ಮೊಸಳೆಯನ್ನು ಸಾಕುಪ್ರಾಣಿಯಂತೆ ಟ್ರೀಟ್ ಮಾಡುವ ಈ ವ್ಯಕ್ತಿ ಮಕ್ಕಳಿಗೆ ತಿನ್ನಿಸುವ ಹಾಗೆ ಅದಕ್ಕೆ ಆಹಾರ ನೀಡುತ್ತಾನೆ! | In a viral video man seen feeding a crocodile like people feed their pets at home ARB


ಅವನಿಗೆ ಮೊಸಳೆಯ ಭಯವೇ ಇದ್ದಂತಿಲ್ಲ ಮಾರಾಯ್ರೇ. ಮನೆಯಲ್ಲಿ ನಾಯಿ ಬೆಕ್ಕುಗಳಿಗೆ ಊಟ ತಿನ್ನಿಸುವ ಹಾಗೆ ಅವನು ಮೊಸಳೆಗೆ ತಿನ್ನಿಸುತ್ತಿದ್ದಾನೆ. ಮಾಂಸದ ತುಂಡನ್ನು ಎಸೆದ ಬಳಿಕ ಅದರ ತಲೆಯ ಮೇಲೆ ನಯವಾಗಿ ಗುದ್ದುತ್ತಾನೆ. ಮಾಂಸ ಬಾಯಿಗೆ ಬಿದ್ದ ನಂತರ ಹಸಿವು ನೀಗಿಸಿಕೊಂಡ ಸಂತೃಪ್ತಿಯೊಂದಿಗೆ ಮೊಸಳೆ ನೀರಿನಾಳಕ್ಕೆ ವಾಪಸ್ಸು ಹೋಗುತ್ತದೆ.

ಮೊಸಳೆಯನ್ನು ಸಾಕುಪ್ರಾಣಿಯಂತೆ ಟ್ರೀಟ್ ಮಾಡುವ ಈ ವ್ಯಕ್ತಿ ಮಕ್ಕಳಿಗೆ ತಿನ್ನಿಸುವ ಹಾಗೆ ಅದಕ್ಕೆ ಆಹಾರ ನೀಡುತ್ತಾನೆ!

ಇದು ಸಾಕುಪ್ರಾಣಿಯಲ್ಲ, ಮೊಸಳೆ!

ವೈರಲ್ ವಿಡಿಯೋ: ಹಾವನ್ನು ನೋಡಿದಾಗ ಆಗುವ ಹೆದರಿಕೆಯಷ್ಟೇ ಮೊಸಳೆಗಳನ್ನು (crocodile) ನೋಡಿದಾಗಲೂ ಅಗುತ್ತದೆ. ಎಂಟೆದೆ ಬಂಟೆದೆ ಎಂಥದ್ದೇ ಎದೆಯಿದ್ದರೂ ಈ ಪ್ರಾಣಿಗಳು ಭಯ (fear) ಹುಟ್ಟಿಸುತ್ತವೆ. ಆದರೆ ಸೋಜಿಗ ಹುಟ್ಟಿಸುವ ಸಂಗತಿ ಏನು ಗೊತ್ತಾ? ಈ ಭಯಾನಕ ಪ್ರಾಣಿಗಳಿಗೆ ಹೆದರದ ಕೆಲ ಜನ ನಮ್ಮ ನಡುವೆ ಇದ್ದಾರೆ. ಒಂದಷ್ಟು ಜನ ಮತ್ತೂ ಮುಂದೆ ಹೋಗಿ ಹಾವು ಮತ್ತು ಮೊಸಳೆಗಳನ್ನು ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಾರೆ. ಇಂಥ ದೃಶ್ಯ ಸೆರೆಯಾಗಿರುವ ವಿಡಿಯೋವೊಂದು ವೈರಲ್ ಆಗಿದೆ ಮಾರಾಯ್ರೇ.

ವಿಡಿಯೋನಲ್ಲಿ ವ್ಯಕ್ತಿಯೊಬ್ಬ ಬಹಳ ಸಮೀಪದಿಂದ ಮೊಸಳೆಯೊಂದಕ್ಕೆ ಆಹಾರ ತಿನ್ನಿಸುತ್ತಿದ್ದಾನೆ. ಮೊಸಳೆಯನ್ನು ಅವನು ಅಕ್ಷರಶಃ ಸಾಕುಪ್ರಾಣಿಯೊಂದರಂತೆ ಟ್ರೀಟ್ ಮಾಡುವುದು ದಿಗಿಲು ಹುಟ್ಟಿಸುತ್ತದೆ ಮಾರಾಯ್ರೇ. ವಿಡಿಯೋನಲ್ಲಿ ಕಾಣುವ ಹಾಗೆ ಈ ಮನುಷ್ಯ ತನ್ನ ತೊಡೆಯ ನಡುವೆ ಮೊಸಳೆಯ ಕತ್ತಿನ ಭಾಗವನ್ನು ಹಿಡಿದು ಅದರ ಬಾಯೊಳಗೆ ಮಾಂಸದ ತುಂಡೊಂದನ್ನು ಹಾಕುತ್ತಾನೆ. ಹಾಗೆ ಮಾಡುವ ಮೊದಲು ಅವನು ಒಂದರೆಡು ಬಾರಿ ಮಾಂಸ ಹಾಕಿದಂತೆ ಮಾಡಿ ಅದನ್ನು ಪೀಡಿಸುತ್ತಾನೆ.

ಅವನಿಗೆ ಮೊಸಳೆಯ ಭಯವೇ ಇದ್ದಂತಿಲ್ಲ ಮಾರಾಯ್ರೇ. ಮನೆಯಲ್ಲಿ ನಾಯಿ ಬೆಕ್ಕುಗಳಿಗೆ ಊಟ ತಿನ್ನಿಸುವ ಹಾಗೆ ಅವನು ಮೊಸಳೆಗೆ ತಿನ್ನಿಸುತ್ತಿದ್ದಾನೆ. ಮಾಂಸದ ತುಂಡನ್ನು ಎಸೆದ ಬಳಿಕ ಅದರ ತಲೆಯ ಮೇಲೆ ನಯವಾಗಿ ಗುದ್ದುತ್ತಾನೆ. ಮಾಂಸ ಬಾಯಿಗೆ ಬಿದ್ದ ನಂತರ ಹಸಿವು ನೀಗಿಸಿಕೊಂಡ ಸಂತೃಪ್ತಿಯೊಂದಿಗೆ ಮೊಸಳೆ ನೀರಿನಾಳಕ್ಕೆ ವಾಪಸ್ಸು ಹೋಗುತ್ತದೆ.

ಟ್ಟಿಟರ್ ನಲ್ಲಿ ಸದರಿ ವಿಡಿಯೋವನ್ನು ದಿ ಫಿಜೆನ್ ಹೆಸರಲ್ಲಿ ಖಾತೆ ಹೊಂದಿರುವವರು ಶೇರ್ ಮಾಡಿದ್ದಾರೆ. ‘ಇದ್ಯಾವ ಬಗೆಯ ಸಾಕುಪ್ರಾಣಿ ಬ್ರೋ’ ಶೀರ್ಷಿಕೆಯೊಂದಿಗೆ ವಿಡಿಯೋ ಶೇರ್ ಆಗಿದೆ. ಈಗಾಗಲೇ 43 ಲಕ್ಷ ಜನ ನೋಡಿರುವ ಮತ್ತು 4,800 ರೀಟ್ವೀಟ್ ಗಳನ್ನು ಕಂಡಿರುವ ವಿಡಿಯೋ ವೈರಲ್ ಆಗಿದೆಯೆಂದು ಬೇರೆ ಹೇಳಬೇಕಿಲ್ಲ.

ವಿಡಿಯೋ ನೋಡಿದ ಬಳಿಕ ದಿಗ್ಭ್ರಾಂತರಾಗಿರುವ ನೆಟ್ಟಿಗರು ಸೋಜಿಗ ವ್ಯಕ್ತಪಡಿಸುತ್ತಾ ಕಾಮೆಂಟ್ ಗಳನ್ನು ಮಾಡಿದ್ದಾರೆ. ‘ ಓ ದೇವ್ರೇ, ನನಗಿದನ್ನು ನೋಡಲು ಕೂಡ ಸಾಧ್ಯವಾಗುತ್ತಿಲ್ಲ,’ ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, ’ಮೋಜಿನ ಸತ್ಯಾಂಶ: ಹೌದು, ಮೊಸಳೆಗಳು ಅತ್ಯಂತ ಅಪಾಯಕಾರಿ ಬೇಟೆಗಾರ ಪ್ರಾಣಿಗಳು. ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ ಸರೀಸೃಪ ಪ್ರಬೇಧದ ಪ್ರಾಣಿಗಳಲ್ಲೇ ಇದು ಅತ್ಯಂತ ಬುದ್ಧಿವಂತ ಪ್ರಾಣಿ. ಎಷ್ಟೋ ಜನ ಅವುಗಳನ್ನು ಸಾಕಿದ್ದಾರಾದರೂ ಅವು ನಿಸ್ಸಂದೇಹವಾಗಿ ಹಿಂಸಾ ಪ್ರವೃತ್ತಿಯ ಪ್ರಾಣಿಗಳು. ಅವುಗಳನ್ನು ಸಾಕಿ ಪಳಗಿಸುವುದು ಯಾವತ್ತಿಗೂ ಸುರಕ್ಷಿತವಲ್ಲ. ಹಾಗಾಗಿ ಇಂಥದಕ್ಕೆಲ್ಲ ನಾನು ಶಿಫಾರಸ್ಸು ಮಾಡಲಾರೆ,’ ಅಂತ ಹೇಳಿದ್ದಾರೆ.

ನಾವಂತೂ ಈ ವಿಡಿಯೋ ನೋಡಿ ಅಂತ ಶಿಫಾರಸ್ಸು ಮಾಡುತ್ತೇವೆ ಮಾರಾಯ್ರೇ!

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *