ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಚೆಂದುಳ್ಳಿ ಕಾಜಲ್ ಈಗ ಎಲ್ಲಿದ್ದಾರೆ..? ಏನ್ಮಾಡ್ತಿದ್ದಾರೆ..?


ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಕಾಜಲ್​ ಅಗರ್ವಾಲ್​ ಇತ್ತೀಚೆಗಷ್ಟೇ ತನ್ನ ಬೇಬಿ ಬಂಪ್​ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಗೌತಮ್​ ಕಿಚ್ಲು ಜೊತೆ ದುಬೈ ಟ್ರಿಪ್​ಗೆ ಹೋಗಿರೊ ಕಾಜಲ್​ ತಮ್ಮ ರಜಾದಿನಗಳನ್ನು ಸಖತ್​ ಎನ್​ಜಾಯ್​ ಮಾಡುತ್ತಿದ್ದು​, ದುಬೈ ಟ್ರಿಪ್​ನ್ನ ಫೋಟೋಗಳನ್ನು ಬ್ಯಾಕ್​ ಟು ಬ್ಯಾಕ್​ ಶೇರ್​ ಮಾಡುತ್ತಿದ್ದಾರೆ.

ಇನ್ನು ಕಾಜಲ್​ ಹಾಗೂ ತಮ್ಮ ಪತಿ ಗೌತಮ್​ ದುಬೈನ ಐಷಾರಾಮಿ ರೆಸಾರ್ಟ್​ವೊಂದರಲ್ಲಿ ತಂಗಿದ್ದಾರೆ. ಈ ವೇಳೆ ರೆಸಾರ್ಟ್​ನ್ನ ಬಾಲ್ಕನಿ ಬಳಿ ನಿಂತುಕೊಂಡು ಕಾಜಲ್​ ಕೆಲ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಹಳದಿ ಬಣ್ಣದ ಟಾಪ್​ ಧರಿಸಿ ಫೋಟೋಗೆ ಪೋಸ್​ ನೀಡುವ ವೇಳೆ ಕಾಜಲ್ ಬೇಬಿ ಬಂಪ್​ ಕಾಣಿಸಿಕೊಂಡಿದೆ. ಸದ್ಯ ನೆಟ್ಟಿಗರು ಫೋಟೋ ತುಂಬ ಕ್ಯೂಟ್​ ಆಗಿದೆ ಅಂತ ಕಮೆಂಟ್​ ಮಾಡುತ್ತಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ಸಖತ್​ ವೈರಲ್​ ಆಗುತ್ತಿದೆ.

ಕಳೆದ ತಿಂಗಳು ಹೊಸ ವರ್ಷದ ದಿನ ಕಾಜಲ್​ ತಾವು ತಾಯಿಯಾಗುತ್ತಿರುವ ವಿಷಯವನ್ನು ಸೋಶಿಯಲ್​ ಮೀಡಿಯಾ ಮೂಲಕ ಅಧಿಕೃತಗೊಳಿಸಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. 2020 ಅಕ್ಟೋಬರ್​ 30 ರಂದು ಮುಂಬೈ ಮೂಲದ ಉದ್ಯಮಿ ಗೌತಮ್ ಎಂಬವವರ ಜೊತೆ ಕಾಜಲ್​ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

News First Live Kannada


Leave a Reply

Your email address will not be published.