ಮೊದಲ ಬಾರಿ ಚಿಕ್ಕಮಗಳೂರು ಜಿಲ್ಲೆಗೆ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ; ಅಧಿಕಾರ ವಹಿಸಿಕೊಂಡ ಉಮಾ ಪ್ರಶಾಂತ್ | Uma Prashant takes charge as Chikmagalur SP, first woman official to be posted SP of the Coffee Landಚಿಕ್ಕಮಗಳೂರಿಗೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿದ್ದಾರೆ.

TV9kannada Web Team


| Edited By: Arun Belly

Aug 08, 2022 | 12:46 PM
ಚಿಕ್ಕಮಗಳೂರು:  ಐಪಿಎಸ್ ಅಧಿಕಾರಿ ಉಮಾ ಪ್ರಶಾಂತ್ ಅವರು ಚಿಕ್ಕಮಗಳೂರಿನ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಕಾಫಿನಾಡಿನಿಂದ ನಿರ್ಗಮಿಸಿದ ಎಸ್ ಪಿ ಹಾಕೆ ಅಕ್ಷಯ್ ಮಚಿಂದ್ರಾ ಅವರು ಉಮಾ ಪ್ರಶಾಂತ್ ಅವರಿಗೆ ಬೇಟನ್ ಹಸ್ತಾಂತರಿಸಿದ ಬಳಿಕ ಹೂಗುಚ್ಛ ನೀಡಿ ಸ್ವಾಗತಿಸಿದರು. ಅದಕ್ಕೂ ಮೊದಲು ಜಿಲ್ಲಾ ಪೊಲೀಸ್ ಸಿಬ್ಬಂದಿ ಸಕಲ ಸರಕಾರೀ ಗೌರವಗಳೊಂದಿಗೆ ಉಮಾರನ್ನು ಬರಮಾಡಿಕೊಂಡರು. ಚಿಕ್ಕಮಗಳೂರಿಗೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *