ಮೊದಲ ಬಾರಿ ಖಡಕ್​ ಪೊಲೀಸ್ ಅವತಾರದಲ್ಲಿ ವಸಿಷ್ಠ ಸಿಂಹ; ಯಾವ ಸಿನಿಮಾ?


ತಮ್ಮ ಕಂಚಿನ ಕಂಠದ ಮೂಲಕವೇ ಸ್ಯಾಂಡಲ್​ವುಡ್​ನಲ್ಲಿ ಮನೆ ಮಾತಾಗಿರುವ ನಟ ಅಂದ್ರೆ ಅದು ವಸಿಷ್ಠ  ಸಿಂಹ. ಸದ್ಯ ತಲ್ವಾರ್ ಪೇಟೆ ಮತ್ತು ಹೆಡ್ ಬುಷ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚರಣ್ ರಾಜ್ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಹಾಕುವ ಮೂಲಕ, ಹೊಸ ವರ್ಷವನ್ನು ಪ್ರಾರಂಭ ಮಾಡಿದ್ದಾರೆ.

ಸದ್ಯ ವಿಲನ್​​​ಗಳು ಪೊಲೀಸ್​ ಪಾತ್ರಗಳ ಮೂಲಕ ಹೊಸ ಟ್ರೆಂಡ್​ ಸೃಷ್ಟಿ ಮಾಡುತ್ತಿದ್ದಾರೆ. ಈ ಹಿಂದೆ ಡಾಲಿ ಧನಂಜಯ್​ ವಿಲನ್​ ಆಗಿ ನಟಿಸಿದ್ದ ‘ಟಗರು’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಅದಾದ ನಂತರ ಧನಂಜಯ್,​ ‘ಸಲಗ’ ಸಿನಿಮಾದಲ್ಲಿ ಖಡಕ್​ ಪೊಲೀಸ್​ ಆಧಿಕಾರಿಯಾಗಿ ಕಾಣಿಸಿಕೊಂಡು, ಸಖತ್​ ಹವಾ ಸೃಷ್ಟಿ ಮಾಡಿದ್ದರು. ಸದ್ಯ ಈ ವಿಲ್​ ಟು ಪೊಲೀಸ್​ ಸ್ಟೋರಿಯಲ್ಲಿ ವಸಿಷ್ಠ ಕೂಡ ಸೇರಿದ್ದಾರೆ. ಚರಣ್​ ರಾಜ್​ ಸಿನಿಮಾದಲ್ಲಿ ವಸಿಷ್ಠ ಖಡಕ್​ ಪೊಲೀಸ್​ ಆಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಡೈಲಾಗ್​ ಕಿಂಗ್​ ಸಾಯಿ ಕುಮಾರ್ ಮತ್ತು ಶರತ್ ಲೋಹಿತಾಶ್ವ ಕೂಡ, ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚವಿತ್ರಕ್ಕಿದ್ದು, ಸಲಗ ಖ್ಯಾತಿಯ ಸಿನಿಮೆಟೊಗ್ರಫರ್ ಶಿವ ಸೀನಾ ಈ ಸಿನಿಮಾಗೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭ ಆಗಿ. ಮಧ್ಯಭಾಗದಲ್ಲಿ ಸಿನಿಮಾ ತೆರೆಮೇಲೆ ನೋಡ ಬಹುದಾಗಿದೆ.

News First Live Kannada


Leave a Reply

Your email address will not be published. Required fields are marked *