ಮೊಬೈಲ್​ ನೋಡುತ್ತಾ ಮೆಟ್ರೋ ಹಳಿಗೆ ಬಿದ್ದ ವ್ಯಕ್ತಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | Man fall into metro track while using mobile phone rescued


ಮೊಬೈಲ್​ ನೋಡುತ್ತಾ ಮೆಟ್ರೋ ಹಳಿಗೆ ಬಿದ್ದ ವ್ಯಕ್ತಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮೆಟ್ರೋ ಹಳಿಗೆ ವ್ಯಕ್ತಿ ಬಿದ್ದ ದೃಶ್ಯ

ಮೊಬೈಲ್ (Mobile​ ದೈನಂದಿನ ಬದುಕಿನ ಭಾಗವಾಗಿದೆ. ಪ್ರತೀ ಕ್ಷಣವೂ ಕೈಯಲ್ಲಿ ಮೊಬೈಲ್​ ಇರಬೇಕು. ಸಾರ್ವಜನಿಕವಾಗಿ ಓಡಾಡುವಾಗಲಂತೂ ಕೈಯಲ್ಲಿ ಮೊಬೈಲ್​, ಕಿವಿಗೆ ಇಯರ್​ಫೋನ್ ಹಾಕಿಕೊಂಡು ತಮ್ಮದೇ ಲೋಕದಲ್ಲಿ ಇರುವ​  ಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ರೀತಿ ಸಾರ್ವಜನಿಕವಾಗಿಯೂ ತಲೆತಗ್ಗಿಸಿ ಮೊಬೈಲ್​ ನೋಡುತ್ತಾ ಹೋಗುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದ ಈ ಹಿಂದೆಯೂ ಸಾಕಷ್ಟು ಅಪಘಾತಗಳು ಸಂಭಿವಿಸಿದೆ. ಈಗ ಅಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಮೊಬೈಲ್​ ನೋಡುತ್ತಾ ನಡೆದುಕೊಂಡು ಬರುವಾಗ ಮೆಟ್ರೋ (Metro) ಹಳಿಯ ಮೇಲೆ ಬಿದ್ದ ಘಟನೆ  ನಡೆದಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ದೆಹಲಿಯ ಶಹದಾರ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಮೊಬೈಲ್​ ನೋಡಿಕೊಂಡು ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದು. ತಕ್ಷಣ ಆತ ಆಯತಪ್ಪಿ  ಮೆಟ್ರೋ ಹಳಿಯ ಮೇಲೆ ಬೀಳುತ್ತಾನೆ. ಅದೃಷ್ಟವಶಾತ್​ ಅಲ್ಲಿಯೇ ಇದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಬಂದು ಬಿದ್ದಲ್ಲಿಂದ ಏಳಲು ಕಷ್ಟಪಡುತ್ತಿದ್ದ ವ್ಯಕ್ತಿಯನ್ನು ಮೇಲೆಕ್ಕೆ ಎತ್ತಿ ಪ್ಲಾಟ್​ಪಾರ್ಮಗೆ ಹತ್ತಿಸಿದ್ದಾರೆ. ವರದಿಯ  ಪ್ರಕಾರ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಮೆಟ್ರೋ ಹಳಿಗೆ ಬಿದ್ದ ವ್ಯಕ್ತಿಯನ್ನು 58 ವರ್ಷದ ಶೈಲೇಂದರ್​ ಮೆಹತಾ ಎಂದು ಗುರುತಿಸಲಾಗಿದೆ. ಸದ್ಯ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯವನ್ನು ಸಿಐಎಸ್​ಎಫ್​ ಟ್ವಿಟರ್​ ಖಾತೆ ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗಿದೆ.

TV9 Kannada


Leave a Reply

Your email address will not be published.