್ಲೂ ಕ್ಲಾಸ್ ಬ್ಯಾಟಿಂಗ್​​ನೊಂದಿಗೆ ಮೆಚ್ಯುರಿಟಿ ಇನ್ನಿಂಗ್ಸ್ ಆಡಿದರು. 96 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶ್ರೇಯಸ್​, ದಿನದಾಟದ ಅಂತ್ಯಕ್ಕೆ ಅಜೇಯ 75 ರನ್ ಸಿಡಿಸಿದರು. ತಂಡದ ಕುಸಿತಕ್ಕೆ ಅಡ್ಡಲಾಗಿ ನಿಂತ ಶ್ರೇಯಸ್​, ಅಮೋಘ ಬ್ಯಾಟಿಂಗ್​​ನಿಂದಾಗಿ ಮೊದಲ ಇನ್ನಿಂಗ್ಸ್​ನಲ್ಲೇ ಶಹಬ್ಬಾಷ್ ಗಿರಿ ಗಿಟ್ಟಿಸಿದ್ದಾರೆ.

ಪೂಜಾರ-ರಹಾನೆ ಸ್ಥಾನಕ್ಕೆ ಶ್ರೇಯಸ್​ ಅಯ್ಯರ್​ ಕುತ್ತು.!
ಚೊಚ್ಚಲ ಪಂದ್ಯದಲ್ಲೇ ಮೆಚ್ಯುರ್ಡ್​​ ಇನ್ನಿಂಗ್ಸ್​ ಆಡಿದ ಶ್ರೇಯಸ್​, ಟೆಸ್ಟ್​ ಸ್ಪೆಷಲಿಸ್ಟ್​ಗಳಾದ ಪೂಜಾರ, ರಹಾನೆ ಸ್ಥಾನಕ್ಕೆ ಕುತ್ತಾಗುವ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಈ ಅನುಭವಿಗಳು ಕಳೆದೆರೆಡು ವರ್ಷಗಳಿಂದ ವೈಫಲ್ಯ ಅನುಭವಿಸುತ್ತಿದ್ದು, ಇವರಿಬ್ಬರ ಸ್ಥಾನವೂ ಅಂತಂತ್ರಕ್ಕೆ ಸಿಲುಕಿದೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಿಡಲ್ ಆರ್ಡರ್​ನ ಮದ್ದಾಗುವ ಭರವಸೆಯನ್ನ, ಮೊದಲ ಪಂದ್ಯದಲ್ಲೇ ಶ್ರೇಯಸ್​ ಹುಟ್ಟುಹಾಕಿದ್ದಾರೆ.

ಸಿಡಿಯದಿದ್ದರೆ ಪೂಜಾರ, ರಹಾನೆ ಕಿಕ್​​ಔಟ್​ ಗ್ಯಾರಂಟಿ..!
ಯೆಸ್.! ಮುಂಬೈನಲ್ಲಿ ನಡೆಯಲಿರುವ 2ನೇ ಟೆಸ್ಟ್​ಗೆ ನಾಯಕ ವಿರಾಟ್​ ವಾಪಸ್​ ಆಗ್ತಿದ್ದಾರೆ. ಇದು ಸಹಜವಾಗೇ ಶ್ರೇಯಸ್​​ನ ಬೆಂಚ್ ಕಾಯುವಂತೆ ಮಾಡುತ್ತೆ. ಆದ್ರೆ ಇದು ಪೂಜಾರ ಹಾಗೂ ರಹಾನೆಗೆ ಮಾತ್ರ ಅಗ್ನಿಪರೀಕ್ಷೆಯ ಕಣವಾಗಿಯೇ ಮಾರ್ಪಡಲಿದೆ. ಅದರಲ್ಲೂ ಮುಂದಿನ ಸೌತ್​ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಬೇಕೆಂದರೆ, ಕಾನ್ಪುರ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ ಸೇರಿದಂತೆ, ಮುಂಬೈನಲ್ಲಿ ಅಬ್ಬರಿಸಬೇಕಿದೆ. ಆಕಸ್ಮಾತ್​ ಈ ಎರಡೂ ಅವಕಾಶಗಳನ್ನ ಕೈಚೆಲ್ಲಿದರೆ, ಈ ಇಬ್ಬರಲ್ಲಿ ಒಬ್ಬರು ತಂಡದಿಂದ ಔಟ್ ಆಗೋದಂತೂ ಗ್ಯಾರಂಟಿ.

News First Live Kannada

Leave a comment

Your email address will not be published. Required fields are marked *