ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಗೋಡೆಬರಹ ಬರೆದ 17 ಮಂದಿಯನ್ನ ಬಂಧಿಸಿರುವುದಾಗಿ ದೆಹಲಿ ಪೊಲೀಸ್ ಹೇಳಿದ್ದಾರೆ. ಅಲ್ಲದೇ ಬಂಧಿತರ ವಿರುದ್ಧ 21 ಕೇಸ್​​ಗಳನ್ನು ದಾಖಲಿಸಲಾಗಿದೆ.

ದೆಹಲಿಯ ಹಲವು ಗೋಡೆಗಳ ಮೇಲೆ “ಮೋದಿ ಜೀ, ನಮ್ಮ ಮಕ್ಕಳ ವ್ಯಾಕ್ಸಿನ್​ನ್ನು ವಿದೇಶಗಳಿಗೆ ಯಾಕೆ ಕಳುಹಿಸಿದ್ರಿ.?” ಎಂದು ಬರೆಯಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಗೋಡೆ ಬರಹ ಬರೆದವರ ಬೆನ್ನುಬಿದ್ದ ಪೊಲೀಸರು ಈವರೆಗೆ 17 ಜನರನ್ನ ಬಂಧಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಆಸ್ತಿ ವಿರೂಪಗೊಳಿಸಿದ್ದು ಮತ್ತು ಸೆಕ್ಷನ್ 188 ಸೇರಿದಂತೆ ಒಟ್ಟು 21 ಕೇಸ್​​ಗಳನ್ನು ದಾಖಲಿಸಲಾಗಿದೆ.

The post ಮೋದಿ ವಿರುದ್ಧ ಗೋಡೆಬರಹ.. 17 ಜನರ ಬಂಧಿಸಿ 21 ಕೇಸ್ ಹಾಕಿದ ದೆಹಲಿ ಪೊಲೀಸ್ appeared first on News First Kannada.

Source: newsfirstlive.com

Source link