ಮೊಬೈಲ್ ವಿಚಾರಕ್ಕೆ ಮನೆ ಬಿಟ್ಟು ಹೋಗಿದ್ದಾತ ಶವವಾಗಿ ಪತ್ತೆ; ಕೇಳಿದನ್ನು ಪೋಷಕರು ಕೊಡಿಸಲಿಲ್ಲವೆಂದು ಬೆಂಕಿ ಹಚ್ಚಿಕೊಂಡ ಯುವಕ | Student set fire him self for parents refusing to buy him mobile phone in bellary


ಮೊಬೈಲ್ ವಿಚಾರಕ್ಕೆ ಮನೆ ಬಿಟ್ಟು ಹೋಗಿದ್ದಾತ ಶವವಾಗಿ ಪತ್ತೆ; ಕೇಳಿದನ್ನು ಪೋಷಕರು ಕೊಡಿಸಲಿಲ್ಲವೆಂದು ಬೆಂಕಿ ಹಚ್ಚಿಕೊಂಡ ಯುವಕ

ನಾಗರಾಜ್

ಬಳ್ಳಾರಿ: ಮೊಬೈಲ್(Mobile Phone) ವಿಚಾರಕ್ಕೆ ಮನೆ ಬಿಟ್ಟು ಹೋಗಿದ್ದಾತ ಶವವಾಗಿ(Dead Body) ಪತ್ತೆಯಾದ ಘಟನೆ ವಿಜಯನಗರದಲ್ಲಿ(Vijayanagara) ನಡೆದಿದೆ. ಬಡತನದ(Poverty) ಬೇಗೆಯಲ್ಲಿ ಬೇಯ್ತಿದ್ದ ಪೋಷಕರು ಮೊಬೈಲ್ ಕೊಡಿಸಲಾಗದೆ ಇದ್ದೊಬ್ಬ ಮಗನ ಬೇಡಿಕೆಯನ್ನ ಈಡೇರಿಸಲಾಗದೆ ಈಗ ಕಣ್ಣೀರಲ್ಲಿ ಕೈ ತೊಳಿಯುವಂತಾಗಿದೆ. ಮಗನನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯನಗರದ ಕೊಟ್ಟೂರಿನ ಸನ್ನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಾ ಇದ್ದ ನಾಗರಾಜ್, ಮೊಬೈಲ್ ಕೊಡಿಸುವಂತೆ ಪೋಷಕರ ಬೆನ್ನು ಬಿದ್ದಿದ್ದ. ಮೊಬೈಲ್ ವಿಚಾರಕ್ಕೆ ಹಠ ಹಿಡಿದು ಮನೆಯನ್ನೂ ಬಿಟ್ಟಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಪೋಷಕರು, ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಆ ವೇಳೆ ಸುಟ್ಟು ಕರಕಲಾದ ನಾಗರಾಜ್ನ ಮೃತದೇಹ ಪತ್ತೆಯಾಗಿದ್ದು, ಪೋಷಕರಿಗೆ ದಿಗಿಲು ಬಡಿದಿದೆ.

ಇನ್ನು ಹೇಳಿಕೇಳಿ ನಾಗರಾಜ್ ಬುದ್ಧಿವಂತ ಹುಡುಗ. SSLC ಪರೀಕ್ಷೆಯಲ್ಲಿ ಶೇಕಡಾ 98ರಷ್ಟು ಅಂಕ ಗಳಿಸಿದ್ದ ಈತ, ಪ್ರಥಮ ಪಿಯುಸಿ ಸೈನ್ಸ್ ಓದ್ತಿದ್ದ. ತನಗೆ ಓದಲು ಕಷ್ಟವಾಗುತ್ತೆ. ಹೀಗಾಗಿ ಮೊಬೈಲ್ ಕೊಡಿಸಿ. ಯೂಟ್ಯೂಬ್ ನೋಡಿಕೊಂಡೇ ಓದ್ತೀನಿ ಅಂತಾ ಸಾಕಷ್ಟುಬಾರಿ ಹೇಳಿದ್ದ. ಆದ್ರೆ ಮೊದಲೇ ಬಡತನದ ಬೇಗೆಯಲ್ಲಿ ಬೇಯ್ತಿರೋ ಪೋಷಕರಿಗೆ ಮೊಬೈಲ್ ಕೊಡಿಸೋಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಮನನೊಂದಿರೋ ನಾಗರಾಜ್, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೊಬೈಲ್ ಕೊಡಿಸಲಾಗದೆ ಇದ್ದೊಬ್ಬ ಮಗನನ್ನು ಕಳೆದುಕೊಂಡ ಹೆತ್ತವರ ದುಃಖ ಮಾತ್ರ ನಿಜಕ್ಕೂ ಘನಘೋರ.

ವರದಿ: ವೀರಪ್ಪ ದಾನಿ, ಟಿವಿ9 ಬಳ್ಳಾರಿ

TV9 Kannada


Leave a Reply

Your email address will not be published. Required fields are marked *