ಮೊದಲ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ: ಮೈದಾನ ಸುತ್ತಲೂ ಪೊಲೀಸ್ ಸರ್ಪಗಾವಲು | Independence Day celebrations at Chamarajpet Maidan for the first time: police cordon around the Maidan


ಬೆಂಗಳೂರು: ವಿವಾದಿತ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಕೌಂಟ್ ಡೌನ್​ ಶುರುವಾಗಿದ್ದು, 75ನೇ ಸ್ವಾತಂತ್ರ್ಯ ದಿನಾಚರಣೆಗೆ ಚಾಮರಾಜಪೇಟೆ ಮೈದಾನ ಸಿದ್ದವಾಗಿದೆ. ವಿವಾದದ ಬಳಿಕ ಇತಿಹಾಸದಲ್ಲಿ ಮೊದಲಿಗೆ ಇಂದು ತ್ರಿವರ್ಣ ಧ್ವಜ ಹಾರಲಿದ್ದು, ವಿವಾದಿತ ಮೈದಾನದಲ್ಲಿ ಎಲ್ಲೆಲ್ಲೂ ಖಾಕಿ ಕಣ್ಗಾವಲು ವಹಿಸಿದೆ. ಸುಮಾರು 20 ಅಡಿಯ ಧ್ವಜ ಸ್ತಂಭವನ್ನು  ಕಂದಾಯ ಇಲಾಖೆ ನೆಟ್ಟಿದ್ದು, ಇಂದು ಬೆಳಗ್ಗೆ 8 ಗಂಟೆಗೆ ರಾಜ್ಯ ಸರ್ಕಾರ ಕಂದಾಯ ಇಲಾಖೆ ಉಪ ವಿಭಾಗಾಧಿಕಾರಿ ಶಿವಣ್ಣ ಅವರಿಂದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮೈದಾನದಲ್ಲಿ ಇಂದು ಜನಗಣಮನ ರಾಷ್ಟ್ರಗೀತೆ […]

ಮೊದಲ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ: ಮೈದಾನ ಸುತ್ತಲೂ ಪೊಲೀಸ್ ಸರ್ಪಗಾವಲು

ಚಾಮರಾಜಪೇಟೆ ಮೈದಾನ

ಬೆಂಗಳೂರು: ವಿವಾದಿತ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಕೌಂಟ್ ಡೌನ್​ ಶುರುವಾಗಿದ್ದು, 75ನೇ ಸ್ವಾತಂತ್ರ್ಯ ದಿನಾಚರಣೆಗೆ ಚಾಮರಾಜಪೇಟೆ ಮೈದಾನ ಸಿದ್ದವಾಗಿದೆ. ವಿವಾದದ ಬಳಿಕ ಇತಿಹಾಸದಲ್ಲಿ ಮೊದಲಿಗೆ ಇಂದು ತ್ರಿವರ್ಣ ಧ್ವಜ ಹಾರಲಿದ್ದು, ವಿವಾದಿತ ಮೈದಾನದಲ್ಲಿ ಎಲ್ಲೆಲ್ಲೂ ಖಾಕಿ ಕಣ್ಗಾವಲು ವಹಿಸಿದೆ. ಸುಮಾರು 20 ಅಡಿಯ ಧ್ವಜ ಸ್ತಂಭವನ್ನು  ಕಂದಾಯ ಇಲಾಖೆ ನೆಟ್ಟಿದ್ದು, ಇಂದು ಬೆಳಗ್ಗೆ 8 ಗಂಟೆಗೆ ರಾಜ್ಯ ಸರ್ಕಾರ ಕಂದಾಯ ಇಲಾಖೆ ಉಪ ವಿಭಾಗಾಧಿಕಾರಿ ಶಿವಣ್ಣ ಅವರಿಂದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮೈದಾನದಲ್ಲಿ ಇಂದು ಜನಗಣಮನ ರಾಷ್ಟ್ರಗೀತೆ ಮೊಳಗಲಿದೆ. ಸ್ಥಳೀಯ ಶಾಸಕ ಜಮೀರ್​ಗೂ ಧ್ವಜ ಹಾರಿಸೋ ಭಾಗ್ಯ ಇಲ್ಲ. ಧ್ವಜಾರೋಹಣ ಹಾರಿಸೋದಕ್ಕೆ ಕಂದಾಯ ಇಲಾಖೆಯಿಂದ ಸಕಲ ಸಿದ್ದತೆ ಮಾಡಿದ್ದು, ಮೈದಾನದಲ್ಲಿ ಧ್ವಜಾರೋಹಣ ವೇಳೆ ಕಾನೂನು ಉಲ್ಲಂಘಿಸಿದ್ರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.

ಧ್ವಜಾರೋಹಣ ಬಳಿಕ 500 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮೈದಾನದಲ್ಲಿ ವಂದೇ ಮಾತಂ, ಭಾರತ್ ಮಾತಾ ಕೀ ಜೈ ಘೋಷಣೆಗೆ ಮಾತ್ರ ಅವಕಾಶವಿದೆ. ಸ್ವಾತಂತ್ರ್ಯ ದಿನಾಚರಣೆ ಮುಗಿಯುವರಿಗೆ ಮೈದಾನದ ಸುತ್ತ ಮುತ್ತ ಖಾಕಿ ಹದ್ದಿನ ಕಣ್ಣೀಡಲಿದೆ. ಸಂಜೆ ಗೌರವಯುತವಾಗಿ ಪೊಲೀಸರು ಧ್ವಜ ಇಳಿಸಲಿದ್ದು, ಚಾಮರಾಜಪೇಟೆ ಮೈದಾನಕ್ಕೆ ಬ್ಯಾರಿಗೇಡ್​ಗಳಿಂದ ಭದ್ರತೆ ನೀಡಲಾಗಿದೆ. ಒಟ್ಟು 3 ಪ್ರವೇಶ ದ್ವಾರ ಮೂಲಕ ಎಂಟ್ರಿಗೆ ವ್ಯವಸ್ಥೆ ಮಾಡಲಾಗಿದ್ದು, ಎರಡು ಸಾರ್ವಜನಿಕರಿಗೆ, ಮತ್ತೊಂದು VIP, VVIP ಗಳಿಗೆ ಎಂಟ್ರಿ ಇರಲಿದೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಮೊದಲ‌ ಬಾರಿಗೆ ಸರ್ಕಾರದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದ್ದು, ಮೈದಾನ ಸುತ್ತಲೂ ಪೊಲೀಸ್ ಸರ್ಪಗಾವಲು. ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರು ಸಜ್ಜಾಗಿ ನಿಂತ್ತಿದ್ದಾರೆ.

ಸಂಪೂರ್ಣ ಮೈದಾನ ಸುತ್ತುವರೆದ RAF ಟೀಮ್

ಮೈದಾನ ಸಂಪೂರ್ಣ RAF ಟೀಮ್ ಸುತ್ತುವರೆದಿದ್ದು, ಅಹಿತಕರ ಘಟನೆ ನಡೆಯದಮನತೆ ಮೈದಾನದ ಮೇಲೆ ಖಾಕಿ ಕಣ್ಗಾವಲು ವಹಿಸಿದೆ. 250 ರಿಂದ 300 ಮಂದಿ RAF ಟೀಮ್​ನಿಂದ ಭದ್ರತೆ ಒದಗಿಸಿದ್ದು, ಸಂಪೂರ್ಣ ಶಸ್ತ್ರ ಸಜ್ಜಿತವಾಗಿ ಮೈದಾನಕ್ಕೆ ಇಳಿಯಲಾಗಿದೆ. ಒಟ್ಟು 10 ಕೆಎಸ್ ಆರ್ ಪಿ, SWAT ಸ್ಪೆಷಲ್ ಫೋರ್ಸ್ 104 ಕ್ಕೂ ಹೆಚ್ಚು ಮಂದಿ, ವಜ್ರ 2 ಟೀಮ್ ಡಿಆರ್ ಡಿ ಒ ಟೀಮ್​ಗಳಿಂದ ಭದ್ರತೆ ನೀಡಲಾಗಿದೆ.

ಸಾರ್ವಜನಿಕರಿಗೆ ಗೋಡೆ ಅಕ್ಕಪಕ್ಕ ಓಡಾಟಕ್ಕೆ ನಿಷೇಧ

ಮೈದಾನದಲ್ಲಿ ಸಣ್ಣದೊಂದು ವೇದಿಕೆ ನಿರ್ಮಾಣ ಮಾಡಿದ್ದು, ವೇದಿಕೆ ಮೇಲೆ ಕೇವಲ ಮೂರು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಧ್ವಜಾರೋಹಣ ಮಾಡುವ ಎಸಿ ಶಿವಣ್ಣ, ಹಾಗೂ ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಈದ್ಗಾ ಗೋಡೆಯ ತದ್ವಿರುದ್ಧವಾಗಿ ಧ್ವಜಾರೋಹಣಕ್ಕೆ ಸಿದ್ಧತೆ ಮಾಡಿದ್ದು, ಮಾಧ್ಯಮದವರ ಪ್ರದೇಶದ್ವಾರ, ಸಾರ್ವಜನಿಕಕರಿಗೆ ಪ್ರದೇಶ ದ್ವಾರ, ಹಾಗೂ ವಿವಿಐಪಿಗಳಿಗೆ ಪ್ರತ್ಯೇಕ ಪ್ರವೇಶದ್ವಾರವಿರಲಿದೆ. ಈದ್ಗಾ ಗೋಡೆಯ ಸುತ್ತಲೂ ಪೊಲೀಸ್ ಸರ್ಪಗಾವಲು ವಹಿಸಿದ್ದು, ಸಾರ್ವಜನಿಕರಿಗೆ ಗೋಡೆ ಅಕ್ಕಪಕ್ಕ ಓಡಾಟ ನಿಷೇಧಿಸಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *