ಮೊದಲ ಲೋಹ್ರಿ ಹಬ್ಬದ ಸಂಭ್ರಮದಲ್ಲಿ ವಿಕ್ಕಿ-ಕತ್ರಿನಾ ಜೋಡಿ


ಬಾಲಿವುಡ್​ ತಾರಾ ದಂಪತಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ನಂತರ ತಮ್ಮ ಮೊದಲ ಲೋಹ್ರಿ ಹಬ್ಬವನ್ನು ಒಟ್ಟಿಗೆ ಆಚರಿಸಿದ್ದಾರೆ.

ವಿಕ್ಕಿ ಕೌಶಲ್​ ಹಾಗೂ ಸಾರಾ ಅಲಿ ಖಾನ್​ ನಟನೆಯ ಮುಂಬರುವ ಸಿನಿಮಾದ ಚಿತ್ರೀಕರಣ ಇಂದೋರ್​ನಲ್ಲಿ ನಡೆಯುತ್ತಿದೆ. ಹೀಗಾಗಿ ವಿಕ್ಕಿ ಹಾಗೂ ಕತ್ರಿನಾ ಈ ಬಾರಿಯ ತಮ್ಮ ಮೊದಲ ಲೋಹ್ರಿ ಹಬ್ಬವನ್ನು ಇಂದೋರ್​ನಲ್ಲಿ ಆಚರಿಸಿದ್ದಾರೆ.

ಕಳೆದ ವಾರ ಜನವರಿ 9 ರಂದು ಈ ಜೋಡಿ ತಮ್ಮ ಮದುವೆಯ ಒಂದು ತಿಂಗಳ ಆನಿವರ್ಸರಿಯನ್ನು ಕೂಡ ಇಂದೋರ್​ನಲ್ಲಿಯೇ ಆಚರಿಸಿದ್ದರು. ಇನ್ನು ಮದುವೆ ನಂತರ ಕತ್ರಿನಾ ಹಾಗೂ ವಿಕ್ಕಿ ಇಬ್ಬರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿದ್ದು ಆಗಾಗ ತಮ್ಮ ರೊಮ್ಯಾಂಟಿಕ್​ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಂತೇ ಈ ಬಾರಿಯೂ ಈ ಜೋಡಿ ತಮ್ಮ ಮೊದಲ ಲೋಹ್ರಿ ಹಬ್ಬ ಆಚರಣೆಯ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. ಸದ್ಯ ಈ ಫೊಟೋಸ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

News First Live Kannada


Leave a Reply

Your email address will not be published. Required fields are marked *