ಮೋದಿ ಮೋದಿ ಅಂತಾ ಅನ್ನೋದ್ಯಾಕೆ? ಕಾಂಗ್ರೆಸ್​ ಸದಸ್ಯರಿಗೆ ಮೋದಿ ಪ್ರಶ್ನೆ


ನವದೆಹಲಿ: ಇಂದು ಸಂಸತ್ತಿನಲ್ಲಿ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ಸಂಸದರ ಮೇಲೆ ಕೆಂಡಕಾರಿದರು. ಜನ ಮೋದಿ ಮೋದಿ ಅಂತಾ ನನಗೆ ಅಂತಿರ್ತೀರಾ? ಆದರೆ, ಬೆಳಿಗ್ಗೆಯಿಂದ ಸಂಜೆಯವರೆಗೂ ನೀವ್ಯಾಕೆ ಮೋದಿ ಮೋದಿ ಅಂತೀರಾ? ಎಂದು ಪ್ರಶ್ನಿಸಿದರು. ಅಲ್ಲದೇ ಮೋದಿ ನಿಮ್ಮ ಪ್ರಾಣ ಎಂದು ನಗೆಚಟಾಕಿ ಹಾರಿಸಿದರು.

ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಗೌರವ ಸೂಚಿಸಿ ಮೋದಿಯವರು ಭಾಷಣ ಆರಂಭಿಸಿದರು. ಕೆಲವರು ಇನ್ನೂ 2014ರಲ್ಲೇ ಇದ್ದಾರೆ. 2014ರ ಬಳಿಕ ಸುಮಾರು ಚುನಾವಣೆ ಸೋತರೂ ಕಾಂಗ್ರೆಸ್ ಇನ್ನೂ ಬುದ್ಧಿ ಬಂದಿಲ್ಲ ಎಂದು ವ್ಯಂಗ್ಯವಾಡಿದರು.

24 ವರ್ಷಗಳ ಹಿಂದೆ ನಾಗಲ್ಯಾಂಡ್ ಕಾಂಗ್ರೆಸ್ಗೆ ವೋಟ್ ಹಾಕಿತ್ತು. 27 ವರ್ಷಗಳ ಹಿಂದೆ ಒಡಿಶಾ ಕಾಂಗ್ರೆಸ್ಗೆ ಮತ ನೀಡಿತ್ತು. ಗೋವಾದಲ್ಲಿ 28 ವರ್ಷಗಳ ಹಿಂದೆ ಬಹುಮತದೊಂದಿಗೆ ಗೆದ್ದಿದ್ರಿ. 1988ರಲ್ಲಿ ತ್ರಿಪುರಾದಲ್ಲಿ, 1972ರಲ್ಲಿ ಪಶ್ಚಿಮ ಬಂಗಾಳದಲ್ಲಿ ಗೆದ್ದಿಗ್ರಿ. ತೆಲಂಗಾಣ ರಚನೆ ಮಾಡಿದ್ದು ನಾವೇ ಎಂದು ಕ್ರೆಡಿಟ್ ತಗೊಂಡ್ರಿ, ಆದ್ರೂ ಜನ ನಿಮಗೆ ವೋಟ್ ಹಾಕಲಿಲ್ಲ ಎಂದು ಕಾಂಗ್ರೆಸ್ ಸಂಸದರ ಕಾಲೆಳೆದರು.

News First Live Kannada


Leave a Reply

Your email address will not be published.