ಬೆಂಗಳೂರು: ಜೆಡಿಎಸ್ ಭದ್ರಕೋಟೆಯಲ್ಲಿ ಮೇಲ್ಮನೆ ಫೈಟ್ ದಿನೇ ದಿನೆ ರಂಗೇರುತ್ತಿದೆ. 2016 ಸೋಲಿಗೆ ಸೇಡು ತೀರಿಸಿಕೊಳ್ಳಲು ದಳ ಪಾಳಯ ಸಜ್ಜಾಗಿದ್ದು, ಹಾಸನ ಮರಳಿ ಪಡೆಯಲು ಅಖಾಡಕ್ಕೆ ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ಧುಮುಕಿದೆ. ಮೊಮ್ಮಗನನ್ನ ಹಾಸನಾಧಿಪತಿ ಮಾಡಲು ದೊಡ್ಡಗೌಡರು ಮಗನಿಗೆ ಕೊಟ್ಟ ಸಂದೇಶವೇನು ಗೊತ್ತಾ?
ಪರಿಷತ್ ಫೈಟ್ ಕಾವೇರುತ್ತಿದೆ. ಅದ್ರಲ್ಲೂ ದಳ ಭದ್ರಕೋಟೆ ಹಾಸನದಲ್ಲಿ ಸೇಡಿನ ಫೈಟ್ ಶುರುವಾಗ್ಬಿಟ್ಟಿದೆ. ಹಾಸನ ಪರಿಷತ್ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಜೆಡಿಎಸ್ ಮತ್ತೆ ಹಾಸನದಲ್ಲಿ ತೆನೆ ಹೊರಲು ತಂತ್ರ ಹೆಣೆಯುತ್ತಿದೆ.
2016ರ ಸೋಲಿಗೆ ಸೇಡು ತೀರಿಸಿಕೊಳ್ಳಲು ತಂತ್ರ
ಹಾಸನದಲ್ಲಿ ಸೂರಜ್ ಗೆಲುವಿಗೆ ಪಣ ತೊಟ್ಟ ದಳ
2016, ಹಾಸನ ಪರಿಷತ್ ಚುನಾವಣೆಯಲ್ಲಿ ತನ್ನ ಭದ್ರಕೋಟೆಯಲ್ಲೇ ದಳ ನೆಲಕಚ್ಚಿತ್ತು. ಚುನಾವಣೆಯಲ್ಲಿ ಸೋಲು ಕಂಡು ಮುಖಭಂಗ ಅನುಭವಿಸಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿರೋ ಜೆಡಿಎಸ್ ತನ್ನ ಅಭ್ಯರ್ಥಿ ಸೂರಜ್ ಗೆಲುವಿಗೆ ಪಣ ತೊಟ್ಟಿದೆ.
ಹಳೇ ಸೋಲು.. ಹೊಸ ಸೇಡು!
2016ರಲ್ಲಿ ನಡೆದ ವಿಧಾನ ಪರಿಷತ್ನ ಚುನಾವಣೆಯಲ್ಲಿ ದಳದಿಂದ ಸ್ಪರ್ಧಿಸಿದ್ದ ಪಟೇಲ್ ಶಿವರಾಂ ಸೋಲು ಕಂಡಿದ್ದರು. ಜೆಡಿಎಸ್ ಭದ್ರಕೋಟೆ ಹಾಸನ ಪರಿಷತ್ ವಶ ಪಡಿಸಿಕೊಂಡು ಕಾಂಗ್ರೆಸ್ ಗೆಲುವಿನ ಕೇಕೆ ಹಾಕಿತ್ತು. ಕಾಂಗ್ರೆಸ್ನ ಗೋಪಾಲಸ್ವಾಮಿ ಹಾಸನದಲ್ಲಿ ಗೆದ್ದು ಪರಿಷತ್ಗೆ ಆಯ್ಕೆಯಾಗಿದ್ರು. ಸದ್ಯ ಮತ್ತೆ ಹಾಸನವನ್ನ ಮರಳಿ ದಳ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ವ್ಯೂಹ ರಚಿಸುತ್ತಿದೆ. ಸೂರಜ್ಗೆ ಅವಿರೋಧವಾಗಿ ದಳ ಟಿಕೆಟ್ ಒಲಿದಿದ್ದು, ಹಾಸನಾಧಿಪತಿ ಪಟ್ಟ ವಶಪಡಿಸಿಕೊಳ್ಳಲು ಪುತ್ರ ರೇವಣ್ಣಗೆ ದೊಡ್ಡಗೌಡರು ಕೆಲ ಪಾಠ ಮಾಡಿದ್ದಾರೆ.
ಹಾಸನ ಸೀಟ್.. ಬಿಗ್ಫೈಟ್!
ಸಲಹೆ 1 : ಹಾಸನ ಪರಿಷತ್ ಚುನಾವಣೆಯಲ್ಲಿ ದಳ ಅಭ್ಯರ್ಥಿ ಗೆಲ್ಲಲೇಬೇಕು
ಸಲಹೆ 2 : ಹಾಸನ ದಳದ ಭದ್ರಕೋಟೆ ಎಂಬ ಸಂದೇಶ ರವಾನೆಯಾಗಬೇಕು
ಸಲಹೆ 3 : ಹಾಸನ ವಿಧಾನ ಪರಿಷತ್ ಜಯ, 2023ರ ಚುನಾವಣೆಗೆ ದಿಕ್ಸೂಚಿ
ಸಲಹೆ 4 : 2023ರಲ್ಲಿ ಹಾಸನದ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಜಯಕ್ಕೆ ಸ್ಫೂರ್ತಿ
ಸಲಹೆ 5 : ಹಾಸನದಲ್ಲಿ ವ್ಯತ್ಯಾಸ ಆದರೆ, ರಾಜ್ಯಕ್ಕೆ ಬೇರೆ ಸಂದೇಶ ಹೋಗುತ್ತೆ
ಸಲಹೆ 6 : ಬೇರೆ ಕ್ಷೇತ್ರಗಳ ವಿಚಾರವೇ ಬೇಡ, ಹಾಸನದತ್ತ ಮಾತ್ರ ಚಿತ್ತ ಹರಿಸಿ
ಸಲಹೆ 7 : ಇತರ ಕ್ಷೇತ್ರಗಳ ಬಗ್ಗೆ ನಾನು, ಕುಮಾರಸ್ವಾಮಿ ಗಮನ ಹರಿಸುತ್ತೇವೆ
ಸಲಹೆ 8 : ಈ ಪರಿಷತ್ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅಪ್ರಸ್ತುತ
ಸಲಹೆ 9 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಗೆಲುವಿಗಷ್ಟೆ ಪ್ರಾಧಾನ್ಯತೆ
ಒಟ್ನಲ್ಲಿ, ಹಾಸನದಲ್ಲಿ ಹಳೇ ಸೋಲಿಗೆ ಸೇಡು ತೀರಿಸಿಕೊಳ್ಳಲು ದಳ ಪಾಳಯ ಪಣತೊಟ್ಟಿದೆ. ಖುದ್ದು ದೊಡ್ಡಗೌಡರೇ ಮೊಮ್ಮಗನ ಗೆಲುವಿಗೆ ತಂತ್ರ ಹೆಣೆದುಕೊಟ್ಟಿದ್ದು, ದಳಪತಿಗಳ ಸಲಹೆ ಸಕ್ಸಸ್ ಆಗುತ್ತಾ? ಮತ್ತೆ ದಳ ತನ್ನ ಭದ್ರಕೋಟೆಯನ್ನ ವಶಪಡಿಸಿಕೊಳ್ಳುತ್ತಾ..?
ವಿಶೇಷ ವರದಿ: ಶಿವಪ್ರಸಾದ್, ನ್ಯೂಸ್ಫಸ್ಟ್