ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ ಕಾಲೇಜುಗಳಿಗೆ ರಜೆ; ಸರ್ಕಾರದ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ಕೆಂಡಾಮಂಡಲ | DK Shivakumar is angry that given leave to colleges on the roads Modi travels


ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ ಕಾಲೇಜುಗಳಿಗೆ ರಜೆ; ಸರ್ಕಾರದ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ಕೆಂಡಾಮಂಡಲ

ಡಿಕೆ ಶಿವಕುಮಾರ್

ಅಗ್ನಿಪಥ್ ಯೋಜನೆ ತಂದಿದ್ದೀರಾ, ಆ ಮಕ್ಕಳು ಡಿಗ್ರಿ ಪಾಸ್ ಮಾಡಬಾರದಾ? ಇಷ್ಟು ವರ್ಷ ದೇಶವನ್ನು ಎಂಥೆಂತ ಸಂದರ್ಭಗಳಲ್ಲಿ ರಕ್ಷಣೆ ಮಾಡಿದ್ದಾರಲ್ಲ. ಮಂತ್ರಿಗಳು ಅವರ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳಿಸಲಿ ನೋಡೋಣ.

ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಹಿನ್ನೆಲೆ ದೇಶದ ಪ್ರಧಾನಿ ನರೇಂದ್ರ ಮೋದಿ (PM Modi) ಮೈಸೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಂಡಾಮಂಡಲರಾಗಿದ್ದು, ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು? ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ? ರೋಡಲ್ಲಿ ಏನು ಸೆಕ್ಯುರಿಟಿ ಕೊಡಬೇಕೋ ಕೊಡಿ. ರೋಡ್ ಶೋ ಮಾಡಿ ರಾಜಕೀಯ ಮಾಡಿ. ಆದರೆ ವಿದ್ಯಾರ್ಥಿ ಗಳನ್ನು ಯಾಕೆ ಅನುಮಾನದಿಂದ ನೋಡ್ತಿದ್ದೀರಾ? ನಮ್ಮ ವಿದ್ಯಾರ್ಥಿಗಳೇನು ಟೆರರಿಸ್ಟ್ಗಳಾ? ಎಂದು ಪ್ರಶ್ನಿಸಿದ್ದಾರೆ.

ಅಗ್ನಿಪಥ್ ಯೋಜನೆ ತಂದಿದ್ದೀರಾ, ಆ ಮಕ್ಕಳು ಡಿಗ್ರಿ ಪಾಸ್ ಮಾಡಬಾರದಾ? ಇಷ್ಟು ವರ್ಷ ದೇಶವನ್ನು ಎಂಥೆಂತ ಸಂದರ್ಭಗಳಲ್ಲಿ ರಕ್ಷಣೆ ಮಾಡಿದ್ದಾರಲ್ಲ. ಮಂತ್ರಿಗಳು ಅವರ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳಿಸಲಿ ನೋಡೋಣ. ಮಂತ್ರಿಗಳ ಮಕ್ಕಳು ಇಂಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕು. ಆದರೆ ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾರ್ಡ್ಗಳಾಗಬೇಕಾ? ಮೋದಿ ಬರುತ್ತಿರುವುದು ಜನರಿಗೆ ಅನುಕೂಲ ಅಲ್ಲ, ನಾಯಕರ ಅನುಕೂಲಕ್ಕೆ ಎಂದು ಡಿಕೆ ಶಿವಕುಮಾರ್ ಹೇಳಿದರು.

TV9 Kannada


Leave a Reply

Your email address will not be published.