ಮೋಡಿ ಮಾಡ್ತಿವೆ ಪ್ರಭಾಸ್, ಪೂಜಾ ಹೆಗ್ಡೆ ಜೋಡಿಯಾಗಿ ‘ರಾಧೆ ಶ್ಯಾಮ್’ ಚಿತ್ರದ ಸಾಂಗ್ಸ್


ಟಾಲಿವುಡ್​ ಬಾಹುಬಲಿ ಪ್ರಭಾಸ್​ ಅಭಿನಯದ ‘ರಾಧೆ ಶ್ಯಾಮ್’ ಫೀವರ್​ ಶುರುವಾಗಿದೆ.. ಪ್ಯಾನ್​ ಇಂಡಿಯಾ ಸಿನಿಮಾವಾದ ರಾಧೆಶ್ಯಾಮ್ ಸಿನಿಮಾ ನೋಡಲು ಸಿನಿಪ್ರಿಯರು ಕಾತರದಿಂದ ಕಾಯ್ತಿದ್ದಾರೆ..ಜನವರಿ 14 ಸಂಕ್ರಾಂತಿ ಹಬ್ಬಕ್ಕೆ ರಾಧೆ ಶ್ಯಾಮ್​ ರಿಲೀಸ್​ ಆಗಲಿದ್ದು, ಈ ಗ್ಯಾಫ್​ನಲ್ಲಿ ಚಿತ್ರತಂಡ ಚಿತ್ರದ ಹಾಡೊಂದನ್ನು ಹಿಂದಿಯಲ್ಲಿ ರಿಲೀಸ್​ ಮಾಡಿದೆ.. ”ಆಶಿಕಿ ಆಯೆ ಗಯಿ” ಹಾಡು ಕಲರ್​ ಪುಲ್​ ಆಗಿ ಮೂಡಿ ಬಂದಿದ್ದು, ಈ ಹಾಡಿನಲ್ಲಿ ಪ್ರಭಾಸ್​ ಮತ್ತು ಪೂಜಾ ಹೆಗಡೆ ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ.

”ರಾಧೆ ಶ್ಯಾಮ್​” ಸಿನಿಮಾ ಪ್ರಭಾಸ್​ ವೃತ್ತಿ ಬದುಕಿನ ಬಹು ನಿರೀಕ್ಷಿತ ಸಿನಿಮಾ. ಈ ಹಿಂದೆ ಎಂದು ಕಾಣದ ರೀತಿಯಲ್ಲಿ ಪ್ರಭಾಸ್​ ಕಾಣಿಸಲಿದ್ದಾರೆ.ಕಮರ್ಷಿಯಲ್​ ಸಿನಿಮಾಗಳ ಮೂಲಕ ಸೌಂಡ್​ ಮಾಡುತ್ತಿದ್ದ ಪ್ರಭಾಸ್​ ಸ್ಮಾಲ್​ ಗ್ಯಾಪ್​ ನಂತ್ರ ”ರಾಧೆ ಶ್ಯಾಮ್​” ಮೂಲಕ ಫುಲ್​ ಟೈಮ್​ ಲವರ್​ ಬಾಯ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಟೀಸರ್​, ಪೋಸ್ಟರ್​ ಲಿರಿಕಲ್​ ಸಾಂಗ್​ಗಳ ಮೂಲಕ ಯುವ ಪ್ರೇಮಿಗಳ ಮನಸ್ಸನ್ನು ಗೆದ್ದಿರುವ ”ರಾಧೆ ಶ್ಯಾಮ್”​ ಈಗ ಒಂದೊಳ್ಳೆ ಹಾಡಿನ ಮೂಲಕ ಮತ್ತಷ್ಟು ಹತ್ತಿರವಾಗಿದ್ದಾರೆ. ”ರಾಧೆ ಶ್ಯಾಮ್ ”ಸಿನಿಮಾ 5 ಭಾಷೆಗಳಲ್ಲಿ ರಿಲೀಸ್​ ಆಗುತ್ತಿದ್ದು, ಪ್ರತಿ ಭಾಷೆಯಲ್ಲು ಹಾಡುಗಳ ಮೇಲೆ ವಿಶೇಷ ಗಮನ ಹರಿಸಿದ್ದಾರೆ ನಿರ್ದೇಶಕ ರಾಧಾಕೃಷ್ಣ. ಸದ್ಯ ಹಿಂದಿಯಲ್ಲಿ ರಿಲೀಸ್​ ಆಗಿರುವ ”ಆಶಿಕ್​ ಆಯಿ ಗಯಿ” ಹಾಡಿಗೆ ಮಿಥುನ್​ ಸಂಗೀತ ಸಂಯೋಜನೆ ನೀಡಿದ್ದು, ಸೋಶಿಯಲ್​ ಸಾಗರದಲ್ಲಿ ಹೊಸ ಟ್ರೆಂಡ್​ ಸೃಷ್ಟಿ ಮಾಡಿದೆ.

”ಆಶಿಕ್​ ಆಯಿ ಗಯಿ” ಹಾಡನಲ್ಲಿ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಸಖತ್​ ಕ್ಯೂಟ್​ ಆಗಿ ಕಾಣಿಸಿದ್ದು, ಫುಲ್​ ರೊಮ್ಯಾಂಟಿಕ್​ ಮೂಡ್​ನಲ್ಲಿದ್ದಾರೆ. ಹಾಡನಲ್ಲಿ ಪಾಜಾ ,ಮತ್ತು ಪ್ರಭಾಸ್​ ಎಷ್ಟು ಮುದ್ದಾಗಿ ಕಾಣಿಸಿದ್ದಾರೋ ಅಷ್ಟೇ ಅದ್ಭುತವಾದ, ಸುಂದರ ಲೊಕೇಶನ್​ಗಳು ಪ್ರೇಕ್ಷಕರ ಗಮನ ಸೆಳೆಯುತ್ತದೆ.ಪ್ರಭಾಸ್​ ಮತ್ತು ಪೂಜಾ ”ರಾಧೆ ಶ್ಯಾಮ”ರಾಗಿ ಪ್ರೇಕ್ಷಕರ ಮನದಲ್ಲಿ ”ಆಶಿಕ ಆಯಿ ಗಯಿ” ಅಂತ ಗುನುಗುಟ್ಟುವಂತೆ ಮಾಡಿದ್ದಾರೆ​.

”ರಾಧೆ ಶ್ಯಾಮ್” ಪ್ರಭಾಸ್​ ಸಿನಿ ಕೆರಿಯರ್​ನ ಹೊಸ ರೀತಿಯ ಸಿನಿಮಾ ಆಗಿದ್ದು, ​” ರಾಧೆ ಶ್ಯಾಮ್​” ಸಿನಿಮಾಗೆ ರಾಧಾಕೃಷ್ಣ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ”ರಾಧೆ ಶ್ಯಾಮ್” ಮುಂದಿನ ವರ್ಷ ಅಂದರೆ 2022 ರ ಜನವರಿ 14 ನೇ ತಾರೀಖು 5 ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದೆ.

News First Live Kannada


Leave a Reply

Your email address will not be published. Required fields are marked *