ಧಾರವಾಡ: ಮದ್ಯ ಖರೀದಿಸಲು ಹಣ ನೀಡಿಲ್ಲವೆಂದು ತನ್ನ ಅಜ್ಜಿಯನ್ನೇ ಮೊಮ್ಮಗ ಕೊಲೆಗೈದ ಘಟನೆ ಜಿಲ್ಲೆಯ ಸಪ್ತಾಪುರದ ದುರ್ಗಾ ದೇವಸ್ಥಾನದ ಬಳಿ ನಡೆದಿದೆ. ಭೀಮವ್ವ ಶಿಂಧೆ (70) ಹತ್ಯೆಯಾದ ವೃದ್ಧೆ.

ದತ್ತಾತ್ರೇಯ ಶಿಂಧೆ (23) ನಿನ್ನೆ ರಾತ್ರಿ ಮನೆಗೆ ಬಂದು ತನ್ನ ಮನೆಯವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ತಾಯಿ ಮಗನ ನಡುವೆ ಜಗಳ ನಡೆದಿದ್ದು.. ಜಗಳ ಬಿಡಿಸಲು ಬಂದ ಅಜ್ಜಿಯನ್ನ ದತ್ತಾತ್ರೇಯ ಶಿಂಧೆ ಕೊಲೆಗೈದಿದ್ದಾನೆ ಎನ್ನಲಾಗಿದೆ. ಇನ್ನು ತಾಯಿ ಗೌರವ್ವ ಸಹ ಹಲ್ಲೆಗೊಳಗಾಗಿದ್ದು ಅವರನ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಮೊಮ್ಮಗನಿಂದಲೇ ಅಜ್ಜಿಯ ಕೊಲೆ: ಕುಡಿಯಲು ಹಣ ಕೊಡದಿರುವುದೇ ತಪ್ಪಾಯ್ತಾ..? appeared first on News First Kannada.

Source: newsfirstlive.com

Source link