ಬೆಂಗಳೂರು: ದಿನೇ ದಿನೇ ಬೆಂಗಳೂರಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಾಯಿದೆ. ಎಲ್ಲೂ ಬೆಡ್​ಗಳು ಸಿಗ್ತಾಯಿಲ್ಲ, ಆಕ್ಸಿಜನ್​ ಸಿಗದೇ ನೂರಾರು ಜನ ಈ ಮಹಾಮಾರಿಗೆ ತಮ್ಮ ಪ್ರಾಣವನ್ನ ಕಳೆದುಕೊಳ್ತಿದ್ದಾರೆ. ಈ ನಡುವೆ ತಮ್ಮ 63 ವರ್ಷದ ತಂದೆಯನ್ನ ಉಳಿಸಿಕೊಳ್ಳಲು ಮಕ್ಕಳಿಬ್ಬರು ಹರಸಾಹಸ ಪಟ್ಟ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ. ಕೊನೆಗೂ ತಮ್ಮ ತಂದೆಯನ್ನ ಉಳಿಸಿಕೊಳ್ಳೋದಕ್ಕೆ ಆಗ್ಲೇ ಇಲ್ಲ ಅಂತ ಮಕ್ಕಳಿಬ್ಬರ ಅಳಲು ತೋಡಿಕೊಂಡಿದ್ದಾರೆ.

100 ಆಸ್ಪತ್ರೆಗಳನ್ನ ಸುತ್ತಿದ್ರೂ ಸಿಕ್ಕಿಲ್ಲ ಆಕ್ಸಿಜನ್
ನಮ್ಮ ತಂದೆಯ ಸಾವಿಗೆ ಸರ್ಕಾರನೇ ಕಾರಣ. ಆಕ್ಸಿಜನ್​ ಸಿಗದೇ ನಾವು ನಮ್ಮಪ್ಪನನ್ನು ಕಳೆದುಕೊಂಡಿದ್ದೀವಿ, ನಾವು ಇಬ್ಬರು ಮಕ್ಕಳಿದ್ದರೂ ನಮ್ಮ ತಂದೆಯನ್ನ ಉಳಿಸಿಕೊಳ್ಳಲಾಗಲಿಲ್ಲ. ಆಕ್ಸಿಜನ್​ಗಾಗಿ ಬೆಂಗಳೂರೆಲ್ಲಾ ಸುತ್ತಾಡಿದ್ವಿ, ಕಾರಿನಲ್ಲೇ ತಂದೆಯನ್ನ ಹೊತ್ತು ತಿರುಗಾಡ್ತಿದ್ವಿ. ಯಾವ ಆಸ್ಪತ್ರೆಗೆ ಹೋದ್ರೂ BU ನಂಬರ್ ಅಂತ ಕೇಳ್ತಾರೆ. 4 ದಿನ ಆಗಿದ್ರೂ BU ನಂಬರ್ ಜನರೇಟ್​ ಆಗಿರ್ಲಿಲ್ಲ. ಪ್ರೈವೇಟ್ ಆಸ್ಪತ್ರೆಯವರಂತು ಕೋವಿಡ್​ ಅಂದ್ರೆ ಸಾಕು ಒಳಗಡೆ ಬಿಟ್ಟಿಕೊಳ್ಳಲಿಲ್ಲ. ಇಂಥ ಪರಿಸ್ಥಿತಿ ಎದುರಾಗಿತ್ತು. ಏನ್​ ಮಾಡ್ಬೇಕು ನಾವು..? ಬಿಬಿಎಂಪಿ ಕೇರ್ ಸೆಂಟರ್​ಗೆ ಕಾಲ್ ಮಾಡಿದ್ರೆ, ಅವ್ರು ಕೂಡ ಬಿಯು ನಂಬರ್ ಕೊಡ್ತಿಲ್ಲ ಹೇಗೆ ಒದ್ದಾಡ್ಬೇಕು’ ಎಂದು ತಂದೆಯನ್ನ ಕಳೆದುಕೊಂಡ ಮಕ್ಕಳು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಜಗಳವಾಡಿ ಬೌರಿಂಗ್​ ಆಸ್ಪತ್ರೆಯಲ್ಲಿ ಬೆಡ್​ ಇಸ್ಕೊಂಡ್ವಿ
ಕೊನೆಗೂ ಬೌರಿಂಗ್ ಆಸ್ಪತ್ರೆಯಲ್ಲಿ ಜಗಳವಾಡಿ ನಮ್ಮಪ್ಪನಿಗೆ ಬೆಡ್ ಇಸ್ಕೊಂಡ್ವಿ. ಅಡ್ಮಿಟ್ ಮಾಡೋವರೆಗೂ ಒಂದು ಹೋರಾಟ ಅಂದ್ರೆ, ಆಸ್ಪತ್ರೆಗೆ ಸೇರಿಸಿದ್ಮೇಲೆ ಮತ್ತೊಂದ್​ ಹೋರಾಟ. ಖಾಸಗಿ ಆಸ್ಪತ್ರೆಗಳಲ್ಲಿ ಒಂಥರವಾದ್ರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನೊಂದು ತರ. ಎಲ್​ ಹೋದ್ರೂ, ಎಲ್ಲದಕ್ಕೂ ದುಡ್ಡು ದುಡ್ಡು ಅಂತ ಸಾಯ್ತಾರೆ. ಮೊಬೈಲ್ ಚಾರ್ಜ್ ಹಾಕ್ಬೇಕು ಅಂದ್ರೂ ದುಡ್ಡು, ರೋಗಿನಾ ನೋಡ್ಬೇಕಂದ್ರೂ ದುಡ್ಡು. ಎಲ್ಲಾದಕ್ಕೂ ದುಡ್ಡೇ. ಈಗ ನಾವು ಎಷ್ಟ್​ ಬೇಕೋ ಅಷ್ಟ್​ ದುಡ್ಡು ಕೊಡ್ತೀವಿ, ನಮ್ಮ ತಂದೆಯನ್ನ ವಾಪಾಸ್ ಕೊಡ್ತಾರಾ..? ಏನೇ ಕೇಳೋದಕ್ಕೆ ಹೋದ್ರು ಎಲ್ಲಾದಕ್ಕೂ ರೇಗ್ತಾರೆ, ಅವಾಜ್​ ಹಾಕ್ತಾರೆ. ಕುಡಿಯೋಕೆ ನೀರು ಕೇಳಿ ಕೊಡಲ್ಲ. ಆ ಕಡೆಯಿಂದ ಡಾಕ್ಟರ್​ಗಳು ರೇಗಾಡ್ತಾರೆ, ಈ ಕಡೆ ವಾರ್ಡ್ ಬಾಯ್ ರೇಗಾಡ್ತಾನೆ. ಈ ಆಸ್ಪತ್ರೆಯವ್ರು ಎಲ್ಲವನ್ನೂ ಮಾರಿಕೊಳ್ತಿದ್ದಾರೆ. ಚಿಕಿತ್ಸೆ ಕೊಡಿ ಅಂತ ಅಂಗಲಾಚಿ ಕೇಳ್ಕೊಂಡ್ವಿ, ಕೊಡ್ಲಿಲ್ಲ. 2 ದಿನ ಬರೀ ಆಕ್ಸೀಜನ್​ನಲ್ಲೇ ಮಲಗಿಸಿದ್ರು, ಬೇಡ್ಕೊಂಡ್ವಿ ಸರ್, ಕೊನೆಗೂ ನಮ್ಮ ಅಪ್ಪ ಶವವಾಗಿ ಬಂದಿದ್ದಾರೆ’ ಅಂತಾ ಮೃತ ವ್ಯಕ್ತಿಯ ಮಕ್ಕಳು ಆರೋಪ ಮಾಡಿದ್ದಾರೆ.

The post ‘ಮೊಬೈಲ್ ಚಾರ್ಜಿಂಗ್​ಗೂ ದುಡ್ಡು, ರೋಗಿನ ನೋಡಲೂ ದುಡ್ಡು.. ಬೇಡ್ಕೊಂಡ್ವಿ ಸರ್..’ -ತಂದೆ ಕಳೆದುಕೊಂಡು ಮಕ್ಕಳ ಆಕ್ರಂದನ appeared first on News First Kannada.

Source: newsfirstlive.com

Source link