ಲವ್​ ಮಾಕ್​ಟೈಲ್​​ ಸಿನಿಮಾದ ನಂತರ ನಟ ಡಾರ್ಲಿಂಗ್​ ಕೃಷ್ಣ ಎಷ್ಟು ಬ್ಯುಸಿಯಾಗ್ಬಿಟ್ರು ಅಂದ್ರೆ, ಫೆಬ್ರವರಿಯಲ್ಲಿ ನಡೆದ ತಮ್ಮ ಮದುವೆಗೂ ಜಾಸ್ತಿ ಬ್ರೇಕ್​ ತೆಗೆದುಕೊಂಡಿಲ್ಲ. ಸದ್ಯ ಕೃಷ್ಣ gmail.com ಸಿನಿಮಾದ ಶೂಟಿಂಗ್​​ ಮುಗಿಸಿರುವ ಕೃಷ್ಣ, ನಿರ್ದೇಶಕ ದೀಪಕ್​ ಅರಸ್​​ ಆ್ಯಕ್ಷನ್​ ಕಟ್​ ಹೇಳ್ತಿರುವ ಶುಗರ್​ ಫ್ಯಾಕ್ಟರಿಯಲ್ಲಿ ತೆರೆ ಮೇಲೆ ಮಿಂಚೋಕೆ ರೆಡಿಯಾಗಿದ್ದಾರೆ. ಹೌದು.. ಸದ್ಯ ಶೇಕಡ 70ರಷ್ಟು ಶೂಟಿಂಗ್​ ಮುಗಿಸಿರುವ ಶುಗರ್​ ಫ್ಯಾಕ್ಟರಿ ಚಿತ್ರತಂಡ, ಇದೇ ಜೂನ್​ 12 ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬದ ದಿನ ಒಂದು ಸ್ಪೆಷಲ್​ ಟೀಸರ್​ ಬಿಡುಗಡೆ ಮಾಡಲು ಸಜ್ಜಾಗಿದೆ.

ಇದೊಂದು ವಿಡಿಯೋ ಟೀಸರ್​ ಆಗಿದ್ದು, ಇದೇ ಜೂನ್ 12ರಂದು ಆನಂದ್ ಆಡಿಯೋ ಯೂ ಟ್ಯೂಬ್‌ ಚಾನಲ್​ನಲ್ಲಿ ಟೀಸರ್ ಬಿಡುಗಡೆಯಾಗಲಿದೆ. ಬೆಂಗಳೂರು ಹಾಗೂ ಗೋವಾದಲ್ಲಿ ಸದ್ಯ ಚಿತ್ರೀಕರಣ ನಡೆಸಿರುವ ಶುಗರ್​ ಫ್ಯಾಕ್ಟರಿ ತಂಡ, ಲಾಕ್​​ಡೌನ್​ ಮುಗಿಯುತ್ತಿದ್ದಂತೆ ಮತ್ತೆ ಕ್ಯಾಮೆರಾ ಹಿಡಿದು ಆ್ಯಕ್ಷನ್​​ ಹೇಳುವ ತವಕದಲ್ಲಿದ್ದಾರೆ. ಅಂದ್ಹಾಗೇ, ವಿಡಿಯೋ ತುಣುಕುಗಳನ್ನ ಬಳಸಿಕೊಂಡು ವಿಭಿನ್ನವಾಗಿ ಬರ್ತ್​ಡೇ ಟೀಸರ್ ನಿರ್ಮಾಣ ಮಾಡಲಾಗಿದೆ ಅನ್ನೋದು ಚಿತ್ರತಂಡದ ಮಾತು.

ಇನ್ನು ಈ ಬಗ್ಗೆ ನಿರ್ದೇಶಕ ದೀಪಕ್​ ಅರಸ್​​ ನ್ಯೂಸ್​ ಫಸ್ಟ್​​ ಜೊತೆ ಮಾತನಾಡಿದ್ದು,

ವಿಭಿನ್ನವಾದ ಬರ್ತ್​ಡೇ ಟೀಸರ್​ ಬಿಡುಗಡೆ ಮಾಡಲು ಹೊರಟಿದ್ದೇವೆ. ವಿಡಿಯೋ ತುಣುಕುಗಳನ್ನ ಇದರಲ್ಲಿ ಬಳಸಲಾಗಿದೆ. . ಹೀರೋ ಕ್ಯಾರೆಕ್ಟರ್​ನ ಪೋಟ್ರೇ ಮಾಡುವಂತ ಆ್ಯಟಿಟ್ಯೂಡ್​​ ಟೀಸರ್​. Attitude is Everything ಅನ್ನೋ ಕಾನ್ಸೆಪ್ಟ್​​ ಮೇಲೆ ಚಿತ್ರಣ ಮಾಡಲಾಗಿದೆ. ಶೇಕಡ 70ರಷ್ಟು ಶೂಟಿಂಗ್​ ಮುಗಿದಿದೆ. ಗೋವಾದಲ್ಲಿ ಮೂರು ಹಾಡುಗಳ ಚಿತ್ರೀಕರಣ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಇನ್ನೂ ಮೂರು ಹಾಡುಗಳ ಚಿತ್ರೀಕರಣ ಮಾಡೋದಿದೆ. ಇದಲ್ಲದೇ, ವಿದೇಶದಲ್ಲಿ ಒಂದು ಸಾಂಗ್​ ಶೂಟ್​ ಮಾಡಬೇಕಿದೆ.

ದೀಪಕ್ ಅರಸ್​​, ಶುಗರ್​ ಫ್ಯಾಕ್ಟರಿ ನಿರ್ದೇಶಕ

ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಶುಗರ್​ ಫ್ಯಾಕ್ಟರಿಗೆ ಬಂಡವಾಳ ಹೂಡ್ತಿದ್ದು, ಸಿನಿಮಾ ವಿಶೇಷ ರೀತಿಯಲ್ಲಿ ಮೂಡಿ ಬರುವ ನಿರೀಕ್ಷೆಯನ್ನ ಈ ಟೀಸರ್​ ಮೂಲಕವೂ ತೋರಿಸಲು ಹೊರಟಿದ್ದಾರೆ. ಕಬೀರ್​ ರಫಿ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ‌ಧನಂಜಯ್ ಅವರ ನೃತ್ಯ ನಿರ್ದೇಶನ ಎಲ್ಲವೂ ಪ್ರೇಕ್ಷಕರನ್ನ ರಂಜಿಸೋಕೆ ರೆಡಿಯಾಗಿದೆ.

ಅಂದ್ಹಾಗೇ ನಟ ಡಾರ್ಲಿಂಗ್​ ಕೃಷ್ಣಗೆ ಈ ಸಿನಿಮಾದಲ್ಲಿ ಮೂವರು ನಾಯಕಿಯರಿದ್ದು, ಮೂವರೂ ಕರಾವಳಿಯ ಮಂಗಳೂರಿನವರು ಅನ್ನೋದೇ ವಿಶೇಷ. ಸೋನಲ್​ ಮೊಂತೆರೋ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪ ಶೆಟ್ಟಿ ನಾಯಕಿರಾಗಿ ಕೃಷ್ಣನಿಗೆ ಜೋಡಿಯಾಗಿದ್ದಾರೆ.

The post ಮೊನ್ನೆ ತಾನೆ ಮದುವೆಯಾದ ಕೃಷ್ಣ; ಇದೇನಿದು ಹೊಸ ಅವತಾರ?! appeared first on News First Kannada.

Source: newsfirstlive.com

Source link