ಚೆನ್ನೈ: ಮಗ ಎಲ್. ಮುರುಗನ್ ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವನಾಗಿದ್ದರೂ ಮಗನ ಮೇಲೆ ತಮ್ಮ ಜವಾಬ್ದಾರಿ ಹೇರದೇ ಈಗಲೂ ಅವರ ತಂದೆ-ತಾಯಿ ಕೂಲಿ ಮಾಡಿ ಬದುಕುತ್ತಿದ್ದಾರೆ.

ಹೌದು, ಇತ್ತೀಚೆಗೆ ನಡೆದ ಕೇಂದ್ರ ಕ್ಯಾಬಿನೆಟ್ ಪುನಾರಚನೆ ವೇಳೆ ತಮಿಳುನಾಡಿನ ಎಲ್. ಮುರುಗನ್ ಕೇಂದ್ರ ಸಚಿವರಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿದ್ದಾರೆ. ಎಲ್. ಮುರುಗನ್ ಅವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಜವಾಬ್ದಾರಿ ನೀಡಲಾಗಿದೆ. ತಮ್ಮ ಪುತ್ರ ಮೋದಿ ಸಂಪುಟದಲ್ಲಿ ಸಚಿವನಾಗಿದ್ದರೂ ಅವರ ತಾಯಿ ಎಲ್. ವರುದಮ್ಮಲ್ (59)ಮತ್ತು ತಂದೆ ಲೋಗನಾದನ್ ಈಗಲೂ ಸಹ ನಾವು ಕೂಲಿ ಮಾಡಿಯೇ ಬದುಕುತ್ತೇವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಗರಿ ಗರಿ ಬಟ್ಟೆ ನಾಯಕರ​ ಜೊತೆ ಇರೋ ಈ ಬರಿಗಾಲ ವ್ಯಕ್ತಿ ಯಾರು ಗೊತ್ತಾ..?

ಎಲ್. ಮುರುಗನ್, ನೂತನ ಕೇಂದ್ರ ಸಚಿವ

ನಮ್ಮ ಮಗ ಕೇಂದ್ರ ಸಚಿವನಾದರೆ ನಾವೇನು ಮಾಡೋಣ..?

ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಕೊನೂರು ಗ್ರಾಮದಲ್ಲಿ ಬೇರೊಬ್ಬರ ಕೃಷಿ ಜಮೀನಿನಲ್ಲಿ ದಿನಗೂಲಿ ಕೆಲಸ ಮಾಡುವ ಈ ದಂಪತಿ ಬೆವರನ್ನೇ ನಂಬಿ ಬದುಕಿದ್ದಾರೆ.. ಮಾಧ್ಯಮದವರು ಈ ದಂಪತಿಯನ್ನ ಸಂಪರ್ಕಿಸಿ ನಿಮ್ಮ ಪುತ್ರ ಕೇಂದ್ರ ಸಚಿವರಾಗಿ ನೇಮಕಗೊಂಡಿದ್ದಾರೆ ಎಂದಾಗ ಈ ದಂಪತಿ ಹೇಳಿದ್ದೇನು ಗೊತ್ತೇ.? ನಮ್ಮ ಮಗ ಕೇಂದ್ರ ಸಚಿವನಾದರೆ ನಾವೇನು ಮಾಡೋಣ..? ಎಂದಿದ್ದಾರೆ. ಅಲ್ಲದೇ ತಮ್ಮ ಮಗ ಸಚಿವನಾಗಿದ್ದರ ಕ್ರೆಡಿಟ್ ತೆಗೆದುಕೊಳ್ಳಲು ಬಯಸದ ದಂಪತಿ.. ನಾವು ಅವನು ದೊಡ್ಡ ವ್ಯಕ್ತಿಯಾಗಿ ಬೆಳೆಯುವಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದು ಹೇಳಿದ್ದಾರೆ.

ಅರುಂದಾತಿಯರ್ ಹೆಸರಿನ ದಲಿತ ಸಮುದಾಯದ ಈ ದಂಪತಿ ಶೀಟ್​ ಚಾವಣಿ ಹೊದಿಸಿದ ಸಣ್ಣ ಮನೆಯೊಂದರಲ್ಲೇ ಈಗಲೂ ವಾಸವಿದ್ದಾರೆ. ಈ ದಂಪತಿ ಬದುಕಿಗೆ ದಿನಗೂಲಿಯನ್ನೇ ಆಧಾರವನ್ನಾಗಿಸಿಕೊಂಡಿದ್ದು ಎಲ್ಲಿ ಕೆಲಸ ಸಿಕ್ಕರೂ ಶ್ರಮವಹಿಸಿ ಮಾಡುತ್ತಾ ಬದುಕು ಸಾಗಿಸುತ್ತಿದ್ದಾರೆ. ತಮ್ಮ ಮಗ ಕೇಂದ್ರ ಸಚಿವನಾಗಿ ನೇಮಕಗೊಂಡಾಗಲೂ ಈ ದಂಪತಿ ಹೊಲದಲ್ಲಿ ಕೂಲಿ ಮಾಡುತ್ತಿದ್ದರಂತೆ.

ಇದನ್ನೂ ಓದಿ: ತಮಿಳುನಾಡು ಬಿಜೆಪಿಗೆ ಅಣ್ಣಾಮಲೈ ಸಾರಥ್ಯ; ರಾಜ್ಯಾಧ್ಯಕ್ಷರಾಗಿ ನೇಮಕ

2020ರ ಮಾರ್ಚ್ ತಿಂಗಳಲ್ಲಿ ಎಲ್. ಮುರುಗನ್ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಾಗ ತಮ್ಮ ತಂದೆ ತಾಯಿಯನ್ನ ಭೇಟಿಯಾಗಲು ಸೆಕ್ಯೂರಿಟಿ ಸಮೇತ ತೆರಳಿದ್ದರು.. ಆದರೆ ಅವರ ತಂದೆ ತಾಯಿ ಮಗನನ್ನ ಎಂದಿನಂತೆ ಸಹಜವಾಗಿಯೇ ಮಾತನಾಡಿಸಿ ಮಗನ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರಂತೆ. ಮುರುಗನ್ ಅವರ ಕಿರಿಯ ಸಹೋದರ ಕಳೆದ 5 ವರ್ಷಗಳ ಹಿಂದೆ ತೀರಿಕೊಂಡಿದ್ದು ಆತನ ಪತ್ನಿ ಹಾಗೂ ಅವರ ಮಕ್ಕಳ ಆರೈಕೆಯನ್ನೂ ಸಹ ಇವರೇ ಮಾಡುತ್ತಿದ್ದಾರೆ. ಮುರುಗನ್ ತಮ್ಮ ತಂದೆತಾಯಿಯನ್ನ ತನ್ನೊಟ್ಟಿಗೇ ಇರುವಂತೆ ಕೇಳಿಕೊಂಡರೂ ಸಹ ಪೋಷಕರು ನಿರಾಕರಿಸಿದ್ದಾರೆ.

ನಾವು ಆಗಾಗ ಮಗನ ಮನೆಗೆ ಹೋಗುತ್ತೇವೆ.. 4 ದಿನ ಅಲ್ಲಿಯೇ ಇದ್ದು ಬರುತ್ತೇವೆ.. ಅವನ ಒತ್ತಡದ ಬದುಕಿಗೆ ನಾವು ಹೊಂದಿಕೊಳ್ಳುವುದು ಕಷ್ಟ.. ಹೀಗಾಗಿ ನಾವು ಕೋನೂರ್​ನಲ್ಲೇ ಇರಲು ಇಷ್ಟಪಡುತ್ತೇವೆ- ವರದಮ್ಮಲ್

ಕೇಂದ್ರ ಸಚಿವನಾಗಿ ನೇಮಕಗೊಂಡ ವೇಳೆ ಫೋನ್ ಮೂಲಕ ಪೋಷಕರಿಗೆ ವಿಚಾರ ತಿಳಿಸಿದಾಗ ಈ ಹಿಂದೆ ಇದ್ದ ಹುದ್ದೆಗಿಂತಲೂ ಈ ಹುದ್ದೆ ದೊಡ್ಡದಾ? ಎಂದು ಅವರ ಪೋಷಕರು ಮುಗ್ಧವಾಗಿ ಕೇಳಿದ್ದರಂತೆ. ಇನ್ನು ಇವರಿಗೆ ದಿನಗೂಲಿ ಕೆಲಸ ನೀಡುವ ಜಮೀನ್ದಾರನೂ ಸಹ ಇವರ ಮಗ ಕೇಂದ್ರ ಸಚಿವನಾದರೂ ಇವರ ನಡವಳಿಕೆಯಲ್ಲಿ ಕೊಂಚವೂ ಬದಲಾವಣೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

The post ಮೋದಿ ಸಂಪುಟದಲ್ಲಿ ಸಚಿವನಾದ ಮಗ; ಮಗನಿಗೆ ಹಾರೈಸುತ್ತಲೇ ದಿನಗೂಲಿಯೇ ದೇವರು ಎಂದ ತಂದೆ-ತಾಯಿ appeared first on News First Kannada.

Source: newsfirstlive.com

Source link