ಮೊರ್ಬಿ ಸೇತುವೆ ದುರಂತದಲ್ಲಿ ಯಾರೊಬ್ಬರೂ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಇಲ್ಲ – No Information Now That Anyone Is Missing says Official On Gujarat bridge tragedy


ಒಟ್ಟು 135 ಜನರು ಸಾವನ್ನಪ್ಪಿದ್ದಾರೆ. ಆದರೆ ನಮ್ಮ ನಿಯಂತ್ರಣ ಕೊಠಡಿ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಜನರು ನಮಗೆ ಅಂತಹ ಎಲ್ಲಾ ಮಾಹಿತಿಯನ್ನು ನೀಡಬಹುದು

ದೆಹಲಿ: ಗುಜರಾತ್ ಸೇತುವೆ ದುರಂತದಲ್ಲಿ ಇಲ್ಲಿಯವರೆಗೆ ಯಾರೊಬ್ಬರೂ ನಾಪತ್ತೆಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ಇಂದು ಹೇಳಿದ್ದಾರೆ. ಒಟ್ಟು 135 ಜನರು ಸಾವನ್ನಪ್ಪಿದ್ದಾರೆ. ಆದರೆ ನಮ್ಮ ನಿಯಂತ್ರಣ ಕೊಠಡಿ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಜನರು ನಮಗೆ ಅಂತಹ ಎಲ್ಲಾ ಮಾಹಿತಿಯನ್ನು ನೀಡಬಹುದು, ನಾವು ಅದನ್ನು ಸರಿಯಾದ ಪ್ರಕ್ರಿಯೆಯೊಂದಿಗೆ ಅನುಸರಿಸುತ್ತೇವೆ” ಎಂದು ಮೊರ್ಬಿ ಜಿಲ್ಲಾಧಿಕಾರಿ ಜಿಟಿ ಪಾಂಡ್ಯ ಹೇಳಿದರು. ಗುಜರಾತ್‌ನ ಮೊರ್ಬಿಯಲ್ಲಿ ಶತಮಾನದಷ್ಟು ಹಳೆಯದಾದ ತೂಗುಸೇತುವೆಯನ್ನು ನವೀಕರಿಸಿದ ಗಡಿಯಾರ ತಯಾರಕ ಒರೆವಾ ಮೇಲೆನಿರ್ಲಕ್ಷ್ಯದ ಆರೋಪವನ್ನು ಹೊರಿಸಲಾಗಿದೆ. ಅದು ಪುನಃ ತೆರೆದ ನಾಲ್ಕು ದಿನಗಳ ನಂತರ ಕುಸಿದು ಬಿದ್ದಿದ್ದು ಭಾನುವಾರ ನಡೆದ ದುರಂತದಲ್ಲಿ 135 ಜನರು ಸಾವಿಗೀಡಾಗಿದ್ದಾರೆ.

ಕಾಣೆಯಾದ ಮಗುವಿಗಾಗಿ ಹುಡುಕಾಟ

135 ಜನರ ಸಾವಿಗೆ ಕಾರಣವಾದ ಗುಜರಾತ್ ಸೇತುವೆಯ ದುರಂತ ಸಂಭವಿಸಿ ನಾಲ್ಕು ದಿನಗಳ ನಂತರ, ದುರಂತದ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಕಾಣೆಯಾದ ಮಗುವಿಗಾಗಿ ಅಳುತ್ತಿದ್ದರು. ಆದರೆ ಸೈಟ್‌ನ ಅಧಿಕಾರಿಯೊಬ್ಬರು “ಯಾರೂ ಕಾಣೆಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದರು. “ನಮ್ಮ ಹುಡುಗ ಪತ್ತೆಯಾಗಿಲ್ಲ,” ಆ ವ್ಯಕ್ತಿ ಅಳುತ್ತಾ ಹೇಳಿದ್ದಾರೆ. ಅವರು ಕಾಣೆಯಾದ ತಮ್ಮ ಸೋದರಳಿಯ ಬಗ್ಗೆ ಮಾತನಾಡುತ್ತಿದ್ದರು.

ಅವರ ಸಹೋದರಿ – ಹುಡುಗನ ತಾಯಿ – ಭಾನುವಾರ ಮೋರ್ಬಿಯಲ್ಲಿ ಸೇತುವೆ ಕುಸಿದು ಸಾವನ್ನಪ್ಪಿದ್ದು ನಿನ್ನೆ ಅಂತ್ಯಕ್ರಿಯೆ ಮಾಡಲಾಯಿತು. ಮಹಿಳೆ ಮತ್ತು ಆಕೆಯ ಮಗ ಶಾಮನಗರದಿಂದ ಐತಿಹಾಸಿಕ “ತೂಗು ಸೇತುವೆ” ಯಲ್ಲಿ ವಿಹಾರಕ್ಕೆ ಬಂದಿದ್ದರು.

“ಅದು ಏನೇ ಇರಲಿ … ನಾವು ಅವನನ್ನು ಕಂಡುಕೊಂಡರೆ ನಾವು ಸ್ವಲ್ಪ ಸಮಾಧಾನ ಆಗುತ್ತಿತ್ತು ಎಂದು ಅವರು ಹೇಳಿದರು. ಪಾಂಡ್ಯ ಮತ್ತು ಇತರ ಅಧಿಕಾರಿಗಳು ನಂತರ ಆ ವ್ಯಕ್ತಿಯನ್ನು ಪಕ್ಕಕ್ಕೆ ಕರೆದೊಯ್ದು ಅವನ ಸೋದರಳಿಯನನ್ನು ಹುಡುಕಲು ಪ್ರಯತ್ನಿಸಿದರು.

ಭಾನುವಾರ, ಏಳು ತಿಂಗಳ ನವೀಕರಣದ ನಂತರ ಮತ್ತೆ ತೆರೆದ ನಾಲ್ಕು ದಿನಗಳ ನಂತರ ಸೇತುವೆ ಕುಸಿದಾಗ ಸೇತುವೆಯ ಮೇಲೆ ಸುಮಾರು 500 ಜನರು ಇದ್ದರು.

ಸುಮಾರು 47 ಮಕ್ಕಳು ಸಾವಿಗೀಡಾಗಿದ್ದು ಇಬ್ಬರು ಕಿರಿಯರು ಎಂದು ಅಧಿಕಾರಿ ಹೇಳಿದ್ದಾರೆ

ತಾಜಾ ಸುದ್ದಿ

TV9 Kannada


Leave a Reply

Your email address will not be published.