ಮೋದಿ ರಾಜಕೀಯ ಸೇವೆಗೆ ಧನ್ಯವಾದ ಅರ್ಪಿಸಲು ಕಮಲ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ

ತುಮಕೂರು: ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ಇಂದು ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಂಜಿನ ಮೆರವಣಿಗೆ ಮೂಲಕ ಪ್ರಧಾನಿ ಮೋದಿಯವರ ರಾಜಕೀಯ ಸೇವೆಗೆ ಬಿಜೆಪಿ ಕಾರ್ಯಕರ್ತರು ಧನ್ಯವಾದ ಅರ್ಪಿಸಿದ್ದಾರೆ.

ಸೇವಾ ಮತ್ತು ಸಮರ್ಪಣಾ ಅಭಿಯಾನ ಹೆಸರಿನಲ್ಲಿ ಪಂಜಿನ ಮೆರವಣಿಗೆ ನಡೆಯಿತು,  ಹನುಮಂತಪುರದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಂಜು ಹಿಡಿದು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ವೇಳೆ 20 ವರ್ಷ ಸಾರ್ಥಕ ರಾಜಕೀಯ ಸೇವೆ ಸಲ್ಲಿಸಿದ ಪ್ರಧಾನಿ ಮೋದಿಗೆ ಧನ್ಯವಾದ ಎಂದು ಘೋಷಣೆ ಕೂಗಿದರು. ನಗರದ ಕೊಲ್ಲಾಪುರದಮ್ಮ ದೇವಸ್ಥಾನದವರೆಗೂ ಮೆರವಣಿಗೆ ಸಾಗಿದೆ. ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್, ಎಂಎಲ್ಸಿಗಳಾದ ನರೇಂದ್ರಬಾಬು, ಚಿದಾನಂದ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

News First Live Kannada

Leave a comment

Your email address will not be published. Required fields are marked *