– ಇಬ್ಬರ ಮದುವೆ ಅಸಿಂಧು ಅಂದ್ರು ಮುಸ್ತಾಫಾ ಮೊದಲ ಮಡದಿ

ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಾಫಾ ರಾಜ್ ಮದುವೆ ಅಸಿಂಧು ಎಂದು ಮೊದಲ ಮಡದಿ ಆಯೇಷಾ ಹೇಳಿದ್ದು, ತಾನಿನ್ನೂ ಮುಸ್ತಾಫಾ ಪತ್ನಿ ಎಂದು ಹೇಳಿಕೊಂಡಿದ್ದಾರೆ. ಪತಿ ಮುಸ್ತಾಫಾ ತಮಗೆ ವಿಚ್ಛೇದನ ನೀಡದೇ ಪ್ರಿಯಾಮಣಿಯನ್ನು ಮದುವೆ ಆಗಿದ್ದಾರೆಂದು ಆಯೇಷಾ ಗಂಭೀರ ಆರೋಪ ಮಾಡಿದ್ದಾರೆ.

2013ರಲ್ಲಿ ಮುಸ್ತಾಫಾ ಮತ್ತು ಆಯೇಷಾ ಪ್ರತ್ಯೇಕವಾಗಿದ್ದರು. ದಂಪತಿ ಎರಡು ಮಕ್ಕಳಿದ್ದು, ಪತ್ನಿಯಿಂದ ದೂರವಾದ್ರೂ ಮುಸ್ತಾಫಾ ಆರ್ಥಿಕ ಸಹಾಯ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಮೊದಲ ಪತ್ನಿಯಿಂದ ದೂರವಾದ ಬಳಿಕ 2017ರಲ್ಲಿ ಪ್ರಿಯಾಮಣಿಯನ್ನ ಮುಸ್ತಾಫಾ ಮದುವೆಯಾಗಿದ್ದರು. ಸರಳವಾಗಿ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದ ಜೋಡಿ, ಆನಂತರ ಅದ್ಧೂರಿ ಆರತಕ್ಷತೆ ಆಯೋಜಿಸಿದ್ದರು. ಆದ್ರೆ ಪ್ರಿಯಾಮಣಿಯನ್ನ ಮದುವೆಯಾಗುವ ವೇಳೆ ಮುಸ್ತಾಫಾ ತಾವಿನ್ನೂ ಸಿಂಗಲ್ ಎಂದು ದಾಖಲಿಸಿದ್ದಾರೆ ಎನ್ನಲಾಗಿದೆ.

ಆಯೇಷಾ ಹೇಳಿದ್ದೇನು?:
ನಾನಿನ್ನೂ ಮುಸ್ತಾಫಾ ರಾಜ್ ಪತ್ನಿಯಾಗಿದ್ದು, ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಹ ಸಲ್ಲಿಸಿಲ್ಲ. 2017ರಲ್ಲಿ ಪ್ರಿಯಾಮಣಿ ಅವರನ್ನ ಮದುವೆಯಾಗುವಾಗ ಮುಸ್ತಾಫಾ ನ್ಯಾಯಾಲಯಕ್ಕೆ ತಾವು ಬ್ಯಾಚೂಲರ್ ಅಂತ ಹೇಳಿಕೊಂಡಿದ್ದಾರೆ. ಹಾಗಾಗಿ ಇಬ್ಬರ ಮದುವೆ ಕಾನೂನಿನ ಪ್ರಕಾರ ಅಸಿಂಧು. ಸರಿಯಾದ ದಾರಿಯಲ್ಲಿ ಸಮಸ್ಯೆಯನ್ನ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದೆ. ಆದ್ರೆ ಅದು ಫಲಪ್ರದವಾಗಲಿಲ್ಲ. ಹಾಗಾಗಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಆಯೇಷಾ ಹೇಳಿದ್ದಾರೆ. ಇದನ್ನೂ ಓದಿ: ಶಾರೂಖ್ ಬಳಿ 300 ರೂ. ಪಡೆದಿದ್ದ ಪ್ರಿಯಾಮಣಿ

ಆಯೇಷಾ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮುಸ್ತಾಫಾ ರಾಜ್, ಮಕ್ಕಳಿಗಾಗಿ ಪತ್ನಿಗೆ ಹಣ ನೀಡುತ್ತಿದ್ದೇನೆ. 2017ರಲ್ಲಿ ಮದುವೆಯಾದ್ರೂ ಕೌಟುಂಬಿಕ ಹಿಂಸಾಚಾರ ಸೇರಿದಂತೆ ನನ್ನ ವಿರುದ್ಧ ಈಗ ಆರೋಪಗಳನ್ನು ಮಾಡುತ್ತಿರೋದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದು ನನ್ನಿಂದ ಹೆಚ್ಚು ಹಣ ಪಡೆದುಕೊಳ್ಳುವ ಹುನ್ನಾರ ಎಂದು ಮರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಾರಿ ಮಚ್ಚಾ, ನನ್ನ ಬಳಿ ನಮ್ಮಿಬರ ಜೊತೆಗಿನ ಫೋಟೋ ಇಲ್ಲ: ಪ್ರಿಯಾಮಣಿ

The post ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಪ್ರಿಯಾಮಣಿ ಜೊತೆ ಮದ್ವೆಯಾದ್ರಾ ಮುಸ್ತಾಫಾ? appeared first on Public TV.

Source: publictv.in

Source link