ಮೊಬೈಲ್​ನಲ್ಲಿ ಸೇವ್​ ಆಗಿರೋ ‘ಡೊಲ್ಲಾ’ ನಂಬರ್​ ಯಾರದ್ದು.? ಗುಟ್ಟು ರಟ್ಟು​ ಮಾಡಿದ ರಾಧಿಕಾ ಪಂಡಿತ್​


ಸ್ಯಾಂಡಲ್​ವುಡ್​ನ ಸೂಪರ್​ ಸ್ಟಾರ್​ ದಂಪತಿ ಎಂದರೆ ಅದು ರಾಕಿಂಗ್​ ಸ್ಟಾರ್​ ಯಶ್​ ಮತ್ತು ಸಿಂಡ್ರೆಲ್ಲಾ ರಾಧಿಕಾ ಪಂಡಿತ್​. ಅಷ್ಟರ ಮಟ್ಟಿಗೆ ಫೇಮಸ್​ ಈ ಜೋಡಿ. ರೀಲ್​ ನಲ್ಲಿ ಮಾತ್ರ ಅಲ್ಲದೆ, ರಿಯಲ್​ ಲೈಫ್​ನಲ್ಲೂ ಕೂಡ ಲವ್​ ಮಾಡಿ ಮದುವೆ ಆಗಿ ನವ-ಯುವ ಪ್ರೇಮಿಗಳಿಗೆ ರೋಲ್​ ಮಾಡಲ್​ ಆಗಿದ್ದಾರೆ, ಈ ಸ್ಯಾಂಡಲ್​ವುಡ್​ನ ಆದರ್ಶ ದಂಪತಿಗಳು.

ಸುಮಾರು ವರ್ಷಗಳ ಕಾಲ ಪ್ರೀತಿಸಿ ವಿವಾಹವಾದ ಈ ಜೋಡಿಗೆ, ಇವರ ಪ್ರೀತಿಯ ಸಂಕೇತವಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇದೆಲ್ಲಾ ಗೊತ್ತಿರೋ ವಿಚಾರವೇ ಈಗ್ಯಾಕೆ ಅಂತೀರಾ? ಅಲ್ಲೆ ಇರೋದು ವಿಚಾರ. ಯಶ್​ ಮತ್ತು ರಾಧಿಕಾ ಲವ್​ ಮಾಡೋ ವಿಚಾರ, ಮದುವೆ ನಿಶ್ಚಯ ಆದ ಮೇಲೆ ಎಲ್ಲರಿಗೂ ಶಾಕ್​ ಆಗಿತ್ತು.

ಆದರೆ ಮದುವೆಗೂ ಮೊದಲೂ ರಾಧಿಕಾ ಮತ್ತು ಯಶ್​ ಡೇಟಿಂಗ್​ ಸಮಯದಲ್ಲಿ ರಾಧಿಕಾ ಯಶ್​ರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಿದ್ದರು ಅನ್ನೋದೇ ಸ್ವಾರಸ್ಯಕರ ವಿಚಾರ. ಹೌದು ರಾಧಿಕಾ ಮತ್ತು ಯಶ್​ ಡೇಟಿಂಗ್​ ಮಾಡುವ ಸಮಯದಲ್ಲಿ ಯಾರಿಗೂ ಅನುಮಾನ ಬಾರದಂತೆ ಎಚ್ಚರ ವಹಿಸಿದ್ದರಂತೆ ರಾಧಿಕಾ ಪಂಡಿತ್. ಯಶ್​ ಹೆಸರನ್ನು ಸೇವ್​ ಮಾಡಿಕೊಂಡರೆ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಒಂದು ಕೋಡ್​ ವರ್ಡ್ ಬಳಿಸಿದ್ದರಂತೆ ರಾಧಿಕಾ. ಅದೇನಂದ್ರೆ ರಾಧಿಕಾ ಅಚ್ಚ ಕನ್ನಡಿತಿಯಾದರೂ ಮಾತೃ ಭಾಷೆ ಕೊಂಕಣಿ. ಹೀಗಾಗಿ ಯಾರಿಗೂ ಅಷ್ಟು ಸುಲುಭವಾಗಿ ಅರ್ಥ ಆಗಬಾರದು ಎಂದು, ರಾಧಿಕಾ ಯಶ್​ ಹೆಸರನ್ನು ಕೊಂಕಣಿ ಭಾಷೆಯಲ್ಲಿ ‘ಡೊಲ್ಲಾ’ ಎಂದು ನಿಕ್​ ನೇಮ್ ಆಗಿ ಸೇವ್​ ಮಾಡಿಕೊಂಡಿದ್ದರಂತೆ. ‘ಡೊಲ್ಲಾ’ಎಂದರೆ ಕೊಂಕಣಿ ಭಾಷೆಯಲ್ಲಿ ಡುಮ್ಮ ಅಥವಾ ಫ್ಯಾಟ್​ ಎಂದರ್ಥ.

ಯಶ್​ರನ್ನು ಅಂದಿನ ದಿನಗಳಲ್ಲಿ ರಾಧಿಕಾ ‘ಡೊಲ್ಲಾ’ ಎಂದು ಕರೆಯುತ್ತಿದ್ದರು. ಇಂದು ಕೂಡ ಅದೇ ರೀತಿ ಸೇವ್​ ಮಾಡಿಕೊಂಡಿದ್ದಾರಂತೆ.  ಎಷ್ಟೇ ಆದರೂ ಸಕ್ಸಸ್​ ಪುಲ್​ ಲವ್​ ಸ್ಟೋರಿ ಆಗಿರುವುದರಿಂದ ಆ ಪ್ರೀತಿ ಇಂದು ಮತ್ತೆ ಮುಂದೆ ಹೀಗೆ ಇರಲಿ ಎಂಬುದು ಯಶ್​ ಆ್ಯಂಡ್​ ರಾಧಿಕಾ ಪಂಡಿತ್​ ಡೈ ಹಾರ್ಡ್ ಫ್ಯಾನ್​ ಗಳ ಆಶಯ.

News First Live Kannada


Leave a Reply

Your email address will not be published. Required fields are marked *