ನವದೆಹಲಿ: ಕ್ಯಾಬಿನೆಟ್​ ವಿಸ್ತರಣೆ ಅಥವಾ ಪುನರ್​ ರಚನೆ ಬಗ್ಗೆ ಮೋದಿ ಸರ್ಕಾರದ ಯಾವೊಬ್ಬ ಹಿರಿಯ ನಾಯಕರೂ ಕೂಡ ಬಾಯಿ ಬಿಟ್ಟಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ರಾಜಕೀಯ ನಾಯಕರನ್ನ ಭೇಟಿ ಮಾಡಿರೋದು, ಈ ಎಲ್ಲಾ ಉಹಾಪೋಹಗಳಿಗೆ ಮತ್ತಷ್ಟು ಹುಳಿ ಹಿಂಡಿದೆ!

ಕೆಲವು ವರದಿಗಳ ಪ್ರಕಾರ ಕ್ಯಾಬೆನೆಟ್ ಪುನರ್ ರಚನೆಯಾಗಲಿದ್ದು, ಈ ವೇಳೆ 27 ಹೊಸ ಮುಖಗಳಿಗೆ ಮೋದಿ ಸಂಪುಟ ಮಣೆ ಹಾಕಲಿದೆ ಎನ್ನಲಾಗುತ್ತಿದೆ. ಅದರಲ್ಲೂ ಹೈಪ್ರೊಫೈಲ್​​ಗಳಾದ ರಾಜ್ಯಸಭಾ ಸದಸ್ಯರಾಗಿರುವ ಜ್ಯೋತಿರಾದಿತ್ಯ ಸಿಂದಿಯಾ, ಸುಶಿಲ್ ಮೋದಿ, ನಾರಾಯಣ್ ರಾಣೆ, ಭುಪೇಂದರ್ ಯಾದವ್, ಅಸ್ಸಾಂ ಶಾಸಕ ಸರ್ಬಾನಂದ್ ಸೋನೊವಾಲ್ ನಂತಹ ಘಟಾನುಘಟಿ ನಾಯಕರು ಕೇಂದ್ರದ ಮಂತ್ರಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಸಂಭಾವ್ಯ ಸಚಿವರು ಯಾಱರು?
ಜ್ಯೋತಿರಾದಿತ್ಯ ಸಿಂದ್ಯಾ ಅವರು ಮಧ್ಯಪ್ರದೇಶ ಕಾಂಗ್ರೆಸ್​ನ ಪ್ರಭಾವಿ ನಾಯಕರಾಗಿದ್ದರು. ಇತ್ತೀಚೆಗಷ್ಟೇ ಬಿಜೆಪಿ ಪಕ್ಷವನ್ನ ಸೇರಿಕೊಂಡಿದ್ದಾರೆ. ಸುಶಿಲ್ ಮೋದಿ ಅವರು ಬಿಹಾರ ಉಪಮುಖ್ಯಮಂತ್ರಿಯಾಗಿದ್ದರು, ಸದ್ಯ ಅವರು ರಾಜ್ಯ ಸಭಾ ಸದಸ್ಯರಾಗಿದ್ದಾರೆ. ಭೂಪೇಂದರ್ ಯಾದವ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದವರು, ರಾಜಸ್ಥಾನದ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಸರ್ಬಾನಂದ್ ಸೋನವಾಲ್ ಅವರು ಅಸ್ಸಾಂನ ಸಿಎಂ ಆಗಿದ್ದವರು. ಅಲ್ಲದೇ ನಾರಾಯಣ್ ರಾಣೆ ಮಾಹಾರಾಷ್ಟ್ರದ ಸಿಎಂ ಆಗಿದ್ದರು. ಇನ್ನು ಮಹಾರಾಷ್ಟ್ರದಿಂದ ಸಂಸದ ಪ್ರಿತಮ್ ಮುಂಡೆ ಕೂಡ ನೂತನ ಕೇಂದ್ರ ಸಚಿವರಾಗುವ ಸಾಧ್ಯತೆ ಇದೆ ಅಂತಾ ಹೇಳಲಾಗಿದೆ. ಅಲ್ಲದೇ ಬಿಜೆಪಿ ಹಿರಿಯ ನಾಯಕ ಕೈಲಾಸ್ ವಿಜಯ್ ವರ್ಗಿಯಾ ಮತ್ತು ಬಿಜೆಪಿ ವಕ್ತಾರ ಸಜೈದ್ ಜಫರ್ ಹೆಸರು ಕೂಡ ತಳುಕು ಹಾಕಿಕೊಂಡಿದೆ.

ಉತ್ತರ ಪ್ರದೇಶದ ಮೇಲೆ ಕೇಂದ್ರ ನಾಯಕರ ಚಿತ್ತ
ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಹೀಗಾಗಿ ಮೋದಿ ಮತ್ತು ಅಮಿತ್ ಶಾ ಉತ್ತರ ಪ್ರದೇಶದ ನಾಯಕರ ಮೇಲೂ ಕಣ್ಣಿಟ್ಟಿದ್ದಾರೆ ಅಂತಾ ಹೇಳಲಾಗಿದೆ. ಅವರಲ್ಲಿ ಪ್ರಮುಖವಾಗಿ ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಪಂಕಜ್ ಚೌದರಿ, ವರುಣ್ ಗಾಂಧಿ ಹಾಗೂ ಅನುಪ್ರಿಯ ಪಾಟೇಲ್ ಹಾಗೂ ರಾಜ್ಯ ಸಭಾ ಸದ್ಯ ಅನಿಲ್ ಜೈನ್ ಹೆಸರು ಕೂಡ ಕೇಳಿಬರುತ್ತಿದೆ.

ಒಡಿಸ್ಸಾದ ಸಂಸದ ಅಶ್ವಿನಿ ವೈಷ್ಣವ್, ಮಾಜಿ ಸಂಸದ ಬೈಜಯಂತ್ ಪಂಡಾ ಮಾಜಿ ರೈಲ್ವೇ ಖಾತೆ ಸಚಿವ ದಿನೇಶ್ ತ್ರಿವೇದಿ ಹೆಸರು ಸಹ ರೇಸ್​​ನಲ್ಲಿದೆ. ಮೋದಿ ಸರ್ಕಾರದ ಮಾಜಿ ಕೇಂದ್ರ ಸಚಿವ ಪಿ.ಪಿ. ಚೌದರಿ ಸೇರಿದಂತೆ ರಾಜಸ್ಥಾನದಿಂದ ಸಾಕಷ್ಟು ಸಂಸದರ ಹೆಸರು ಕೂಡ ಲಿಸ್ಟ್​ನಲ್ಲಿ ಎನ್ನಲಾಗಿದೆ. ಅದರಲ್ಲಿ ಪ್ರಮುಖವಾಗಿ ರಾಜಸ್ಥಾನದ ಕಿರಿಯ ಸಂಸದ ರಾಹುಲ್ ಕಸ್ವಾನ್ ಮತ್ತು ಸಿಕಾರ್ ಸಂಸದ ಸುಮೇಧಾನಂದ ಸರಸ್ವತಿ ಅವರು ಕೇಂದ್ರದ ಮಂತ್ರಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಕರ್ನಾಟಕದಿಂದ ಯಾರಾಗ್ತಾರೆ ಮಂತ್ರಿ?
ಇನ್ನು ದೆಹಲಿಯಿಂದ ಮೀನಾಕ್ಷಿ ಲೇಖಿ ಹೆಸರು ಕೂಡ ಇದೆ. ಹಾಗೆ ಬಿಹಾರದಿಂದ ಪಶುಪತಿ ಪರಾಸ್, ಆರ್​ಸಿಪಿ ಸಿಂಗ್, ಸಂತೋಷ್ ಕುಮಾರ್ ಹೆಸರು ಕೇಳಿಬಂದ್ರೆ ಕರ್ನಾಟಕದಿಂದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಹೆಸರು ಮಾತ್ರ ಇದೆ.

ಲಡಾಖ್ ಜನಪ್ರಿಯ ಸಂಸದನಿಗೂ ಮೋದಿ ಮಣೆ
ಇನ್ನು ಗುಜರಾತ್​​ನ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಹಾಗೂ ಅಹಮದಾಬಾದ್​ ವೆಸ್ಟ್​ನ ಸಂಸದ ಕಿರಿತ್ ಸೊಲಕಿ ಹೆಸರು ಇದ್ರೆ ಹರಿಯಾಣದಿಂದ ಸಿರ್ಸಾ ಸಂಸದ ಸುನಿತಾ ಡುಗ್ಗಲ್ ಹಾಗೂ ಲಡಾಖ್​ನ ಜನಪ್ರಿಯ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಕೂಡ ಮೋದಿ ಸಂಪುಟವನ್ನ ಸೇರಿಕೊಳ್ಳಬಹುದು ಅಂತಾ ಹೇಳಲಾಗಿದೆ.

ರಾಮ್ ವಿಲಾಸ್ ಪಾಸ್ವಾನ್ ಮತ್ತು ಸುರೇಶ್ ಅಂಗಡಿ ಅಕಾಲಿಕ ನಿಧನದಿಂದಾಗಿ ಕೆಲ ಖಾತೆಗಳು ತೆರವಾಗಿವೆ. ಜೊತೆಗೆ ಅಕಾಲಿ ದಳ ಮತ್ತು ಶಿವ ಸೇನೆ ಎನ್​ಡಿಎ ಮೈತ್ರಿಯಿಂದ ಹೊರ ಬಂದಿವೆ. ಇಲ್ಲಿ ತೆರವಾಗಿರುವ ಸ್ಥಾನಗಳು ಕೂಡ ಕ್ಯಾಬಿನೆಟ್​ ರಿಶಫಲ್ ವೇಳೆ ಫುಲ್​ಫಿಲ್ ಆಗಲಿದೆ.

The post ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ? 27 ಸಂಭಾವ್ಯ ಸಚಿವರ ಲಿಸ್ಟ್​ನಲ್ಲಿ ಕರ್ನಾಟಕದಿಂದ ಯಾರಿಗೆ ಮಣೆ? appeared first on News First Kannada.

Source: newsfirstlive.com

Source link