‘ಮೊಬೈಲ್ ಸಂಖ್ಯೆ ಬದಲಿಸಿ ಈ ಮಹಾಮೋಸ ನಡೆದಿದೆ’; ಪತಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ನಟಿ ಚೈತ್ರಾ ಹಳ್ಳಿಕೇರಿ ಆರೋಪ | Chaitra Hallikeri Press Meet She says Bank People Involved in This cheated Case


ನನ್ನ ಹೆಸರಲ್ಲಿ ಒಂದು ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ. ನನಗೆ ಗೊತ್ತಿಲ್ಲದೆ ಆ ಖಾತೆಯಲ್ಲಿ ವ್ಯವಹಾರ ಮಾಡಲಾಗಿದೆ. ಇದ್ಯಾವುದೂ ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ ಚೈತ್ರಾ.

ತಮಗೆ ಸೇರಿದ ಬ್ಯಾಂಕ್ ಖಾತೆಯನ್ನು ಕುಟುಂಬದವರೇ ದುರ್ಬಳಕೆ ಮಾಡಿದ್ದಾರೆ ಎಂದು ನಟಿ ಚೈತ್ರಾ ಹಳ್ಳಿಕೇರಿ (Chaitra Hallikeri) ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪತಿ ಮತ್ತು ಮಾವನ ವಿರುದ್ಧವೇ ಪೊಲೀಸರಿಗೆ ಅವರು ದೂರು ನೀಡಿದ್ದಾರೆ. ಈ ಕೇಸ್​ಗೆ ಸಂಬಂಧಿಸಿ ಅವರು ಇಂದು (ಮೇ 24) ಸುದ್ದಿಗೋಷ್ಠಿ (Press-Meet) ನಡೆಸಿದ್ದಾರೆ. ಈ ವೇಳೆ ಬ್ಯಾಂಕ್​ ವಿರುದ್ಧವೂ ಚೈತ್ರಾ ಆರೋಪ ಮಾಡಿದ್ದಾರೆ. ಹಣ ದುರ್ಬಳಕೆ ವಿಚಾರದಲ್ಲಿ ಬ್ಯಾಂಕ್​ನವರೂ ಶಾಮಿಲಾಗಿದ್ದಾರೆ ಎನ್ನುವ ಆರೋಪವನ್ನು ಅವರು ಮಾಡಿದ್ದಾರೆ. ಚೈತ್ರಾ ನೀಡಿದ ಈ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ.

‘ನನ್ನ ಹೆಸರಲ್ಲಿ ಒಂದು ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ. ನನಗೆ ಗೊತ್ತಿಲ್ಲದೆ ಆ ಖಾತೆಯಲ್ಲಿ ವ್ಯವಹಾರ ಮಾಡಲಾಗಿದೆ. ಇದ್ಯಾವುದೂ ನನ್ನ ಗಮನಕ್ಕೆ ಬಂದಿಲ್ಲ. ನಾವು ಈ ಬ್ಯಾಂಕ್​ನವರಲ್ಲಿ ಪ್ರಶ್ನೆ ಮಾಡಿದೆವು. ಆದರೆ, ಅವರು ನಮಗೆ ಮಾಹಿತಿ ನೀಡಿಲ್ಲ. ಮದುವೆ ನಂತರ ಈ ಬ್ಯಾಂಕ್ ಖಾತೆ ಓಪನ್ ಮಾಡಲಾಗಿತ್ತು’ ಎಂದು ಚೈತ್ರಾ ಮಾಹಿತಿ ಹಂಚಿಕೊಂಡಿದ್ದಾರೆ.

‘ಈ ಬ್ಯಾಂಕ್ ಖಾತೆಗೆ ನನ್ನ ಮೊಬೈಲ್​ ಸಂಖ್ಯೆ ಲಿಂಕ್ ಆಗಿರಲಿಲ್ಲ. ಹೀಗಾಗಿ, ಯಾವುದೇ ಮೆಸೇಜ್ ಬರುತ್ತಿರಲಿಲ್ಲ. ಒಂದು ಕೇಸ್​ಗೆ ಸಂಬಂಧಿಸಿ ನಾನು ಬ್ಯಾಂಕ್​ ಸ್ಟೇಟ್​ಮೆಂಟ್ ತೆಗೆದುಕೊಳ್ಳಲು ಹೋದೆ. ಬ್ಯಾಂಕ್ ಮ್ಯಾನೇಜರ್​ ಅವರು ಒಂದಷ್ಟು ಪೇಪರ್ ತಂದು ಸಹಿ ಮಾಡಿ ಎಂದರು. ಏನಿದು ಪೇಪರ್ ಎಂದು ನಾನು ಕೇಳಿದೆ. ರಿನಿವಲ್ ಪೇಪರ್​ಗಳು ಇವು ಎಂದರು. ಅವರು ತೋರಿಸಿದ ಯಾವ ಪೇಪರ್​ಗಳ ಮೇಲೂ ನನ್ನ ಸಹಿ ಇರಲಿಲ್ಲ. ಇದು ನನ್ನ ಸಹಿ ಅಲ್ಲ ಎಂದಾಗ ಬ್ಯಾಂಕ್ ಮ್ಯಾನೇಜರ್ ತಡಬಡಾಯಿಸಿದರು. ನಾನು ಮತ್ತಷ್ಟು ಪ್ರಶ್ನೆ ಮಾಡಿದಾಗ ಅವರು ಒಳ ನಡೆದರು. ಆಗ ನನಗೆ ಅನುಮಾನ ಬಂತು. ಈ ಪ್ರಕರಣದಲ್ಲಿ ಬ್ಯಾಂಕ್​ನವರೂ ಶಾಮಿಲಾಗಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಸೌತ್​ ಇಂಡಿಯನ್ ಬ್ಯಾಂಕ್​ನಲ್ಲಿ ಈ ಖಾತೆ ಇದೆ’ ಎಂದಿದ್ದಾರೆ ಅವರು

‘ನನಗೆ ಸಂಬಂಧಿಸಿದ ಚಿನ್ನ ನನ್ನ ಗಂಡನ ಮನೆಯಲ್ಲೇ ಇತ್ತು. ಇದನ್ನು ಬ್ಯಾಂಕ್​ನಲ್ಲಿ ಇಟ್ಟು ಅವರು ಸಾಲ ಪಡೆದಿದ್ದಾರೆ. ಇದ್ಯಾವುದೂ ನನ್ನ ಗಮನಕ್ಕೆ ಬಂದಿಲ್ಲ. 2014ಕ್ಕೆ ನಾವು ಬೆಂಗಳೂರಿಗೆ ಬಂದೆವು. 2020ರವರೆಗೆ ನಾನು ನನ್ನ ಗಂಡ ಒಟ್ಟಿಗೆ ಇದ್ದೆವು. ಈಗ ಇಬ್ಬರೂ ಬೇರೆ ಆಗಿದ್ದೇವೆ’ ಎಂದಿದ್ದಾರೆ ಚೈತ್ರಾ.

‘ಮದುವೆ ನಂತರ ನಟನೆ ಬಿಡಬೇಕು ಎಂಬ ಷರತ್ತನ್ನು ನಾನು ಪಾಲಿಸಿದ್ದೆ. ಆದರೆ, ನನಗೆ ತುಂಬಾ ಕಷ್ಟವಾಗುತ್ತಿತ್ತು. ಹೇಗೋ ಕಷ್ಟಪಟ್ಟು ಧಾರಾವಾಹಿ ನಿರ್ಮಿಸಿದ್ದೆ. ಅದರಲ್ಲಿ ಆದ ಸಂಪಾದನೆಯನ್ನೂ ಪತಿ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲದೆ ನನ್ನನ್ನು ಥಳಿಸಿದ್ದರು’ ಎಂದು ಮಾರ್ಚ್ 14, 2018ರಂದು ಚೈತ್ರಾ ಬಸವನಗುಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *