ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಆಯ್ಕೆಯಾಗುತ್ತಿದ್ದಂತೆ ಮನೆಯಲ್ಲಿ ಸಂತಸ ಹರಿದಿದೆ. ಕಿಚ್ಚ ಸುದೀಪ್ ಸಹ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇದೆಲ್ಲರ ಜೊತೆಗೆ ಡಿಯುಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ.

ಹೌದು ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಕ್ಕೆ ದಿವ್ಯಾ ಅವರ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದು, ಶುಭ ಕೋರಿದ್ದಾರೆ, ಜೊತೆಗೆ ಕಿವಿ ಮಾತನ್ನು ಹೇಳಿದ್ದಾರೆ. ತುಂಬಾ ಸಂತೋಷ ಆಗ್ತಿದೆ ಕಣೆ ನಿನ್ನ ಮಾತನ್ನು ನೀನು ಇಂದು ಉಳಿಸಿಕೊಂಡೆ, ಫಸ್ಟ್ ಫೀಮೇಲ್ ಕ್ಯಾಪ್ಟನ್ ನಾನಾಗಬೇಕು ಎಂದು ಯಾವಾಗಲೂ ಹೇಳುತ್ತಿರುತ್ತಿದ್ದೆ. ಆ ಮಾತನ್ನು ಇಂದು ಉಳಿಸಿಕೊಂಡಿದ್ದೀಯಾ. ಎಲ್ಲರಿಗೂ ತುಂಬಾ ಖುಷಿಯಾಗಿದೆ. ನೀನು ಕ್ಯಾಪ್ಟನ್ಸಿ ಟಾಸ್ಕ್ ವಿನ್ ಆಗಿ ಕ್ಯಾಪ್ಟನ್ ಆಗಬೇಕೆಂಬುದು ತುಂಬಾ ದಿನದ ಬಯಕೆಯಾಗಿತ್ತು. ಇಂದು ಈಡೇರಿದೆ ಎಂದಿದಾರೆ. ಇದನ್ನೂ ಓದಿ: ‘ಪತ್ರವಳ್ಳಿ’ ಪದಕ್ಕೆ ನಮಗೆ ಅರ್ಥವೇ ಸಿಗಲಿಲ್ಲ- ಚಕ್ರವರ್ತಿಗೆ ಸುದೀಪ್ ಕ್ಲಾಸ್

ಕ್ಯಾಪ್ಟೆನ್ಸಿಯನ್ನು ಚೆನ್ನಾಗಿ ನಿಭಾಯಿಸು, ಚೆನ್ನಾಗಿ ಆಡು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊ. ಕ್ಯಾಪ್ಟೆನ್ಸಿ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ. ಚೆನ್ನಾಗಿರು ಮಗಳೇ, ಚೆನ್ನಾಗಿ ಆಡು. ಆರೋಗ್ಯವನ್ನು ಚೆನ್ನಾಗಿ ನೋಡಿಕೋ, ಹೆಚ್ಚು ನೀರು ಕುಡಿ, ಚೆನ್ನಾಗಿರು ಎಂದು ಸಲಹೆ ನೀಡಿದ್ದಾರೆ. ಈ ಮೂಲಕ ಮಗಳಿಗೆ ಶುಭ ಹಾರೈಸಿದ್ದಾರೆ.

ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿದ್ದಕ್ಕೆ ದಿವ್ಯಾ ಉರುಡುಗ ಸಹ ತುಂಬಾ ಖುಷಿಯಾಗಿದ್ದು, ಇದು ನನ್ನ ಕನಸಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಎಲ್ಲ ಮಹಿಳಾ ಸ್ಪರ್ಧಿಗಳಿಂದಲೇ ಇದು ಸಾಧ್ಯವಾಗಿದೆ. ನಿಮ್ಮ ಕಷ್ಟಗಳನ್ನು ಫುಲ್ ಫಿಲ್ ಮಾಡುತ್ತೇನೆ. ನೆಕ್ಸ್ಟ್ ಎಲ್ಲ ಹುಡುಗಿಯರೇ ನಿಂತುಕೊಳ್ಳಬೇಕೆಂಬ ಆಸೆಯಿದೆ ಎಂದಿದ್ದಾರೆ.

The post ಮೊದಲ ಮಹಿಳಾ ಕ್ಯಾಪ್ಟನ್ ಡಿಯುಗೆ ಫುಲ್ ಸರ್ಪ್ರೈಸ್ appeared first on Public TV.

Source: publictv.in

Source link