ಮೊಬೈಲ್ ಫೋನಲ್ಲಿ ಮಾತನಾಡುತ್ತಾ ಮ್ಯಾನ್​​ಹೋಲ್​​ಗೆ ಬಿದ್ದ ಮಹಿಳೆ; ವೈರಲ್ ವಿಡಿಯೊ | Patna woman accidentally fell into a manhole while talking to someone on her mobile phone


ಮೊಬೈಲ್ ಫೋನಲ್ಲಿ ಮಾತನಾಡುತ್ತಾ ಮ್ಯಾನ್​​ಹೋಲ್​​ಗೆ ಬಿದ್ದ ಮಹಿಳೆ; ವೈರಲ್ ವಿಡಿಯೊ

ಮ್ಯಾನ್​​ಹೋಲ್ ಗೆ ಬಿದ್ದ ಮಹಿಳೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ (Mobile Phoen) ಪ್ರತಿಯೊಬ್ಬರ ಜೀವನದ ಬಹುಮುಖ್ಯ ಭಾಗವಾಗಿದೆ. ಇದು ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ.  ಏಕೆಂದರೆ ಮೊಬೈಲ್ ಫೋನ್ ಬಳಸಿ ನಾವೆಲ್ಲರೂ ಪ್ರಪಂಚದಾದ್ಯಂತದ ನಮ್ಮ ಪ್ರೀತಿಪಾತ್ರರನ್ನು ಒಂದು ಸೆಕೆಂಡಿನಲ್ಲಿ ಸಂಪರ್ಕಿಸಬಹುದು. ಆದಾಗ್ಯೂ, ಮೊಬೈಲ್ ಫೋನ್‌ಗಳಲ್ಲಿ ಮಾತನಾಡುತ್ತಾ ಮೈಮರೆತ ವ್ಯಕ್ತಿಗಳು ಪ್ರಾಣವನ್ನು ಕಳೆದುಕೊಂಡದ್ದೂ ಇದೆ. ಇಂಥದ್ದೇ ಒಂದು ಘಟನೆ ಪಟನಾದಲ್ಲಿ ನಡೆದಿದೆ. ಮಹಿಳೆಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಮಾತನಾಡುತ್ತಾ ಬರುತ್ತಿದ್ದಾಗ ಆಕಸ್ಮಿಕವಾಗಿ ಮ್ಯಾನ್‌ಹೋಲ್‌ಗೆ (manhole) ಬಿದ್ದಿದ್ದಾರೆ. ಘಟನೆಯ ವಿಡಿಯೊ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಬಿಹಾರದ ರಾಜಧಾನಿ ಪಟನಾದಲ್ಲಿ(Patna) ಈ ಘಟನೆ ವರದಿಯಾಗಿದೆ. ಉತ್ಕರ್ಷ್ ಸಿಂಗ್ ಎಂಬ ಟ್ವೀಟಿಗರು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆ ಫೋನ್‌ನಲ್ಲಿ ಮಾತನಾಡುತ್ತಾ ವಾಹನದ ಹಿಂದೆ ನಡೆದುಕೊಂಡು ಹೋಗುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಅದೇ ರಸ್ತೆಯೊಂದರಲ್ಲಿ ನಿಲ್ಲಿಸಿದ್ದ ಇ-ರಿಕ್ಷಾ ಮುಂದೆ ಹೋಗುತ್ತದೆ. ವಾಹನದ ಹಿಂದೆ ಬರುತ್ತಿದ ಮಹಿಳೆ ಮ್ಯಾನ್​​ಹೋಲ್​​ಗೆ ಬೀಳುತ್ತಿರುವುದು ವಿಡಿಯೊದಲ್ಲಿದೆ. ಮಹಿಳೆ ಮ್ಯಾನ್‌ಹೋಲ್‌ಗೆ ಬಿದ್ದ ತಕ್ಷಣ ಮಹಿಳೆಯನ್ನು ಹೊರತೆಗೆಯಲು ಸ್ಥಳೀಯರು ಅವರ ಕಡೆಗೆ ಧಾವಿಸಿದರು. ಸುಮಾರು 10 ಜನರು ಮಹಿಳೆಯನ್ನು ಮೇಲೆತ್ತಿದ್ದಾರೆ. ಇಲ್ಲಿಯವರೆಗೆ, ವಿಡಿಯೊ 230 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 10 ಲೈಕ್‌ಗಳನ್ನುಪಡೆದಿದೆ. 45 ಸೆಕೆಂಡ್‌ಗಳ ವಿಡಿಯೊಗೆ ಕೆಲವು ಕಾಮೆಂಟ್‌ಗಳು ಕೂಡ ಬಂದಿವೆ.ಸದ್ಯ ಮಹಿಳೆಗೆ ಗಾಯವಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯರು ಮಹಿಳೆಯನ್ನು ಗುಂಡಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಡಿಯೊ ತೋರಿಸುತ್ತದೆ.

ಅಂದ ಹಾಗೆ ಈ ಮ್ಯಾನ್‌ಹೋಲ್‌ನ ಮುಚ್ಚಳ ಎಲ್ಲಿದೆ ಎಂದು ಯಾವುದೇ ವರದಿಗಳಿಲ್ಲ.

TV9 Kannada


Leave a Reply

Your email address will not be published. Required fields are marked *