ಮೋಡ ಕವಿದಿದ್ದ ಬೆಳ್ಳಿ ಪರದೆಯಲ್ಲಿ ಮತ್ತೆ ಬಣ್ಣದ ಆಟ; ಗಾಂಧಿನಗರದಲ್ಲೀಗ ಹಬ್ಬದ ಸಡಗರ

ಕೊರೊನಾ ಲಾಕ್​ ಡೌನ್​ ನಂತರ ಮತ್ತೆ ಗಾಂಧಿನಗರದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ಕಳೆದ 6 ತಿಂಗಳುಗಳಿಂದ ಆಟವನ್ನು ನಿಲ್ಲಿಸಿದ್ದ ಸಿನಿಮಾ ಮಂದಿರಗಳು, ಮತ್ತೆ ಮಧುವಣಗಿತ್ತಿಯಂತೆ ಸಿಂಗಾರಗೊಂಡು ಪ್ರೇಕ್ಷಕ ಪ್ರಭುಗಳನ್ನು ಸ್ವಾಗತಿಸೋಕೆ ಸಜ್ಜಾಗಿವೆ. ಇನ್ನು ಚಿತ್ರಮಂದಿರಗಳ ಈ ವೈಭವಕ್ಕೆ ಸಾಕ್ಷಿಯಾಗಿದ್ದು ನವ ನಟ ನಿರ್ದೇಶಕ ಸೂರಜ್​ ಗೌಡ ನಿರ್ದೇಶನದ ‘ನಿನ್ನ ಸನಿಹಕೆ’ ಸಿನಿಮಾ.

ಕಳೆದ ಎರಡು ವರ್ಷಗಳಿಂದ ಕೊರೊನಾ ಹಾವಳಿಯಿಂದ ಚಿತ್ರರಂಗ ತತ್ತರಿಸಿ ಹೋಗಿದೆ. ಸಿನಿಮಾಗಳಿಲ್ಲದೇ ಚಿತ್ರಮಂದಿರಗಳು ಬರಡು ಭೂಮಿಯಂತಾಗಿವೆ. ಆದ್ರೆ ಈಗ ಈ ಬರಡು ಭೂಮಿಯಲ್ಲಿ ಭರಣಿ ಮಳೆಯಂತೆ ಫಸಲು ಕೊಡೊಕೆ, ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ನಿನ್ನ ಸನಿಹಕೆ ಚಿತ್ರದ ಮೂಲಕ ಮೋಡ ಕವಿದಿದ್ದ ಬೆಳ್ಳಿ ಪರದೆಯಲ್ಲಿ ಮತ್ತೆ ಬಣ್ಣದ ಆಟ ಶುರುವಾಗಿದೆ.

ಯೆಸ್. ಕೊರೊನಾ 2 ನೇ ಲಾಕ್​ ಡೌನ್​ ನಂತರ ಕಳೆದ ವಾರದಿಂದ ಚಿತ್ರಮಂದಿರಗಳಲ್ಲಿ 100 ಸರ್ಸೆಂಟ್ ಭರ್ತಿಗೆ ಸರ್ಕಾರ ಅನುಮತಿ ಕೊಟ್ಟಿದೆ. ಸರ್ಕಾರ ಪುಲ್​ ಹೌಸ್​ಗೆ ಅವಕಾಶ ಕೊಟ್ಟರು ಕಳೆದ ವಾರ ಹೇಳಿ ಕೊಳ್ಳುವಂತ ಸಿನಿಮಾಗಳ್ಯಾವು ತೆರೆಗೆ ಬರಲಿಲ್ಲ. ಜೊತೆಗೆ ಮುಚ್ಚಿದ್ದ ಚಿತ್ರಮಂದಿರಗಳ ಬಾಗಿಲು ಓಪನ್​ ಆಗಲಿಲ್ಲ. ಅದರೆ ಈಗ ಬರೋಬ್ಬರಿ 6 ತಿಂಗಳ ನಂತ್ರ ಮುಚ್ಚಿದ್ದ ಚಿತ್ರಮಂದಿರಗಳು ನಿನ್ನ ಸನಿಹಕೆ ಸಿನಿಮಾಗಾಗಿ ಮತ್ತೆ ಪ್ರೇಕ್ಷಕ ಪ್ರಭುಗಳನ್ನು ಸ್ವಾಗತಿಸಿವೆ.

ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಅವಕಾಶ ಕೊಟ್ಟ ಬೆನ್ನಲ್ಲೆ ನಿನ್ನ ಸನಿಹಕೆ ಚಿತ್ರ ರಾಜ್ಯಾದ್ಯಂತ ಅದ್ದೂರಿ ಯಾಗಿ ರಿಲೀಸ್​ ಆಗಿದೆ. ಕೋವಿಡ್​ ಕಾರಣ ಜನರು ಥಿಯೇಟರ್​ಗೆ ಬರ್ತಾರೋ ಇಲ್ಲವೋ ಅನ್ನೋ ಭಯದಲ್ಲಿ ಸ್ಟಾರ್​ ನಟರ ಸಿನಿಮಾಗಳು ಕಾದು ನೋಡುವ ತಂತ್ರಕ್ಕೆ ಮೊರೆಹೋದ್ರೆ. ಸಿನಿಮಾ ಚೆನ್ನಾಗಿದ್ರೆ ಕನ್ನಡಿಗರು ಕೈ ಬಿಡಲ್ಲ ಅನ್ನೋ ನಂಬಿಕೆಯಲ್ಲಿ ಸೂರಜ್​ ಗೌಡ ತಮ್ಮ ಚೊಚ್ಚಲ ನಿರ್ದೇಶನ ಸಿನಿಮಾವನ್ನು ಧೈರ್ಯವಾಗಿ ರಿಲೀಸ್​ ಮಾಡಿದ್ದಾರೆ.

ಹಾಡುಗಳಿಂದ ಪ್ರೇಕ್ಷಕರಿಗೆ ಸನಿಹವಾಗಿದ್ದ ನಿನ್ನ ಸನಿಹಕೆ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದೆ. ಮೊದಲ ದಿನ ಪ್ರಮುಖ ಚಿತ್ರಮಂದಿರದಲ್ಲಿ ತಾಂತ್ರಿಕ ತೊಂದರೆಯಾಗಿ ಚಿತ್ರ ಪ್ರದರ್ಶನವಾಗದಿದ್ರು, ಉಳಿದ ಚಿತ್ರಮಂದಿರಗಳಲ್ಲಿ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿದೆ. ಅಲ್ಲದೆ ನವರಂಗ್ ಚಿತ್ರಮಂದಿರದಲ್ಲಿ ಚಿತ್ರದ ನಾಯಕ ಸೂರಜ್​ ಹಾಗೂ ನಾಯಕಿ ಧನ್ಯಾ ರಾಮ್​ ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿ ಎಂಜಾಯ್​ ಮಾಡಿದ್ದಾರೆ.

News First Live Kannada

Leave a comment

Your email address will not be published. Required fields are marked *