ಮಂಗಳೂರು:  ಪ್ರಧಾನಿ ಮೋದಿ ವಿರುದ್ದ ಅವಹೇಳನಕಾರಿ ಫೇಸ್​​ಬುಕ್ ಪೋಸ್ಟ್ ಹಾಕಿದ ಆರೋಪದ ಮೇಲೆ ಯುವಕನೊಬ್ಬನ ವಿರುದ್ಧ ದೂರು ದಾಖಲಾಗಿದೆ.

ಕೊರೊನಾದಿಂದ ಜನರು ಬೀದಿ ಹೆಣವಾಗಲು ಪ್ರಧಾನಿ ಕಾರಣ. ಜನರು ಹೇಗೆ ಬೀದಿ ಬದಿಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೋ ಅದಕ್ಕಿಂತಲೂ ಕಠೋರವಾದ ಸಾವು ಪ್ರಧಾನಿಗೆ ದೇವರು ನೀಡಲಿ.. ಎಂದು ಯುವಕ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದ.

ಹೀಗಾಗಿ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಫಝಲ್ ಅಸೈಗೋಳಿ ಮಂಗಳೂರಿನ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ  ಕೊಣಾಜೆ  ಪೊಲೀಸರು ತನಿಖೆ ಆರಂಭಿಸಿದ್ದಾರೆ.

The post ಮೋದಿ ವಿರುದ್ದ ಅವಹೇಳನಕಾರಿ ಎಫ್​ಬಿ ಪೋಸ್ಟ್: ಯುವಕನ ವಿರುದ್ಧ ಪೊಲೀಸರಿಗೆ ದೂರು appeared first on News First Kannada.

Source: newsfirstlive.com

Source link