Categories
News

ಮೋದಿಗೆ ಪತ್ರ ಬರೆದ ಹೆಚ್​ಡಿಕೆ.. ಈ ವಿಚಾರದಲ್ಲಿ ನೀವೇ ಮಧ್ಯೆ ಪ್ರವೇಶಿಬೇಕು ಎಂದಿದ್ದೇಕೆ..?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುವುದರ ಜೊತೆ ಜೊತೆಗೆ ಆಕ್ಸಿಜನ್ ಕೊರತೆಯೂ ಎದುರಾಗಿದೆ. ಇನ್ನು ಮೊನ್ನೆಯಷ್ಟೇ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಆಕ್ಸಿಜನ್ ಕೊರತೆ ನೀಗಿಸಲು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಪತ್ರದಲ್ಲಿ ಚಾಮರಾಜನಗರದ ಘಟನೆಯನ್ನೂ ಉಲ್ಲೇಖಿಸಿರುವ ಹೆಚ್​ಡಿಕೆ.. ಆಮ್ಲಜನಕ ಕೊರತೆಯಿಂದಾಗಿ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿವೆ.. ಈ ಬಿಕ್ಕಟ್ಟಿನ ಬಗ್ಗೆ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಮುಂದಾಗುವ ದುರಂತವನ್ನು ತಡೆಗಟ್ಟಲು ನಿಮ್ಮ ತಕ್ಷಣದ ಹಸ್ತಕ್ಷೇಪವನ್ನು ನಾನು ಬಯಸುತ್ತೇನೆ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ.

The post ಮೋದಿಗೆ ಪತ್ರ ಬರೆದ ಹೆಚ್​ಡಿಕೆ.. ಈ ವಿಚಾರದಲ್ಲಿ ನೀವೇ ಮಧ್ಯೆ ಪ್ರವೇಶಿಬೇಕು ಎಂದಿದ್ದೇಕೆ..? appeared first on News First Kannada.

Source: newsfirstlive.com

Source link

Leave a Reply