ಮೋದಿ ಬಂದಾಗಲೆಲ್ಲ ಶುಭ್ರ ಆಕಾಶ; ಕೇದಾರನಾಥನ ಕೃಪೆ ಬಗ್ಗೆ ಪ್ರಧಾನ ಅರ್ಚಕರು ಹೇಳೋದೇನು?


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ್​ಗೆ ಪ್ರತಿಬಾರಿ ಬಂದಾಗಲೂ ನಡೆಯುತ್ತಾ ಪವಾಡ? ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಯಾಕಂದ್ರೆ ಎಷ್ಟೋ ವಿಐಪಿಗಳು ಬರಲು ಬಯಸಿದಾಗ ಅಲ್ಲಿ ಹಿಮಪಾತವಾಗುತ್ತದೆ. ಹಿಮಪಾತ, ಮಳೆ ಕಾರಣದಿಂದ ಹೆಲಿಕಾಪ್ಟರ್​ಗಳು ಇಲ್ಲಿ ಹಾರಾಟ ನಡೆಸಲ್ಲ.

Image
ಪ್ರಧಾನಿ ಮೋದಿ ಹಾಗೂ ಇನ್ನಿತರ ಹಿರಿಯರೊಂದಿಗೆ ಶ್ರೀ ವಾಗೀಶ್ ಲಿಂಗ, ಪ್ರಧಾನ ಅರ್ಚಕರು

ಆದರೆ ಪ್ರಧಾನಿ ಮೋದಿ ಬಂದಾಗಲೆಲ್ಲ ಇಲ್ಲಿ ಶುಭ್ರ ಆಕಾಶ ಇರುತ್ತದೆ. ಯಾವುದೇ ಹವಾಮಾನ ವೈಪರಿತ್ಯ ಇರೋದಿಲ್ಲ. ಇಂದೂ ಕೂಡ ಅಂಥದ್ದೇ ಒಂದು ಪವಾಡ ನಡೆದಿದೆ. ಕಳೆದ ಮೂರು ದಿನದಿಂದ ಕೇದಾರನಾಥ್​ನಲ್ಲಿ ಹಿಮಪಾತ ಸಂಭವಿಸಿದೆ. ಆದರೆ ಇಂದು ಮಾತ್ರ ಶುಭ್ರ ಆಕಾಶದಲ್ಲಿ ರವಿ ಮೂಡಿದ್ದ ಎಂದು ನ್ಯೂಸ್ ಫಸ್ಟ್​​ಗೆ ಅಲ್ಲಿನ ಪ್ರಧಾನ ಅರ್ಚಕರಾದ ವಾಗೀಶ್ ಲಿಂಗ ಶಿವಾಚಾರ್ಯರು ಮಾಹಿತಿ ನೀಡಿದ್ದಾರೆ.

ಇದು ಪವಾಡ ಅನ್ನುವುದಕ್ಕಿಂತ ಭಗವಂತನ ಕೃಪೆ ಎಂದು ಹೇಳಬಹುದು. ದೇಶದ ಪ್ರಧಾನಿ ಮೋದಿ ಅವರು ಬಂದಿದ್ದರು. ಅವರು ಬರುವಾಗ ಪ್ರಕೃತಿ ಕೂಡ ಸ್ವಾಗತ ಮಾಡುತ್ತದೆ. ಯಾವುದೇ ಕಟ್ಟ ಹವಾಮಾನ ಇರಲಿಲ್ಲ. ಭಗವಂತನ ಕೃಪೆಗೆ ಪಾತ್ರರಾದರವಿಗೆ ಮಾತ್ರ ಇದೆಲ್ಲ ದಯಪಾಲನೆ ಆಗುತ್ತದೆ.

ವಾಗೀಶ್ ಲಿಂಗ ಶಿವಾಚಾರ್ಯ, ಪ್ರಧಾನ ಅರ್ಚಕ

ಇಂದು ಆಕಾಶದಲ್ಲಿ ಬಹಳ ಸುಂದರವಾದ ವ್ಯವಸ್ಥೆ ಇತ್ತು. ಆಕಾಶದಲ್ಲಿ ರಾರಾಜಿಸುತ್ತಿದ್ದ. ಹಿಮ ಪರ್ವತಗಳ ಬೆಳ್ಳಿ ಪರೆದಗಳು ಹಳೆಯುತ್ತಿದ್ದವು. ಮೋದಿ ಅವರೇ ರುದ್ರಾಕ್ಷಿ ಸಂಕಲ್ಪ ಮಾಡಿದರು. ನಾನು ಅವರಿಗೆ ರುದ್ರಾಕ್ಷಿ ಮಾಲೆಯನ್ನ ಹಾಕಿದೆ. ಕೇದಾರನಾಥನಿಗೂ ಅವಿಗೂ ಅವಿನಾಭಾವ ಸಂಬಂಧ ಇದೆ. ಭಗವಂತ ಅವರು ಬರ್ತಾರೆ ಅಂದರೆ ಎಲ್ಲವೂ ಅನುಕೂಲ ಮಾಡಿಟ್ಟಿರುತ್ತಾನೆ ಎಂದರು.

ದೀಪಾವಳಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಕೇದಾರನಾಥ್​ಗೆ ಆಗಮಿಸಿದ್ದರು. ಈ ವೇಳೆ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನೂತನವಾಗಿ ಜೋರ್ಣೋದ್ದಾರ ಕಂಡ ಆದಿ ಗುರು ಶಂಕರಾಚಾರ್ಯರ ಸಮಾಧಿಯನ್ನ ಲೋಕಾರ್ಪಣೆ ಮಾಡಿದರು. ಅದಾದ ನಂತರ ಕೇದಾರನಾಥ ಸನ್ನಿಧಿಯ ವಿವಿಧ ಅಭಿವೃದ್ಧಿ ಕಾರ್ಯದ 400 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.

News First Live Kannada


Leave a Reply

Your email address will not be published. Required fields are marked *