ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೊನ್ನೆಯಷ್ಟೇ ದುಬೈ ಶೇಖ್ ರೀತಿ ಕಾಣಿಸಿಕೊಂಡಿದ್ದರು. ಇಂದು ಟಿಪ್ಪು ಜಯಂತಿಯ ಅಂಗವಾಗಿ ಟಿಪ್ಪು ಟೋಪಿ, ಶಾಲು ಧರಿಸಿ ಕಾಣಿಸಿಕೊಂಡಿದ್ದು, ಈ ವಿಭಿನ್ನ ವೇಷಗಳು ಸಾಕಷ್ಟು ಮಂದಿಯನ್ನು ಆಕರ್ಷಿಸಿದೆ.
ಇಂದು ಟಿಪ್ಪು ಜಯಂತಿ ಹಿನ್ನಲೆಯಲ್ಲಿ ಟಿಪ್ಪು ಗೆಟಪ್ನಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರ ಮರಣ ಅಪ್ಪಿದ್ದರು. ಇಂತಹ ತ್ಯಾಗ ಮಾಡಿದ ಕಾರಣ ಟಿಪ್ಪು ಜಯಂತಿ ಮಾಡಿದರೇ ತಪ್ಪೇನು.. ನಾನು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಮಾಡಿದ್ದೆವು. ಆದರೆ ಆರ್ಎಸ್ಎಸ್, ಬಿಜೆಪಿ ನಾಯಕರು ಅದನ್ನು ಈಗ ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಇವ್ರು ದುಬೈ ಶೇಖ್ ಅಲ್ಲ..ಬಟ್ ನಮ್ಮೂರ್ ಶೇಖ್.. ಇವಱರು? ಗೆಸ್ ಮಾಡಿ..!
ಈ ಹಿಂದೆ ಮಾಜಿ ಸಿಎಂ ಬಿಎಸ್ವೈ ಕೆಜಿಪಿ ಪಕ್ಷ ಮಾಡಿದಾಗ ಟಿಪ್ಪು ಪೇಟವನ್ನೇ ಧರಿಸಿ ಪೋಸ್ ಕೊಟ್ಟಿದ್ದರು. ಅಲ್ಲದೇ ಜಗದೀಶ್ ಶೆಟ್ಟರ್, ಆರ್.ಅಶೋಕ್ ಸೇರಿದಂತೆ ಹಲವರು ಜಯಂತಿ ಮಾಡಿದ್ದಾರೆ.. ದೇಶದ ರಾಷ್ಟ್ರಪತಿಗಳೇ ತಮ್ಮ ಭಾಷಣದಲ್ಲಿ ಟಿಪ್ಪು ಹೆಸರನ್ನು ಪ್ರಸ್ತಾಪ ಮಾಡಿದ್ದರು. ಬಿಜೆಪಿ ಅವರಿಗೆ ಎರಡು ನಾಲಿಗೆ.. ಕಾಮಾಲೆ ಕಣ್ಣು ಇರೋರಿಗೆ ಕಣೋದೆಲ್ಲವೂ ಹಳದಿ ಎಂದು ಕಿಡಿಕಾರಿದರು. ಅಲ್ಲದೇ ಇದೇ ವೇಳೆ ಟಿಪ್ಪುಅವಧಿಯಲ್ಲಿ ನಡೆದ ಕಾರ್ಯಗಳ ಬಗ್ಗೆ ತಿಳಿಸಿದರು.