ಮೆಕ್ಕಾ: ಸೌದಿ ಅರೇಬಿಯಾ ಸರ್ಕಾರ ಇದೇ ಮೊದಲ ಬಾರಿಗೆ ಹಜ್ರ್-ಇ-ಅಸ್ವಾದ್(Hajr-e-Aswad)ನ ಹೈ ರೆಸಲ್ಯೂಷನ್​ ಫೋಟೋಗಳನ್ನ ಬಿಡುಗಡೆ ಮಾಡಿದೆ. ಹಜ್ರ್-ಇ-ಅಸ್ವಾದ್ ಅಂದ್ರೆ ಕಾಬಾ/ಕಾಬಾಹ್ದ​​​ ಪವಿತ್ರ ಕಪ್ಪು ಕಲ್ಲು. ಹಿಂದೆಂದೂ ನೋಡಿರದ ಈ ಕಪ್ಪು ಕಲ್ಲಿನ ಚಿತ್ರಗಳು ಭಕ್ತರಲ್ಲಿ ಬೆರಗು ಮೂಡಿಸಿದೆ.

ರಿಯಾಸಾ ಅಲ್ಹರ್​​ಮೈನ್​​ನ ಇಂಜಿನಿಯರಿಂಗ್​ ಸ್ಟಡೀಸ್​ ವಿಭಾಗ, ಫೋಕಸ್​ ಸ್ಟ್ಯಾಕ್ ಪನೋರಮಾ ತಂತ್ರಜ್ಞಾನದ ಮೂಲಕ ಈ ಫೋಟೋಗಳನ್ನ ತೆಗೆದಿದೆ. ಇದರ ಚಿತ್ರೀಕರಣಕ್ಕೆ 7 ಗಂಟೆ ಸಮಯ ಬೇಕಾಯ್ತು. ಮತ್ತು ‘ಫೋಕಸ್ ಸ್ಟಾಕ್ ಪನೋರಮಾ’ ತಂತ್ರಜ್ಞಾನದೊಂದಿಗೆ ಚಿತ್ರಗಳ ಸಂಖ್ಯೆ 1050ಕ್ಕೆ ತಲುಪಿತು. ಚಿತ್ರದ ರೆಸಲ್ಯೂಶನ್ 49,000 ಮೆಗಾಪಿಕ್ಸೆಲ್‌ಗೆ ತಲುಪಿದೆ. ಈ ಇಡೀ ಪ್ರಕ್ರಿಯೆಗೆ 50 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು ಎಂದು ಎರಡು ಪವಿತ್ರ ಮಸೀದಿಗಳ ಪ್ರೆಸಿಡೆನ್ಸಿಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

ಫೋಕಸ್​ ಸ್ಟ್ಯಾಕ್ ಪನೋರಮಾ ಅಂದ್ರೆ ಕಪ್ಪು ಕಲ್ಲಿನ ವಿವಿಧ ಕ್ಲಾರಿಟಿ ಇರೋ ಚಿತ್ರಗಳನ್ನ ಸಂಯೋಜನೆ ಮಾಡಿ, ಅತ್ಯಂತ ನಿಖರವಾಗಿ ಕಾಣುವ ಸಿಂಗಲ್ ಫೋಟೋವನ್ನ ತಯಾರಿಸುವ ಟೆಕ್ನಾಲಜಿ.

ಇನ್ನು ಕಾಬಾ ಅಂದ್ರೆ, ಸೌದಿ ಅರೇಬಿಯದಲ್ಲಿರುವ ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರವಾದ ಮಸ್ಜಿದ್ ಅಲ್-ಹರಾಮ್ ಮಸೀದಿಯ ಮಧ್ಯಭಾಗದಲ್ಲಿರೋ ಕಟ್ಟಡದ. ಪ್ರಪಂಚದ ಎಲ್ಲಾ ಮುಸ್ಲಿಮರು ಪ್ರಾರ್ಥಿಸುವಾಗ ಕಾಬಾದ ದಿಕ್ಕಿನಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಇದನ್ನ ಹೌಸ್ ಆಫ್ ಗಾಡ್/ದೇವರ ಮನೆ ಎಂದು ಕರೆಯಲಾಗುತ್ತದೆ.

ಕಾಬಾದ ಹೊರಗೆ ಆಗ್ನೇಯ ಮೂಲೆಯಲ್ಲಿ ಈ ಕಪ್ಪು ಕಲ್ಲು ಇದೆ. ಮತ್ತು ಇದು ಕಾಬಾದ ಸುತ್ತಲೂ ತವಾಫ್(ಪ್ರದಕ್ಷಿಣೆ) ಸಲ್ಲಿಸಲು ಪ್ರಾರಂಭ ಮತ್ತು ಅಂತ್ಯದ ಹಂತ. ಕಲ್ಲು ಅಂಡಾಕಾರದಲ್ಲಿದ್ದು, ಕೆಂಪು-ಕಪ್ಪು ಬಣ್ಣದಿಂದ ಕೂಡಿದೆ. ಮತ್ತು 30 ಸೆಂಟಿಮೀಟರ್ ವ್ಯಾಸ(ಡಯಾಮೀಟರ್) ಹೊಂದಿದೆ.

Image courtesy: @ReasahAlharmain

 

The post ಮೊದಲ ಬಾರಿಗೆ ಕಾಬಾದ ಪವಿತ್ರ ಕಪ್ಪು ಕಲ್ಲಿನ ಹೈ ರೆಸಲ್ಯೂಷನ್ ಫೋಟೋಗಳನ್ನು ಬಿಡುಗಡೆ ಮಾಡಿದ ಸೌದಿ appeared first on News First Kannada.

Source: newsfirstlive.com

Source link