ಮೋದಿ ಕ್ಯಾಬಿನೆಟ್​​ನಲ್ಲಿ ರಾಜ್ಯದಿಂದ ಯಾರಿಗೆಲ್ಲಾ ಸಿಗುತ್ತೆ ಸ್ಥಾನ? ಇಲ್ಲಿದೆ ಸಂಭವನೀಯ ಪಟ್ಟಿ

ಮೋದಿ ಕ್ಯಾಬಿನೆಟ್​​ನಲ್ಲಿ ರಾಜ್ಯದಿಂದ ಯಾರಿಗೆಲ್ಲಾ ಸಿಗುತ್ತೆ ಸ್ಥಾನ? ಇಲ್ಲಿದೆ ಸಂಭವನೀಯ ಪಟ್ಟಿ

ಬೆಂಗಳೂರು: ಜುಲೈ 8 ರಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಈ ಹಿನ್ನೆಲೆ ರಾಜ್ಯದಿಂದ ಯಾರಿಗೆಲ್ಲಾ ಕೇಂದ್ರದಲ್ಲಿ ಸ್ಥಾನಮಾನ ಸಿಗಬಹುದು? ಸೆಂಟ್ರಲ್‌ ಕ್ಯಾಬಿನೆಟ್‌ಗೆ ಯಾರೆಲ್ಲಾ ಸೇರ್ಪಡೆಯಾಗ್ತಾರೆ ಅನ್ನೋ ಕುತೂಹಲ ಮೂಡಿದೆ. ಮೋದಿ ಕ್ಯಾಬಿನೆಟ್​ಗೆ ಸೇರಬಹುದಾದ ಕೆಲವು ನಾಯಕರ ಹೆಸರು ಕೇಳಿಬರ್ತಿದೆ.

ಸಚಿವ ಸ್ಥಾನದ ಸಂಭವನೀಯ ಪಟ್ಟಿ ನ್ಯೂಸ್‌ಫಸ್ಟ್‌‌ಗೆ ಲಭ್ಯವಾಗಿದ್ದು, ಈ ಕೆಳಕಂಡಂತಿದೆ

  • 1. ಬಿ.ವೈ.ರಾಘವೇಂದ್ರ -ಶಿವಮೊಗ್ಗ ಸಂಸದ. ವೀರಶೈವ-ಲಿಂಗಾಯತ ಸಮುದಾಯ.
  • 2. ಪಿ.ಸಿ.ಗದ್ದೀಗೌಡರ್ -ಬಾಗಲಕೋಟೆ ಸಂಸದ. ವೀರಶೈವ-ಲಿಂಗಾಯತ ಸಮುದಾಯ.
  • 3. ಶಿವಕುಮಾರ್ ಉದಾಸಿ -ಹಾವೇರಿ, ಗದಗ ಸಂಸದ. ವೀರಶೈವ-ಲಿಂಗಾಯತ ಸಮುದಾಯ.
  • 4. ಶೋಭಾ ಕರಂದ್ಲಾಜೆ -ಉಡುಪಿ- ಚಿಕ್ಕಮಗಳೂರು ಸಂಸದೆ. ಒಕ್ಕಲಿಗ ಸಮುದಾಯ.
  • 5. ಪ್ರತಾಪ್‌ಸಿಂಹ -ಮೈಸೂರು- ಕೊಡಗು ಸಂಸದ. ಒಕ್ಕಲಿಗ ಸಮುದಾಯ.
  • 6. ಡಾ.ಉಮೇಶ್ ಜಾಧವ್ -ಕಲಬುರಗಿ ಸಂಸದ. ದಲಿತ.
  • 7. ಎ.ನಾರಾಯಣಸ್ವಾಮಿ -ಚಿತ್ರದುರ್ಗ ಸಂಸದ. ದಲಿತ.

ಇದು ಸಂಭವನೀಯ ಲಿಸ್ಟ್​ ಆಗಿದ್ದು, ಅಂತಿಮವಾಗಿ ಯಾರೆಲ್ಲಾ ಮೋದಿ ಸಂಪುಟಕ್ಕೆ ಸೇರಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್: ನಾಯಕರಲ್ಲಿ ಹೆಚ್ಚಿದ ನಿರೀಕ್ಷೆ

The post ಮೋದಿ ಕ್ಯಾಬಿನೆಟ್​​ನಲ್ಲಿ ರಾಜ್ಯದಿಂದ ಯಾರಿಗೆಲ್ಲಾ ಸಿಗುತ್ತೆ ಸ್ಥಾನ? ಇಲ್ಲಿದೆ ಸಂಭವನೀಯ ಪಟ್ಟಿ appeared first on News First Kannada.

Source: newsfirstlive.com

Source link