ಭಾರತದಲ್ಲಿ ನಿಷೇಧಿತ ಪಬ್-ಜಿ ಗೇಮ್ ಮಾಡುತ್ತಿರುವ ಅವಾಂತರಗಳು ಒಂದೆರಡಲ್ಲ. ಈ ಗೇಮ್ನ ಚಟಕ್ಕೆ ಬಿದ್ದರುವ ಹಲವಾರು ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಳಿಯ ಮೇಲೆ ಪಬ್ಜಿ ಗೇಮ್ನಲ್ಲಿ ತಲ್ಲೀನರಾಗಿದ್ದ ಇಬ್ಬರು ಬಾಲಕರ ಮೇಲೆ ರೈಲು ಹರಿದು ಇಬ್ಬರು ಸಾವನ್ನಪ್ಪಿದ ದುರ್ಟಘನೆ ಮಥುರಾ-ಕಸ್ಗಂಜ್ನ ರೈಲು ಹಳಿಯ ಮೇಲೆ ಸಂಭವಿಸಿದೆ..
ಬಾಲಕರು ಪಬ್ಜಿ ಗೇಮ್ ಆಡುತ್ತಾ ರೈಲು ಹಳಿಯ ಮೇಲೆ ಕುಳಿತಿದ್ದಾರೆ. ಈ ವೇಳೆ ಆಗಮಿಸಿದ ಗೂಡ್ಸ್ ಟ್ರೈನ್ ಇಬ್ಬರ ಮೇಲೆ ಹರಿದಿದ್ದು ಬಾಲಕರು ಸಾವನ್ನಪ್ಪಿದ್ದಾರೆ. ಇನ್ನು ಯುವಕರ ಮೋಬೈಲ್ಗಳನ್ನು ಪರಿಶಿಲನೆ ನಡೆಸಿದಾಗ ಮೊಬೈಲ್ಗಳಲ್ಲಿ ಪಬ್ಜಿ ಗೇಮ್ ಆಡುತ್ತಿದ್ದಾಗಿ ಕಂಡು ಬಂದಿದೆ ಎಂದು ಜಮನಾಪುರ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಮೃತ ಬಾಲಕರನ್ನು ಗೌರವ್ ಮತ್ತು ಕಪಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು ಮಕ್ಕಳು ಈ ಗೇಮ್ಗೆ ಅಡಿಕ್ಟ್ ಆಗಿರುವ ಕುರಿತು ಯಾವುದೇ ಮಾಹಿತಿಯಿರಲಿಲ್ಲ ಎಂದು ಪೋಷಕರು ಹೇಳಿದ್ದಾರೆ. ದೇಶದಲ್ಲಿ ಈ ಗೇಮ್ನ್ನು ಕೇಂದ್ರ ಸಕಾ್ರ ನಿಷೇಧಿದೆಯಾದರು ಹಲವಾರು ಅನಧಿಕೃತ ವೆಬ್ಸೈಟ್ಗಳ ಮೂಲಕ ಇದನ್ನು ಡೌನ್ಲೋಡ್ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ:ತಂಗಿ ಗಂಡನೊಂದಿಗೆ ಅಕ್ರಮ ಸಂಬಂಧ: ಪತಿ ಕೊಲೆಗೆ ಹೆಂಡತಿ ಸ್ಕೆಚ್; ಮುಂದೇನಾಯ್ತು?